ಹರಪನಹಳ್ಳಿ:
2018-19ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ತಾಲ್ಲೂಕಿನಲ್ಲಿ ಬೆಂಬಲ ಬೆಲೆಗೆ ರಾಗಿ ಖರೀದಿ ಆರಂಭಿಸಲಾಗಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ಪಟ್ಟಣದ ಹಿರೇಕೆರೆ ಹತ್ತಿರ ರಾಗಿ ಖರೀದಿ ಕೇಂದ್ರ ತೆರೆಯಲಾಗಿದೆ.ರಾಗಿ ಖರೀದಿ ಕೇಂದ್ರ ತೆರೆಯಲು ಸರ್ಕಾರ 20 ದಿನಗಳ ಹಿಂದಿಯೇ ಸೂಚಿಸಿತ್ತು. ಹರಪನಹಳ್ಳಿ ತಾಲ್ಲೂಕು ಬಳ್ಳಾರಿ ಜಿಲ್ಲೆಗೆ ಸೇರಿಸುವ ಪ್ರಕ್ರಿಯೆ ನಡೆಯುತ್ತಿದ್ದರಿಂದ ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದವು. ಹೀಗಾಗಿ ಮಾ.23ರಿಂದ ಪಟ್ಟಣದಲ್ಲಿ ರಾಗಿ ಖರೀದಿಸಲು ಆರಂಭಿಸಲಾಗಿದೆ.
ಇದೇ ಮಾ.31ರಂದು ರಾಗಿ ಖರೀದಿ ಮುಕ್ತಾಯಗೊಳ್ಳಲಿದ್ದು, ನೋಂದಾಯಿತ ರೈತರು ನಿಗದಿತ ದಿನಾಂಕದೊಳಗೆ ರಾಗಿ ಮಾರಾಟ ಮಾಡಬೇಕು. ರೈತರಿಗೆ ನೀಡಿರುವ ಗುರುತಿನ ಚೀಟಿಯ ದಿನಾಂಕದಂದು ಖರೀದಿ ಕೇಂದ್ರಕ್ಕೆ ರಾಗಿ ತರಬೇಕಿದೆ. ಅಂದಿನ ಆವಕವನ್ನು ತೂಕ ಮಾಡಿ ಪಕ್ಕದ ಹರಿಹರ ತಾಲ್ಲೂಕಿನ ರಾಜ್ಯ ಉಗ್ರಾಣಕ್ಕೆ ಸರಬರಾಜು ಮಾಡಲಾಗುತ್ತಿದೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋಡಾನ್ ವ್ಯವಸ್ಥಾಪಕ ರಾಮಚಂದ್ರಪ್ಪ ತಿಳಿಸಿದ್ದಾರೆ.
ರಾಗಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ 2897 ಹಣ ನಿಗದಿಪಡಿಸಲಾಗಿದೆ. ರೈತರ ಖಾತೆಗೆ ಖರೀದಿ ಹಣ ಜಮಾ ಮಾಡಲಾಗುತ್ತಿದೆ. ಖರೀದಿ ತಡವಾಗಿದ್ದರೂ ಎಲ್ಲವೂ ಸರಾಗವಾಗಿ ನಡೆಯುತ್ತಿದೆ. ರೈತರು ಶೀಘ್ರವೇ ರಾಗಿ ಮಾರಾಟಕ್ಕೆ ಮುಂದಾಗಬೇಕು’ ಎಂದು ಅವರು ತಿಳಿಸಿದ್ದಾರೆ.