ಹಿರಿಯೂರಿನ ತಾಲ್ಲೂಕು ಕಛೇರಿಯಲ್ಲಿ ಶ್ರೀಕೃಷ್ಣಜಯಂತಿ

ಹಿರಿಯೂರು :
              ನಗರದ ತಾಲ್ಲೂಕು ಕಛೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ಶ್ರೀಕೃಷ್ಣಜಯಂತೋತ್ಸವ ಕಾರ್ಯಕ್ರಮವನ್ನು ಸಡಗರ ಹಾಗೂ ಸಂಬ್ರಮಗಳಿಂದ ಆಚರಿಸಲಾಯಿತು.
              ಈ ಸಂದರ್ಭದಲ್ಲಿ ವಾಣಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಡಿ.ಧರಣೇಂದ್ರಯ್ಯನವರು ಮಾತನಾಡಿ, ಶ್ರೀಕೃಷ್ಣ ಮಗುವಾಗಿ ಸ್ನೇಹಿತನಾಗಿ ಶಿಷ್ಯನಾಗಿ ಪ್ರೇಮಿಯಾಗಿ ಸಹೋದರನಾಗಿ ಗುರುವಾಗಿ ಜೀವನದ ವಿವಿಧ ರಂಗಗಳಲ್ಲಿ ಬೆಳೆದು ಬಂದ ಬಗ್ಗೆ ವಿವಿರವಾಗಿ ತಿಳಿಸಿದರು.
              ಪಿ.ಎಸ್.ಐ ಮಂಜುನಾಥ್ ಮಾತನಾಡಿ, ಪುಟಾಣಿ ಮಕ್ಕಳು ಪುಸ್ತಕದಲ್ಲಿ ನವಿಲುಗರಿಯನ್ನು ಶ್ರೀಕೃಷ್ಣನ ನೆನಪಿನಲ್ಲಿಟ್ಟುಕೊಂಡು ಅದಕ್ಕೆ ಗೌರವ ಭಕ್ತಿಯಿಂದ ಪೂಜಿಸುತ್ತಾ ಸಂತಸ ಪಡುವ ಬಗ್ಗೆ ತಿಳಿಸಿದರು.
              ಯಾದವ ಸಮಾಜಯ ಅಧ್ಯಕ್ಷರಾದ ರಂಗಸ್ವಾಮಿ ಮಾತನಾಡಿ ಇದೇ 8ರ ಶನಿವಾರ ಸಮಾಜದ ವತಿಯಿಂದ ಅದ್ದೂರಿಯಾಗಿ ಕೃಷ್ಣಜಯಂತಿ ಆಯೋಜಿಸಲಾಗಿದೆ ಭವ್ಯವಾದ ಮೆರವಣಿಗೆ ಇರುತ್ತದೆ ಎಲ್ಲರೂ ಭಾಗವಹಿಸಿ ಎಂದು ಮನವಿ ಮಾಡಿದರು.
                ಕಾರ್ಯಕ್ರಮದಲ್ಲಿ ಗ್ರೇಡ್ 2 ತಹಶೀಲ್ದಾರ್ ಚಂದ್ರುಕುಮಾರ್, ಸಮಾಜಕಲ್ಯಾಣಾ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ, ಉಪನೊಂದಣಾಧಿಕಾರಿ ವೆಂಕಟೇಶ್ ಯಾದವ ಸಮಾಜಯ ಅಧ್ಯಕ್ಷರಾದ ರಂಗಸ್ವಾಮಿ, ಕಾಡುಗೊಲ್ಲರ ಸಂಘದ ಅಧ್ಯಕ್ಷರಾದ ರಂಗಯ್ಯ, ರೈತಸಂಘದ ಅಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಂ.ರವೀಂದ್ರನಾಥ್, ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷರಾದ ಎಸ್.ಪಿ.ಟಿ.ದಾದಾಪೀರ್, ಬಸವರಾಜ್, ಪಿ.ಆರ್.ದಾಸ್, ಶಿವಲಿಂಗಯ್ಯ, ನಾಗರಾಜ್, ಡಾಬಾಚಿಕ್ಕಣ್ಣ, ಮೂಡಲಗಿರಿಯಪ್ಪ, ವೀರಣ್ಣ, ಕಾಂತಣ್ಣ, ಇನ್ನೂ ಅನೇಕರು ಭಾಗವಹಿಸಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap