ಹುಳಿಯಾರು:
ಹಬ್ಬದಷ್ಟೆ ಪ್ರಾಮುಖ್ಯತೆ ಮತದಾನಕ್ಕೆ ನೀಡಿ
ಹಬ್ಬ ಹರಿದಿನ, ಜಾತ್ರೆ, ಉತ್ಸವ, ಕುಟುಂಬ ಸಮಾರಂಭಗಳಿಗೆ ನೀಡುವ ಪ್ರಾಮುಖ್ಯತೆಯನ್ನು ಮತದಾನಕ್ಕೂ ನೀಡಬೇಕು. ಮತದಾನ ರಾಷ್ಟ್ರದ ಭವಿಷ್ಯದ ನಿರ್ಮಾಣಕ್ಕೆ ನೀಡುವ ಕೊಡುಗೆಯಾಗಿದೆ.ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸದೆ ದೂರ ಉಳಿಯುವುದು ಸರಿಯಲ್ಲ. ಚುನಾವಣೆ ದಿನದ ರಜೆಯನ್ನು ಸ್ವಂತ ಕಾರ್ಯಕ್ಕೆ ಬಳಸಿಕೊಳ್ಳದೆ ಮತದಾನ ಮಾಡಬೇಕು. ಮತದಾನ ಮಾಡಿದಾಗ ಮಾತ್ರ ನೈತಿಕತೆ ಉಳಿಯುತ್ತದೆ.ಗಾಳಿದಿಬ್ಬಜಯಣ್ಣ, ಅಧ್ಯಕ್ಷರು, ಛಾಯಗ್ರಾಹಕರ ಸಂಘ, ಹುಳಿಯಾರು
ಒಂದು ಮತ ನಿರ್ಣಾಯಕ ಆಗಬಹುದು
ನಮ್ಮ ಒಂದು ಮತ ಕೆಲ ಸಂದರ್ಭದಲ್ಲಿ ನಿರ್ಣಾಯಕವಾಗಲೂಬಹುದು. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ, ಭಯ–ಅಂಜಿಕೆಗಳಿಗೆ, ಆಣೆ ಪ್ರಮಾಣಗಳಿಗೆ ಒಳಗಾಗದೆ ನಮ್ಮ ಮತವನ್ನು ನಿರ್ಭಯವಾಗಿ ಚಲಾಯಿಸೋಣ.ಪ್ರಾಮಾಣಿಕ ವ್ಯಕ್ತಿ ಆಯ್ಕೆಯಾದರೆ, ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಜನತೆಗಾಗಿ ಸೇವಾ ಮನೋಭಾವದಿಂದ ದುಡಿಯುತ್ತಾನೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಪ್ರಾಮಾಣಿಕರಾಗಿ ಮತಹಾಕಬೇಕು. ಎಂ.ಆರ್.ಪ್ರಭಾಕರ್ ಗುಪ್ತಾ, ಸಿಇಓ, ಕನ್ನಿಕಾಪರಮೇಶ್ವರಿ ಸಹಕಾರ ಸಂಘ, ಹುಳಿಯಾರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
