ಸ್ವಿಗ್ಗಿ, ಝೋಮ್ಯಾಟೊ ಇನ್ ಡೇಂಜರ್ 15 ದಿನ ಗಡುವು : ಕೇಂದ್ರ ಸರ್ಕಾರ

ರಾಷ್ಟ್ರೀಯ ಗ್ರಾಹಕರ ಸಹಾಯವಾಣಿಗೆ ದೂರುಗಳ ಸರಮಾಲೆ

ಬೆಂಗಳೂರು : ಆಹಾರ ಡೆಲಿವರಿ, ಪ್ಯಾಕೆಜಿಂಗ್ ವೆಚ್ಚದಲ್ಲಿ ಅಸಮಾನತೆ, ಬುಕ್ಕಿಂಗ್ ಮಾಡಿದ ಸಮಯದಲ್ಲಿ ಆಹಾರ ಪೂರೈಸದಿರುವುದು, ಹಾಗೂ ಆರ್ಡರ್ ಮಾಡಿದ ಹಾಗೂ ಪೂರೈಕೆಯಾದ ಆಹಾರದ ಪ್ರಮಾಣದಲ್ಲಿ ವ್ಯತ್ಯಾಸ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಸಾರ್ವಜನಿಕರು ಆನ್ಲೈನ್ ಆಹಾರ ಉದ್ಯಮ ಕಂಪನಿಗಳ ವಿರುದ್ಧ ಗ್ರಾಹಕರ ದೂರುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಸುಧಾರಿಸುವ ಕುರಿತು 15 ದಿನಗಳ ಒಳಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಕೇಂದ್ರ ಸರ್ಕಾರವು ಸೋಮವಾರ ಝೋಮ್ಯಾಟೊ ಹಾಗೂ ಸ್ವಿಗ್ಗಿಯಂತಹ ಕಂಪನಿಗಳಿಗೆ ನಿರ್ದೇಶನ ನೀಡಿದೆ.

ಈ ಹಿನ್ನೆಲೆಯಲ್ಲಿ ಗ್ರಾಹಕ ವ್ಯವಹಾರ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಸಭೆಯ ನಡೆಸಿ ಸ್ವಿಗ್ಗಿ, ಝೋಮ್ಯಾಟೊ ಸೇರಿದಂತೆ ಮುಂತಾದ ಆನ್‍ಲೈನ್ ಆಹಾರ ಉದ್ಯಮ ಕಂಪನಿಗಳು 15 ದಿನಗಳಲ್ಲಿ ಗ್ರಾಹಕರ ಕುಂದುಕೊರತೆ ಕಾರ್ಯವಿಧಾನ ಸುಧಾರಿಸುವ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದೆ. ಇದರೊಂದಿಗೆ ಎಲ್ಲ ಆನ್‍ಲೈನ್ ಆಹಾರ ಉದ್ಯಮಗಳು ಡೆಲಿವರಿ ವೆಚ್ಚ, ಪ್ಯಾಕೇಜಿಂಗ್ ವೆಚ್ಚ, ತೆರಿಗೆ ಮೊದಲಾದವುಗಳನ್ನು ಪ್ರತ್ಯೇಕವಾಗಿ ಬಿಲ್‍ನಲ್ಲಿ ನಮೂದಿಸಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಆನ್ಲೈನ್ ಡೆಲಿವರಿ ಕಂಪನಿಗಳ ವಿರುದ್ಧ ದೂರಗಳು : ಆಹಾರ ಡೆಲಿವರಿ ವೆಚ್ಚ, ಪ್ಯಾಕೇಜಿಂಗ್ ವೆಚ್ಚಗಳಲ್ಲಿ ಅಸಮಾನತೆ, ಆರ್ಡರ್ ಮಾಡಿದ ಹಾಗೂ ಪೂರೈಕೆಯಾದ ಆಹಾರದ ಪ್ರಮಾಣ ಹಾಗೂ ಬೆಲೆಯಲ್ಲಿ ವ್ಯತ್ಯಾಸ, ಬುಕ್ ಮಾಡಿದ ವೇಳೆ ತೋರಿಸುವ ಡೆಲಿವರಿ ಸಮಯ ಹಾಗೂ ಆಹಾರ ಪೂರೈಕೆ ಸಮಯದ ನಡುವಿನ ವ್ಯತ್ಯಾಸ ಮುಂತಾದವುಗಳ ಬಗ್ಗೆ ಕಳೆದ 12 ತಿಂಗಳಲ್ಲಿ ಸ್ವಿಗ್ಗಿ ವಿರುದ್ಧ 3,631 ಹಾಗೂ ಝೋಮ್ಯಾಟೊ ವಿರುದ್ಧ 2,828 ದೂರುಗಳನ್ನು ಸಾರ್ವಜನಿಕರು ರಾಷ್ಟ್ರೀಯ ಗ್ರಾಹಕರ ಸಹಾಯವಾಣಿಗೆ ದಾಖಲಿಸಿದ್ದಾರೆ

ಕೇಂದ್ರ ಸರ್ಕಾರದ ಸೂಚನೆ

  •  ಆನ್ಲೈನ್ ಆಹಾರ ಉದ್ಯಮ ಕಂಪನಿಗಳಿಗೆ 15 ದಿನಗಳಲ್ಲಿ ವರದಿ ಸಲ್ಲಿಸಲು ಕೇಂದ್ರದ ಸೂಚನೆ
  •  ಸ್ವಿಗ್ಗಿ, ಝೋಮ್ಯಾಟೊ ಸೇರಿದಂತೆ ಇತರೆ ಸಂಸ್ಥೆಗಳಿಗೆ 15 ದಿನಗಳ ಕಾಲಾವಕಾಶ
  •  ಗ್ರಾಹಕರ ದೂರುಗಳನ್ನು ಪರಿಷ್ಕರಿಸಲು ಯಾವ ಕ್ರಮಗಳನ್ನು ಜಾರಿ ಮಾಡುತ್ತೀರ.

Recent Articles

spot_img

Related Stories

Share via
Copy link