ಹುಬ್ಬಳ್ಳಿ ಪ್ರಕರಣ ಮೃತಳ ತಂದೆ ಹೇಳಿದ್ದೇನು…?

ಬೆಂಗಳೂರು,

   ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ್ ಹಿರೇಮಠ ಅವರ ಮಗಳು ನೇಹಾ ಹಿರೇಮಠರನ್ನು ಮುಸ್ಲಿಂ ಸಮುದಾಯದ ವ್ಯಕ್ತಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಈ ಕುರಿತು ಸ್ವತಃ ಮೃತಳ ತಂದೆ ಪ್ರತಿಕ್ರಿಯಿಸಿದ್ದಾರೆ.

   ಮಗಳು ಕಳೆದುಕೊಂಡ ತಂದೆಯ ಆಕ್ರಂದನ ಮುಗಿಲು ಮುಟ್ಟಿದೆ. ಈ ನೋವಿನಲ್ಲೇ ಮಗಳ ಕುರಿತು ಮಾತನಾಡಿರುವ ಅವರು, ನನ್ನ ಮಗಳ ಕೊಲೆ ಹಿಂದೆ ಲಬ್ ಜಿಹಾದ್ ಇದೆ. ಕೊಲೆಗಾರನ ಜೊತೆಗೆ ನಾಲ್ಲೈದು ಅದೇ ಸಮುದಾಯದವರು ಇರುತಿದ್ದರು.

   ಸರ್ಕಾರ, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ನನ್ನ ಮಗಳಿಗೆ ಆದ ಅನ್ಯಾಯ ಬೇರೆ ಹೆಣ್ಣು ಮಕ್ಕಳಿಗೆ ಆಗಬಾರದು. ನನ್ನ ಮಗಳು ಬಹಳ ಮುಗ್ಧೆ. ಯಾರೋಂದಿಗೂ ಯಾರದೊಂದಿಗೆ ಜಗಳ ಆಡುವ ಸ್ವಭಾವದವಳಲ್ಲ. ಅವಳು ಪ್ರತಿಭಾವಂತೆ ಎಂದು ತಂದೆ ನಿರಂಜನ್ ಹಿರೇಮಠ್ ತಿಳಿಸಿದ್ದಾರೆ.

    ತುಂಬಾ ದಿನದ ಹಿಂದೆ ಆ ವ್ಯಕ್ತಿ ನನ್ನ ಮಗಳ ಹಿಂದೆ ಬಿದ್ದಿದ್ದ. ಲವ್ ಮಾಡುವಂತೆ ಪಿಡಿಸಿ ಬೆದರಿಕೆ ಹಾಕಿದ್ದ. ನಾನು ಸಹ ಎಚ್ಚರಿಕೆ ಕೊಟ್ಟಿದ್ದೆ. ನನ್ನ ಮಗಳು ಆತನ ಪ್ರೀತಿಗೆ ಒಪ್ಪದೇ ನಿರಾಕರಿಸಿ ಎಲ್ಲರಂತೆ ಸುಮ್ಮನಿದ್ದಳು, ಕಾಲೇಜಿಗೆ ಹೋಗುತ್ತಿದ್ದರು. ಆತನ ಸ್ನೇಹಿತರ ಜತೆ ಮೂರು ನಾಲ್ಕು ದಿನದಿಂದ ಪ್ಲಾನ್ ಮಾಡಿದ್ದು, ಗುರುವಾರ ಬಂದು ಆರೋಪಿ ಕೊಲೆ ಮಾಡಿದ್ದಾನೆ ಎಂದು ಅವರು ವಿವರಿಸಿದರು.

   ಹುಬ್ಬಳ್ಳಿಯ ಕಿಮ್ಸ್‌ಗೆ ಭೇಟಿ ನೀಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಕಿಮ್ಸ್ ಗೆ ಭೇಟಿ ನೀಡಿ ಪ್ರಕರಣ ಮಾಹಿತಿ ಪಡೆದರು. ನೇಹಾ ಕೊಲೆ ಅತ್ಯಂತ ದುಃಖಕರ, ಆಘಾತಕರ ಘಟನೆಯಾಗಿದ್ದು, ಇದನ್ನು ಯಾರೂ ಊಹಿಸಿರಲಿಲ್ಲ.

