ಹುಳಿಯಾರು:
ಹುಳಿಯರು ಸೇರಿದಂತೆ ಹಲವು ಊರುಗಳಲ್ಲಿ ಸೆ.7 ರ ಶುಕ್ರವಾರ ಬೆಳಗ್ಗೆ 10 ರಿಂದ ಸಂಜೆ 6 ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಫ್ 5 ಪೀಡರ್‍ನ ಕೋರಗೆರೆ ಮಾರ್ಗದ ಲಿಂಕ್ ಲೈನ್ ಕಾಮಗಾರಿ ಕೆಲಸ (ಎಂಯುಎಸ್‍ಎಸ್ ಹತ್ತಿರ) ಪೂರ್ಣಗೊಳಿಸಲು ಮಾರ್ಗ ಮುಕ್ತತೆ ಪಡೆಯಬೇಕಾಗಿರುವುದರಿಂದ ಈ ಕೆಳಕಂಡ ಮಾರ್ಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ವ್ಯತ್ಯಯ ಉಂಟಾಗುವ ಪೂರಕಗಳ ಹೆಸರು ಎಫ್ 2 ಹುಳಿಯಾರು ಟೌನ್, ಎಫ್ 11 ಭೈರಾಪುರ ಎನ್‍ಜೆವೈ, ಎಫ್ 12 ಹೊಸಹಳ್ಳಿ ಎಫ್ 13 ಸಿಂಗಾಪುರ ಎನ್‍ವೈಜೆ ಎಫ್ 14 ಪುರದಮಠ ಎನ್‍ವೈಜೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಊರುಗಳಲ್ಲೂ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಗ್ರಾಹಕರು ಎಂದಿನಂತೆ ಸಹಕರಿಸಬೇಕಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿದ್ಯುತ್ ) ಎನ್. ಬಿ .ಗವಿರಂಗಯ್ಯ ರವರ ಸೂಚನೆಯ ಮೇರೆಗೆ ಹುಳಿಯಾರು ಬೆಸ್ಕಾಂ ಶಾಖಾಧಿಕಾರಿಯಾದ ಉಮೇಶ್ ನಾಯ್ಕ ಕೋರಿದ್ದಾರೆ.