ಬರಗೂರು:
ತಮ್ಮ ಸ್ವಂತ ಜಮೀನಿನಲ್ಲಿ ನೆಲಡಲೇ ಗಿಡದಲ್ಲಿ ಕಳೆ ಕೀಳುವ ವೇಳೆ ಮಹಿಳೆಯೋರ್ವಳಿಗೆ ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ಶಿರಾ ತಾಲೂಕು ಬರಗೂರು ಸಮೀಪದ ಕರೇತಿಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತಳನ್ನು ಹನುಮಕ್ಕ(60) ಎಂದು ಹೇಳಲಾಗಿದೆ. ಈಕೆಯು ಗುರುವಾರ ಬೆಳಿಗ್ಗೆ ತನ್ನ ಸ್ವಂತ ಹೊಲದಲ್ಲಿ ನಾಟಿ ಮಾಡಿದ್ದ ಕಡಲೇ ಗಿಡದಲ್ಲಿ ಕಳೆ ಕೀಳಲು ತೆರಳಿದಾಗ ವಿಷಪೂರಿತ ಹಾವು ಕಚ್ಚ್ಚಿದೆ.ಕೂಡಲೆ ಬರಗೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಶಿರಾ ಸರ್ಕಾರಿ ಆಸ್ಪತ್ರ್ರೆಗೆ ಧಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಂಜೆ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಪಟ್ಟನಾಯಕನಹಳ್ಳಿ ಪೋಲೀಸ್ ಠಾಣೆಯಲ್ಲಿ ಕೇಸು ಧಾಖಲಾಗಿದೆ. ಮೃತಳ ಪತಿ ಮುಂಚೆಯೇ ಮೃತನಾಗಿದ್ದು ಈಕೆಗೆ ಮೂರು ಮಂದಿ ಗಂಡು ಮಕ್ಕಳು ಹಾಗೂ ಮೂರು ಮಂದಿ ಹೆಣ್ಣು ಮಕ್ಕಳನ್ನು ಹೊಂದಿದ್ದು ಎಲ್ಲರಿಗೂ ವಿವಾಹವಾಗಿದೆ ಎಂದು ತಿಳಿದು ಬಂದಿದೆ. ಪಟ್ಟನಾಯಕನಹನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.