   ನೇಹಾ ಹತ್ಯೆ ಪ್ರಕರಣದಲ್ಲಿ ಆ ಮಗುವಿನ ತಪ್ಪಿಲ್ಲ. ತಮ್ಮ ಮಕ್ಕಳು ಎಷ್ಟು ಸುರಕ್ಷರಿದ್ದಾರೆ ಅನ್ನೋ ಆತಂಕ ಪಾಲಕರಿಗೆ ಶುರುವಾಗಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಒಂದು ಟ್ವೀಟ್ ಮಾಡಿದರೆ ಅವರ ಜವಾಬ್ದಾರಿ ಮುಗಿದಂತಲ್ಲ. ಅವರು ಹಾಗೇ ಅಂದುಕೊಂಡಿದ್ದಾರೆ. ಮೊದಲು ಇಂಥಹ ಶಕ್ತಿಗಳಿಗೆ ಬೆಂಬಲ ಕೊಡುವುದನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.

   ಕಾಲೇಜು ಕ್ಯಾಂಪಸ್‌ನಲ್ಲಿ, ಅದೂ ಹಾಡಹಗಲೇ ಘಟನೆ ಹುಬ್ಬಳ್ಳಿಯಲ್ಲಂತೂ ನಡೆದಿದ್ದಿಲ್ಲ .ಇದು ಸಮಾಜದಲ್ಲಿ ಆಗುತ್ತಿರೋ ಕ್ಷೋಭೆಯನ್ನು ಎತ್ತಿ ತೋರಿಸುತ್ತದೆ. ಇಂಥ ಘಟನೆಗಳಿಂದ ಸಮಾಜದಲ್ಲಿ ಸಾಮರಸ್ಯದ ಕೊರತೆಯಾಗುತ್ತದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು. ಎಲ್ಲ ಕಡೆ ಮಾಸ್ ಮರ್ಡರ್ ಕಾಮನ್ ಆಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

   ಗದಗ ನಲ್ಲಿ ಗುರುವಾರ ನಾಲ್ವರ ಕೊಲೆಯಾಗಿದೆ. ಬೆಂಗಳೂರಿನಲ್ಲಿಯೂ ನಿನ್ನೆ ಮಾಸ್ ಮರ್ಡರ್ ಆಗಿದೆ. ಹಲವಾರು ತಿಂಗಳಿನಿಂದ ಇಂಥ ಘಟನೆ ನಡೆಯುತ್ತಲೇ ಇವೆ. ರೌಡಿಗಳಿಗೆ ಪೊಲೀಸರ ಹೆದರಿಕೆ ಇಲ್ಲದಂತಾಗಿದೆ. ರೌಡಿಗಳಿಗೆ, ಗೂಂಡಾಗಳಿಗೆ ರಾಜ ಮರ್ಯಾದೆ ಸಿಗುತ್ತಿದೆ. ನಾವು ಏನು ಮಾಡಿದರೂ ದಕ್ಕಿಸಿಕೊಳ್ಳಬಹುದು ಎಂಬಂತಾಗಿದೆ ಎಂದರು.

    ಈ ಘಟನೆಯ ಉನ್ನತ ಮಟ್ಟದ ತನಿಖೆಯಾಗಿಬೇಕು. ಇದು ಸ್ಥಳೀಯ ಪೊಲೀಸರಿಂದ ಅಂತಹ ತನಿಖೆ ಆಗುವುದಿಲ್ಲ. ಪೊಲೀಸರು ನಿಷ್ಕ್ರಿಯ ಆಗಿದ್ದಾರೆ ಅದಕ್ಕಾಗಿ ಒಂದು ಎಸ್ ಐ ಟಿ ಮಾಡಬೇಕು. ರಾಜ್ಯದಲ್ಲಿ ರಾತ್ರೋರಾತ್ರಿ ನಾಲ್ಕಾರು ಜನರು ಮರ್ಡರ್ ಆಗುತ್ತಾರೆ ಅಂದರೆ ಏನಿದು ರಾಜ್ಯದ ಪರಿಸ್ಥಿತಿ? ಎಂದು ಪ್ರಶ್ನಿಸಿದರು.

   ಪೊಲೀಸರು ಸರಿಯಾಗಿ ಕಾರ್ಯ ನಿರ್ವಹಿಸಬೇಕು. ಇಲ್ಲವಾದರೆ ಕರ್ನಾಟಕ ಬಿಹಾರ್ ರಾಜ್ಯವಾಗುತ್ತದೆ ಎಂದು ಎಚ್ಚರಿಸಿದರು

 

Recent Articles

spot_img

Related Stories

Share via
Copy link