ಹಿರಿಯೂರು :
ನಗರದ ಪಾರಿಜಾತ ಗ್ರಾಂಡ್‍ಕಲ್ಯಾಣ ಮಂಟಪದಲ್ಲಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ವತಿಯಿಂದ ಈ ಸಾಲಿನ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗಾಗಿ ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರದ ಶಾಸಕರಾದ ಶ್ರೀಮತಿ ಪೂರ್ಣಿಮಾಶ್ರೀನಿವಾಸ್ ಈ ಸಂದರ್ಭದಲ್ಲಿ ಮಾತನಾಡಿ, ಭಾರತೀಯ ರೆಡ್‍ಕ್ರಾಸ್‍ಸಂಸ್ಥೆ ವತಿಯಿಂದ ಯಾವುದೇ ಜಾತಿಬೇಧವಿಲ್ಲದೇ ತಾಲ್ಲೂಕಿನ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ತುಂಬಾ ಪ್ರಶಂಸನೀಯ ಎಂದರಲ್ಲದೆ, ಶಿಕ್ಷಣದ ಜೊತೆಗೆ ಇಂದಿನ ಮಕ್ಕಳು ನಮ್ಮ ಭಾರತೀಯ ಸಂಸ್ಕøತಿ ಸಂಸ್ಕಾರವನ್ನು ಮೈಗೊಡಿಸಿಕೊಳ್ಳಬೇಕು ಹಾಗೂ ಸಮಾಜಕ್ಕೆ ಉತ್ತಮ ಕಾರ್ಯಗಳನ್ನು ಮಾಡುವಂತಹ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ರೆಡ್‍ಕ್ರಾಸ್‍ಉಪಾಧ್ಯಕ್ಷರಾದ ಹೆಚ್.ಎಸ್.ಸುಂದರರಾಜ್ ರವರು ಮಾತನಾಡಿ ಕಳೆದ ಎಂಟು ವರ್ಷಗಳಿಂದ ಸತತವಾಗಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಾ ಬಂದಿದ್ದು ಇದಕ್ಕೆ ದಾನಿಗಳು ಮತ್ತು ಜನತೆಯ ಪ್ರೋತ್ಸಾಹ ಕಾರಣ ಎಂದರಲ್ಲದೆ ಇಂತಹ ಕಾರ್ಯಗಳಿಗೆ ರಾಜ್ಯ ರೆಡ್‍ಕ್ರಾಸ್ ಸಂಸ್ಥೆ ನಮಗೆ ಬೆಂಬಲವಾಗಿ ನಿಂತಿರುವುದು ನಿಜಕ್ಕೂ ಅಭಿನಂದನೀಯ ಸಂಗತಿ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಶಿಕಲಾರವಿಶಂಕರ್‍ರವರು ಎಲ್ಲಾ ಪೋಷಕರಿಗೂ ತಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಉತ್ತಮ ಹೆಸರು ಗಳಿಸಬೇಕು ಎಂಬ ಆಶಾಭಾವನೆ ಇರುತ್ತದೆ ಇಂತಹ ಪೋಷಕರ ಕನಸಿಗೆ ನಮ್ಮ ರೆಡ್‍ಕ್ರಾಸ್‍ಸಂಸ್ಥೆ ಸದಾ ಬೆಂಬಲವಾಗಿ ನಿಂತು ಅವರುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಮಾಜದ ಉತ್ತಮ ಪ್ರತಿಭೆಗಳನ್ನು ಗುರುತಿಸಿ ಪುರಸ್ಕಾರ ನೀಡಿ ಗೌರವಿಸುವ ಕೆಲಸಮಾಡುತ್ತಿದೆ ಎಂದರು.
ಭಾರತೀಯ ರೆಡ್‍ಕ್ರಾಸ್‍ಸಂಸ್ಥೆಯ ರಾಜ್ಯಕಾರ್ಯದರ್ಶಿ ಅಶೋಕ್‍ಕುಮಾರ್ ಮಾತನಾಡಿ, ಹಿರಿಯೂರು ರೆಡ್‍ಕ್ರಾಸ್ ಸಂಸ್ಥೆ ಉತ್ತಮ ಸದಸ್ಯರನ್ನು ಹಾಗೂ ಆಡಳಿತಮಂಡಳಿಯನ್ನು ಹೊಂದಿದ್ದು, ಉತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ರಾಜ್ಯಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದು ತಾಲ್ಲೂಕು ರೆಡ್‍ಕ್ರಾಸ್‍ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ರೆಡ್‍ಕ್ರಾಸ್ ಛೇರ್ಮನ್ ಬಿ.ಎಸ್.ನವಾಬ್‍ಸಾಬ್, ಆರ್ಯವೈಶ್ಯ ಮಂಡಳಿ ಗೌರವ ಅಧ್ಯಕ್ಷರಾದ ಕೆ.ಆರ್.ವೆಂಕಟೇಶ್, ಅಧ್ಯಕ್ಷ ಹೆಚ್.ಎಸ್.ನಾಗರಾಜ್‍ಗುಪ್ತ, ರೋಟರಿಕ್ಲಬ್ ಅಧ್ಯಕ್ಷರಾದ ಎಂ.ಎಸ್.ರಾಘವೇಂದ್ರ, ಆಡಿಟರ್ ಶ್ರಾವಣ್‍ಗುಡತೂರ್, ಎಂ.ಎನ್.ಸೌಭಾಗ್ಯವತಿದೇವರು, ಪುರುಷೋತ್ತಮ್, ಮಹಾಬಲೇಶ್ವರಶೆಟ್ಟಿ, ಆಲೂರುಹನುಮಂತರಾಯಪ್ಪ, ಪಿ.ಆರ್.ಸತೀಶ್‍ಬಾಬು, ಹೆಚ್.ಎಸ್.ರಾಧಾಕೃಷ್ಣ, ಗೀತಾರಾಧಾಕೃಷ್ಣ, ಎ.ರಾಘವೇಂದ್ರ, ಕೇಶವಮೂರ್ತಿ, ಗಜೇಂದ್ರಶರ್ಮ, ಎಸ್.ಜೋಗಪ್ಪ, ಹೆಚ್.ಪಿ.ರವೀಂದ್ರನಾಥ್, ದೇವರಾಜ್‍ಮೂರ್ತಿ, ಸಣ್ಣಭೀಮಪ್ಪ, ಹಾಗೂ ಭಾರತೀಯ ರೆಡ್‍ಕ್ರಾಸ್‍ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು. ಕಲಾಸಂಪದ ವಿದ್ಯಾರ್ಥಿನಿಯರಿಂದ ಸ್ವಾಗತ ನೃತ್ಯ ನಡೆಯಿತು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