ಹಿರಿಯೂರು:
ನಗರದ ಹಜರತ್ ಟಿಪ್ಪುಸುಲ್ತಾನ ಸಂಘದ ವತಿಯಿಂದ ಕೊಡಗಿನ ಪ್ರವಾಹ ಸಂತ್ರಸ್ತರಿಗೆ ವಿತರಿಸುವ ಸಲುವಾಗಿ ಅಕ್ಕಿ, ಬೇಳೆ, ದಿನಸಿ ಪದಾರ್ಥಗಳು ಹಾಗೂ ಧನ ಸಹಾಯ ಮಾಡುವ ನಿಟ್ಟಿನಲ್ಲಿ ಸಂಘದ ವತಿಯಿಂದ ವಾಹನದಲ್ಲಿ ತೆಗೆದುಕೊಂಡು ಹೋಗುವ ಕಾರ್ಯಕ್ಕೆ ನಗರ ಆರಕ್ಷಕ ಠಾಣೆಯ ಆರಕ್ಷಕ ನಿರೀಕ್ಷಕರಾದ ಬಿ.ಎನ್ ಮಂಜುನಾಥ್‍ರವರು ಶುಕ್ರವಾರದಂದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಟಿಪ್ಪುಸುಲ್ತಾನ್ ಸಂಘದ ತಾಲ್ಲೂಕು ಅಧ್ಯಕ್ಷರಾದಪಿ.ಸಮೀವುಲ್ಲಾ, ಸೈಯದ್ ಮುನೀರ್ ಉಲ್ಲಾ, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಸ್.ಪಿ.ಟಿ.ದಾದಾಪೀರ್‍ರವರು ಉಪಾಧ್ಯಕ್ಷರಾದ ರಾಜಬಾಬು, ಯುವ ಘಟಕದ ಅಧ್ಯಕ್ಷರಾದ ಬಿ.ಸಿಕಂದರ್‍ಭಾಷ, ಸಂಘಟನಾ ಕಾರ್ಯದರ್ಶಿ ಶೌಕತ್‍ಖಾನ್ ಮಹಮ್ಮದ್ ಅಲಿ, ಯಕ್ಬಾಲ್, ಮಂಜುನಾಥ್, ಶಂಕರ್ ಇನ್ನು ಹಲವರು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.








