ಹಾಸನ ಜಿಲ್ಲಾ ಉಸ್ತುವಾರಿ ಸಚಿವರೇ ಏನಿದು ಅಪಚಾರ

ಹಾಸನ :

             ಕಳೆದ ಕೆಲ ದಿನಗಳಿಂದ ಆಗುತ್ತಿರುವ ಮಳೆಯಿಂದ  ಆಗಿರುವ ನೆರೆಯಿಂದ ಸಿಕ್ಕಿ ನಲುಗುತ್ತಿರುವ ಸಂತ್ರಸ್ತರಿಗೆ ಮಾನ್ಯ ಲೋಕೋಪಯೋಗಿ ಸಚಿವರಾದ ಶ್ರೀ ಎಚ್ ಡಿ ರೇವಣ್ಣ ಅವರು  ಬಿಸ್ಕೇಟ್ ಪ್ಯಾಕೆಟ್ಗಳನ್ನು  ಎಸೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾಸನ ಜಿಲ್ಲೆಯ  ರಾಮನಾಥಪುರದಲ್ಲಿ  ಪ್ರವಾಹ ಸಂತ್ರಸ್ತರು ನೆರೆ ಪರಿಹಾರ ಕೇಂದ್ರದಲ್ಲಿ ಆಸರೆ ಪಡೆದಿದ್ದಾರೆ. ಅವರ ಸಮಸ್ಯೆಗಳನ್ನು ಆಲಿಸಿ, ಸಾಂತ್ವನ ನೀಡಿ, ಧೈರ್ಯ ನೀಡುವುದಕ್ಕೆಂದು ತೆರಳಿದ್ದ ಶ್ರೀ ಎಚ್.ಡಿ  ರೇವಣ್ಣ, ಸಂತ್ರಸ್ತರಿಗೆ  ಬಿಸ್ಕೇಟ್ ಗಳನ್ನು ನೀಡುವ ಬದಲು ಎಸೆದ ಘಟನೆ ನಡೆದಿದೆ.  “ಹಾಸನ ಜಿಲ್ಲಾ ಉಸ್ತುವಾರಿ ಸಚಿವರ ದುರಹಂಕಾರ ನೋಡಿ” ಎಂಬ ತಲೆ ಬರಹದ ಅಡಿಯಲ್ಲಿ ಟ್ವಿಟ್ಟರ್ ನಲ್ಲಿ ಹಲವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ, ಶ್ರೀ ರೇವಣ್ಣ ಅವರ ನಡೆಯನ್ನು ಖಂಡಿಸುತ್ತಿದ್ದಾರೆ.

           ಕರ್ನಾಟಕದ ಕೊಡಗು, ಹಾಸನ ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಸಾಕಷ್ಟು ಹಾನಿ ಸಂಭವಿಸಿದ್ದು ಸಾವಿರಾರು ಜನರು ನೆರೆ ಸಂತ್ರಸ್ತ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಕರ್ನಾಟಕದ ಮೂಲೆ ಮೂಲೆಯಿಂದ ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳು, ಹಣ ಸಹಾಯ ಹರಿದುಬರುತ್ತಿದೆ.

ವೈರಲ್ ಆದ ವಿಡಿಯೋದ ಲಿಂಕ್ ಕೆಳಗಿದೆ:

ಭಿಕ್ಷುಕರಿಗಾದ್ರು ಹತ್ರ ಕರ್ದು ಮರ್ಯಾದಿಯಿಂದ ಊಟ ಹಾಕ್ತೀವಿ, ಆದ್ರೆ ಈ ಮಂತ್ರಿ ಅನ್ನಿಸ್ಕೊಂಡವನು ಮಾತ್ರ ನೆರವು ಕೊಡ್ತಿರೋ ರೀತಿ ನೋಡಿದ್ರೆ, ನೆರೆ ಸಂತ್ರಸ್ತರ ಬಗ್ಗೆ ಸರ್ಕಾರ ನಡ್ಕೊಂಡ ರೀತಿ ಮತ್ತು ಸಮಸ್ಯೆಗಳ ಬಗ್ಗೆ ತಾವು ಅದೆಷ್ಟು ಗಂಭೀರವಾಗಿ ಇದ್ದೀವಿ ಅನ್ನೋದು ಗೊತ್ತಾಗತ್ತೆ. ಸಿಎಂ ಸಾಹೇಬ್ರೆ ಸರ್ಕಾರಕ್ಕೆ ಪರಿಹಾರ ಕೊಡೋದು ಅಷ್ಟು ಕಷ್ಟ ಆಗಿದ್ರೆ ಆ ಕೆಲಸವನ್ನ ಸಾರ್ವಜನಿಕರಿಗೆ ಮಾಡೋಕೆ ಬಿಡಿ. ಮಾನಿವೀಯತೆ ಇಲ್ಲದೆ ಇರೋ ನಿಮ್ಮ ಅಣ್ಣನನ್ನ ಅಲ್ಲಿ ಕಳುಹಿಸಿ ಸಂತ್ರಸ್ತರ ಗೇಲಿ ಮಾಡಬೇಡಿ.

Posted by Narendra Modi Fans : Karnataka on Sunday, 19 August 2018

 

Recent Articles

spot_img

Related Stories

Share via
Copy link