ಹಾವೇರಗೆ ಸತ್ಯ ಶೋಧನಾ ಸಮಿತಿ ಆಗಮನ

ಹಾವೇರಿ :

     ಲೋಕಸಭೆ ಹಾಗೂ ವಿಧಾನಸಭೆಯ ಚುನಾವಣೆಗಳಲ್ಲಿ ಕಾಂಗ್ರೆಸ್ ನಿರೀಕ್ಷಿತ ಫಲಿತಾಂಶ ಗಳಿಸಿದ ಹಿನ್ನಲೆಯಲ್ಲಿ ಕೆಪಿಸಿಸಿ ಸತ್ಯಶೋಧನಾ ಸಮಿತಿ ಸದಸ್ಯರು ಗುರುವಾರ ಹಾವೇರಿಗೆ ಆಗಮಿಸಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಪ್ರಮುಖ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು.

     ಸತ್ಯಶೋಧನಾ ಸಮಿತಿಯ ಸದಸ್ಯರುಗಳಾದ ವಿಪ ಮಾಜಿ ಸಭಾಪತಿಗಳಾದ ವಿ.ಆರ್.ಸುದರ್ಶನ್, ವೀರಣ್ಣ ಮತ್ತಿಕಟ್ಟಿ, ಮಾಜಿ ಸಂಸದ ಧೃವನಾರಾಯಣ್ ಅವರುಗಳು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪ್ರಮುಖರೊಂದಿಗೆ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ಬಗ್ಗೆ ಪರಾಮರ್ಶೆ ನಡೆಸಿದರು.

      ವಿಪ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ ವಿಧಾನಸಭೆ ಹಾಗೂ ಲೋಕಸಭಾ ಯ ಚುನಾವಣೆಗಳಲ್ಲಿ ಕಾಂಗ್ರೆಸ್ ನಿರೀಕ್ಷಿತ ಫಲಿತಾಂಶ ಗಳಿಸಿದ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡುರಾವ್ ಅವರ ಸತ್ಯಶೋಧನಾ ಸಮಿತಿಯನ್ನು ನೇಮಕಮಾಡಿದ್ದು, ಕೆಪಿಸಿಸಿ ಆದೇಶದಂತೆ ಕಲಬುರ್ಗಿ ವಿಭಾಗದಲ್ಲಿ ಈಗಾಗಲೇ ಸತ್ಯಶೋಧನಾ ಸಮಿತಿಯು ಮಾಹಿತಿ ಸಂಗ್ರಹಿಸಿದ್ದು, ಬೆಳಗಾವಿ ವಿಭಾಗದಲ್ಲಿಯು ಪ್ರವಾಸ ಮಾಡಿ ಮಾಹಿತಿ ಸಂಗ್ರಹಿಸಲಾಗಿದ್ದು,ಬೆಂಗಳೂರು ಹಾಗೂ ಬಳ್ಳಾರಿ ವಿಭಾಗಗಳಲ್ಲಿ ಶೀರ್ಘದಲ್ಲಿ ಮಾಹಿತಿ ಸಂಗ್ರಹಿಸಿ ಸೆಪ್ಟಂಬರ್ ಒಳಗೆ ಕೆಪಿಸಿಗೆ ಸತ್ಯಶೋಧನಾ ವರದಿ ಸಲ್ಲಿಸಲಾಗುವುದು.

ವರದಿ ಬಹರಂಗ ಪಡಿಸಲು ಅಸಾಧ್ಯ:

     ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್‍ಸೋಲಿನ ಬಗ್ಗೆ ಸತ್ಯಶೋಧನೆ ನಡೆಸಿದ್ದು, ನಾನಾ ತರಹದ ಅಭಿಪ್ರಾಯಗಳು ವ್ಯಕ್ತವಾಗಿರುತ್ತವೆ. ಈವರದಿಯನ್ನು ಬಹಿರಂಗ ಪಡಿಸಲು ಬರುವುದಿಲ್ಲ. ಈವರದಿಯನ್ನು ಕೆಪಿಸಿಗೆ ಸಲ್ಲಿಸುವುದಾಗಿ ಸುದರ್ಶನ ಸ್ಪಷ್ಟಪಡಿಸಿದರು.

