ಹಿರಿಯೂರು :
ನಗರದ ನೇಕ್‍ಬೀಬಿ ದರ್ಗಾ ಬಳಿ ಇರುವ ಹಿಂದೂ ಮುಸ್ಲೀಂ ಭಾವೈಕ್ಯತೆಗೆ ಹೆಸರಾಗಿರುವ ಪೀರ್ಲು ದೇವರ ದೇವಾಲಯದಲ್ಲಿ ಇಮಾಮ್ ಬಡಾ ಆಶೂಖಾನ ಕಮಿಟಿಯ ಅಧ್ಯಕ್ಷರು ಮತ್ತು ಸದಸ್ಯರ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಸಲಾಯಿತು.
ಈ ದೇವಾಲಯದ ಆವರಣದಲ್ಲಿ ಕಳೆದ ಹಲವಾರು ವರ್ಷಗಳಿಂದ ಮೊಹೋರಂ ಸಂದರ್ಭದಲ್ಲಿ ತಾನಾಗಿಯೇ ಕೆಂಡ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗಿದೆ ಮೊಹೋರಂ ಸಂದರ್ಭದಲ್ಲಿ 10 ದಿನಗಳ ಕಾಲ ಪ್ರತೀ ನಿತ್ಯ ವಿವಿಧ ಸಿಹಿ ಪದಾರ್ಥಗಳ ನೇವೇದ್ಯದೊಂದಿಗೆ ಪೀರಲು ದೇವರ ಪೂಜೆ ನಡೆಯುತ್ತಿದೆ, 20ರ ಗುರುವಾರ 9ನೇ ದಿನವಾಗಿದ್ದು ದೊಡ್ಡ ಕೆಂಡದ ಕಾರ್ಯಕ್ರಮ ಇರುತ್ತದೆ 21ರ ಶುಕ್ರವಾರ ಮೊಹೋರಂ ಕಡೆ ದಿನವಾಗಿರುತ್ತದೆ ಎಂದು ಕಮಿಟಿ ಸದಸ್ಯರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
