ಬೆಂಗಳೂರು:
ಜೀವನ ನಡೆಸಲು ಸಾವಿರ ದಾರಿಗಳು ಕಣ್ಣ ಮುಂದೆ ಇದ್ದರೂ ಸಹ ಕೆಲವರು ಅಯ್ಕೆ ಮಾಡುವುದು ಮಾತ್ರ ಕಳ್ಳತನ ಯಾಕೆಂದರೆ ಹಣ ಸಂಪಾದನೆಯ ಸುಲಭ ಮಾರ್ಗ ಎಂದರಿತು ಮಾಡಿ ಜೀವನ ಹಾಳು ಮಾಡಿಕೊಳ್ಳುತ್ತಾರೆ . ಅಂತಹುದೇ ಒಂದು ತಾಜ ಉದಾಹರಣೆ ಈ ಕಳ್ಳ ಪ್ರೇಮಿಗಳು ಅಡುಗೆ ಮನೆಯ ಕಿಟಕಿ ಸರಳು ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಪ್ರೇಮಿಗಳು ಸೇರಿ ಮೂವರನ್ನು ಚಾಮರಾಜನಗರ ಜಿಲ್ಲೆ ಪೊಲೀಸರು ಜೈಲಿಗಟ್ಟಿದ್ದಾರೆ.
ಭರತ್ ಹಾಗೂ ಕಾವ್ಯ, ಲೋಹಿತ್ ಕುಮಾರ್ ಬಂಧಿತ ಆರೋಪಿಗಳು. ಭರತ್ ಹಾಗೂ ಕಾವ್ಯ ಪ್ರೇಮಿಗಳಾದ್ದು, ಹಣದ ಮೋಹಕ್ಕೆ ಬಿದ್ದು ಭರತ್ ಚಿನ್ನವನ್ನು ಕದ್ದು ಕಾವ್ಯಳಿಗೆ ತಂದು ಕೊಟ್ಟಿದ್ದ. ಈ ಪ್ರೇಮಿಗಳಿಗೆ ಲೋಹಿತ್ ಎನ್ನುವಾತ ಸಹಾಯ ಮಾಡಿದ್ದು, ಸದ್ಯ ಆತನೂ ಜೈಲುಪಾಲಾಗಿದ್ದಾನೆ.
