ಹಳೆವಿದ್ಯಾರ್ಥಿಗಳ ನೂತನ ಸಂಘದ ಉದ್ಘಾಟನೆ

ಹರಿಹರ 

     ಒಂದು ಒಳ್ಳೆಯ ಕಾಲೇಜ್ ಎನ್ನಿಸಿಕೊಳ್ಳಬೇಕೆಂದರೆ ಅಲ್ಲಿ ಒಳ್ಳೆಯ ಉಪನ್ಯಾಸಕರು ಇದ್ದಾಗ ಮಾತ್ರ ಉತ್ತಮ ವಿದ್ಯಾರ್ಥಿಗಳನ್ನು ಹೊಂದಲು ಸಾಧ್ಯ ಎಂದು ಸರ್ಕಾರಿ ಪ್ರಥಮದರ್ಜೆಕಾಲೇಜುನ ಪ್ರಾಂಶುಪಾಲರಾದ ಪ್ರೊ.ಬಿ.ಸಿ ತಹಸೀಲ್ದಾರ್ ತಿಳಿಸಿದರು.ನಗರದ ಸರ್ಕಾರಿ ಪ್ರಥಮದರ್ಜೆಕಾಲೇಜು ಆವರಣದಲ್ಲಿ ಶುಕ್ರವಾರ ಹಳೆ ವಿದ್ಯಾರ್ಥಿಗಳಿಂದ ನೂತನ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಸಂಘವು ಮಹತರವಾದ ಜವಬ್ದಾರಿಯನ್ನು ಹೊಂದಿದ್ದು ಕಾಲೇಜು ಪ್ರಗತಿಕಾಣುವಲ್ಲಿ ಹಳೆ ವಿದ್ಯಾರ್ಥಿಗಳು ಸಹಕಾರ ಬಹಳ ಮುಖ್ಯವಾದದ್ದು ಎಂದು ಹೇಳಿದರು.

     ಹಿಂದೆ ನಾವು ಓದುತ್ತಿದ್ದ ಕಾಲದಲ್ಲಿ ಉತ್ತಮ ಶಿಕ್ಷಕರಿದ್ದರು. ಅವರು ನಮಗೆ ಉತ್ತಮ ಮಾರ್ಗದರ್ಶಕರೂ ಆಗಿದ್ದರು. ಮೊದಲೆಲ್ಲ ಶಾಲಾ, ಕಾಲೇಜೆಗಳಲ್ಲಿ ಮೂಲಭೂತ ಸೌಕರ್ಯಗಳು ಇರಲಿಲ್ಲ. ಅದರೆ ಈಗ ಕಾಲೇಜ್‍ಗಳಲ್ಲಿ ಆ ರೀತಿಯ ಸಮಸ್ಯೆಗಳೆಲ್ಲ ನೀಗಿದೆ, ಹೊಸರೀತಿಯ ಸಮಸ್ಯೆಗಳು ಬರುತ್ತಿದ್ದು ಅವುಗಳನ್ನು ಪರಿಹರಿಸುವಲ್ಲಿ ಹಳೆಯ ವಿದ್ಯಾರ್ಥಿಗಳು ಸಹಕಾರವು ಮುಖ್ಯವಾಗಿರುತ್ತದೆ ಎಂದರು.

       ನಂತರ ಹಳೆ ವಿದ್ಯಾರ್ಥಿ ಸಂಘದ ಸಂಚಾಲಕರಾದ ಶ್ರೀ.ಬಿ.ಕೆ.ಮಂಜುನಾಥ್ ಮಾತನಾಡಿ, ಹಳೆಯ ವಿದ್ಯಾರ್ಥಿಗಳ ಸಂಘವು ಸಮಾಜ ಗರುತಿಸುವಂತಹ ಕಾರ್ಯಗಳು , ಪ್ರಸಂಶನೀಯ ಕೆಲಸವನ್ನು ಮಾಡಿದಾಗ ಮಾತ್ರ . ಈ ಕಾರ್ಯಕ್ರಮವು ಇನ್ನು ಮುಂದುವರಿದು ದಿನದಿಂದ ದಿನಕ್ಕೆ ಬಲಪ್ರದವಾಗಿ ಸಮಾಜಸೇವೆ ಮತ್ತು ಕಾಲೇಜ್ ವಿದ್ಯಾರ್ಥಿಗಳ ಮುನ್ನಡೆಯಲ್ಲಿಯೂ ಶ್ರಮವಹಿಸುವಂತ ಕೆಲಸ ಮಾಡಬೇಕೆಂದರು.

        ಸಂಘದ ಅಧ್ಯಕ್ಷರಾದ ಶಶಿಕಾಂತ.ಎ ಮಾತನಡಿ ವಿದ್ಯಾರ್ಥಿಗಳು ನಮ್ಮ ಸಂಘದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಸಹಕಾರ ನೀಡಿಎಂದರು.ಸಂಘದ ಉಪಾಧ್ಯಕ್ಷ ವೀರೇಶ್‍ಅಜ್ಜಣ್ಣ ನವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಶಿಕ್ಷಣ ಪಡೆಯುವಲ್ಲಿ ಏನಾದರು ತೊಂದರೆಗಳಿದ್ದರೆ ಸಂಘದ ಪದಾಧಿಕಾರಿಗಳಿಗೆ ತಿಳಿಸಿದರೆ ಅವುಗಳನ್ನು ಸಾದ್ಯವಾದಷ್ಟು ಬಗೆಹರಿಸುತ್ತೇವೆ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

      ಸುರೇಶ್ ಜಿ ಎಸ್, ಶ್ರೀ ಕರಿಬಸಪ್ಪ ಟಿ, ಡಾ.ತಿಪ್ಪೇಸ್ವಾಮಿ ಎಚ್, ಕುಮಾರಿ ಶೀಲ, ಶಶಿನಾಯ್ಕ್, ಡಾ. ಕುಮಾರ್ ಎಂ ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ, ಬೋಧಕೇತರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link