ಬಿಜೆಪಿ ವಿರುದ್ಧ ಆಕ್ರೋಶ :

     ಮೌಲ್ಯಾಧಾರಿತ ರಾಜಕಾರಣದ ಬಗ್ಗೆ ಮಾತನಾಡುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಕೇಂದ್ರ ಸಚಿವರಾಗಿರುವ ಅಮಿತ್ ಶಾ ಅವರು ಈರೀತಿಯ ಪ್ರಜಾಪ್ರಭುತ್ವಕ್ಕೆ ಮಾರಕವಾಗುವ ಕೆಲಸಗಳು ಅವರದ್ದೆ ಪಕ್ಷದ ಮುಖಂಡರು ನಡೆಸಿದ್ದರು ಸಹ ಅದನ್ನು ನೋಡಿಕೊಂಡು ಸುಮ್ಮನಿರುವ ಇವರು ಮೌಲ್ಯಾಧಾರಿತ ರಾಜಕಾರಣ ಬಗ್ಗೆ ಮಾತನಾಡುವುದು ಇವರಿಗೆ ಗೌರವ ತರುವುದಿಲ್ಲ.

      ಈ ಹಿಂದೆ ಸಮ್ರಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುವುದಕ್ಕೆ ಪೂರ್ವದಲ್ಲಿ ರಾಜ್ಯ ಪಾಲರು ಬಿಜೆಪಿಯ ಯಡೆಯೂರಪ್ಪನವರನ್ನು ಸರ್ಕಾರ ರಚನೆಗೆ ಆವ್ಹಾನಿಸಿದ್ದರು, ಯಡೆಯೂರಪ್ಪನವರು ಮುಖ್ಯಮಂತ್ರಿಯಾಗಿ ಸದನಲ್ಲಿ ಬಹುಮತ ಇರದ ಕಾರಣಕ್ಕೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ನಿರ್ಗಮಿಸಿದ್ದರು, ನಂತರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿ ಉತ್ತಮ ಆಡಳಿವನ್ನು ನೀಡಿದೆ. ಇದಿಗ ಪ್ರಜಾಪ್ರಭುತ್ವಕ್ಕೆ ಮುಳುವಾಗುವ ರೀತಿಯಲ್ಲಿ ಸಂವಿಧಾನ ಬದ್ದ ಸರ್ಕಾರವನ್ನು ಅಸ್ತಿರ ಗೊಳಿಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಸಂವಿಧಾನ ಬದ್ದ ಸರ್ಕಾರವನ್ನು ದುರ್ಬಲಮಾಡುವುದು ಸರಿಯಲ್ಲ ಎಂದು ಸುದರ್ಶನ ಬಿಜೆಪಿ ನಡೆಯ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

      ಆಡಳಿತ ಪಕ್ಷದ ಶಾಸಕರಿಗೆ ಆಮೀಶ ಒಡ್ಡಿ ಅವರನ್ನು ರಾಜೀನಾಮೆ ಕೊಡಿಸುವ ಮೂಲಕ ಸರ್ಕಾರವನ್ನು ದುರ್ಭಲಗೊಳಿಸಲು ಮುಂದಾಗಿರುವ ಬಿಜೆಪಿ ಅಧಿಕಾರಕ್ಕಾಗಿ ಈಗಾಗಲೇ ಗೋವಾ, ಮಧ್ಯ ಪ್ರದೇಶ, ರಾಜಸ್ಥಾನಗಳಲ್ಲಿ ಅಡ್ಡಹಾದಿ ಹಿಡಿದೆ. ಅದನ್ನೇ ರಾಜ್ಯದಲ್ಲಿಯು ಮುಂದುವರೆಸಿದೆ. ಜನತೆ ಎಲ್ಲವನ್ನು ಗಮನಿಸುತ್ತಿದ್ದಾರೆ.

      ಈ ತರಹದ ಬೆಳವಣಿಗೆಗಳ ತರವಲ್ಲ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಮಾಜಿ ಸಚಿವರುಗಳಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ.ಹಿರೇಮಠ, ಜಿ.ಪಂ.ಸದಸ್ಯ ಕೆ.ಆರ್.ಬಸೇಗೆಣ್ಣಿ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಮೈದೂರ, ಶಹರ ಕಾಂಗ್ರೆಸ್ ಅಧ್ಯಕ್ಷ ಪಿ.ಎಸ್.ಬಿಷ್ಟನಗೌಡ್ರ,ನಗರಸಭಾ ಸದಸ್ಯ ಸಂಜೀವಕುಮಾರ ನೀರಲಗಿ, ಪ್ರಮುಖರಾದ ಜಯಶ್ರೀ ಶಿವಪುರ, ಉಮೀದ ನದಾಫ ಸೇರಿದಂತೆ ಅನೇಕರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link