ಹುಳಿಯಾರು:
ಹುಳಿಯಾರು ಪಟ್ಟಣದ ಮದೀನ ಮಸೀದಿಯ ಎದುರಿನ ಎರಡು ಜೋಡಿ ಮನೆಗಳಲ್ಲಿ ಕಳ್ಳತನ ನಡೆದಿದೆ.
ಇಲ್ಲಿನ ಆಸೀಪ್ ಮತ್ತು ದಸ್ತುಗಿರಿ ಎನ್ನುವವರ ಮನೆಯಲ್ಲಿ ಕಳ್ಳತನ ನಡೆದಿದ್ದರೂ ಈ ಎರಡೂ ಮನೆಯಲ್ಲಿ ಯಾರೊಬ್ಬರೂ ಇಲ್ಲದಿರುವುದನ್ನು ಅರಿತ ಕಳ್ಳರು ಮನೆಯ ಬೀಗ ಮುರಿದು ಒಳ ನುಗ್ಗಿ ಬೀರು ಹೊಡೆದು ಕಳ್ಳತನ ಮಾಡಿದ್ದಾರೆ.
ದಸ್ತುಗಿರಿ ಅವರ ಮನೆಯಲ್ಲಿ ಎಲ್ಲರೂ ಆಸ್ಪತ್ರೆಗೆ ಹೋಗಿದ್ದು ಈ ಮನೆ ನುಗ್ಗಿದ ಕಳ್ಳರು 20 ಗ್ರಾಂನ 2 ನಕ್ಲೇಸ್ ಹಾಗೂ 70 ಸಾವಿರ ರೂ. ನಗದು ಕಳುವಾಗಿದ್ದರೆ, ಆಸೀಪ್ ಎನ್ನುವವರ ಮನೆಯಲ್ಲಿ ಎಲ್ಲರೂ ಮದುವೆಗೆ ಹೋಗಿದ್ದು ಈ ಮನೆಯಲ್ಲಿದ್ದ 80 ಸಾವಿರ ರೂ. ನಗದು ದೋಚಿ ಕಳ್ಳರು ಪರಾರಿಯಾಗಿದ್ದಾರೆ.
ಹುಳಿಯಾರು ಪಿಎಸ್‍ಐ ವಿಜಯಕುಮಾರ್ ಅವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡಿ ಕಳ್ಳತನದ ಮಾಹಿತಿ ಪಡೆದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








