ನವದೆಹಲಿ
ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಹ ಪ್ರಯಾಣಿಕರೊಬ್ಬರು ತನ್ನ ಬ್ಯಾಗ್ ನಲ್ಲಿ ಬಾಂಬ್ ಇರುವ ಬಗ್ಗೆ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡಿರುವುದಾಗಿ ಪ್ರಯಾಣಿಕರೊಬ್ಬರು ಹೇಳಿದ ನಂತರ ದೆಹಲಿಯಿಂದ ಮುಂಬೈಗೆ ತೆರಳುವ ವಿಸ್ತಾರ ಏರ್ ಲೈನ್ಸ್ ವಿಮಾನ ಹಾರಾಟದಲ್ಲಿ ಎರಡು ಗಂಟೆಗಳ ಕಾಲ ವಿಳಂಬವಾಯಿತು. ನಂತರ ಅದು ಸುಳ್ಳು ಎಂದು ಘೋಷಿಸಲಾಯಿತು ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.
ಬ್ಯಾಗ್ ನಲ್ಲಿರುವ ಬಾಂಬ್ ನ್ನು ಸಿಐಎಸ್ ಎಫ್ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ ಎಂದು ಪುರುಷ ಪ್ರಯಾಣಿಕರೊಬ್ಬರು ಫೋನ್ ನಲ್ಲಿ ಹೇಳುತ್ತಿದ್ದನ್ನು ಕೇಳಿಸಿಕೊಂಡಿದ್ದಾಗಿ ಮಹಿಳಾ ಪ್ರಯಾಣಿಕರೊಬ್ಬರು ವಿಮಾನದ ಸಿಬ್ಬಂದಿ ವರದಿ ಮಾಡಿದ್ದಾಗಿ ಮೂಲಗಳು ತಿಳಿಸಿವೆ. ದೇಶದಲ್ಲಿನ 66 ನಾಗರಿಕ ವಿಮಾನ ನಿಲ್ದಾಣಗಳಿಗೆ ಬೆದರಿಕೆ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಪ್ರಯಾಣಿಕರು ಮತ್ತು ಅವರ ಲಗ್ಗೇಜ್ ನ್ನು ತಪಾಸಣೆ ಮಾಡುತ್ತಾರೆ.
![](https://prajapragathi.com/wp-content/uploads/2023/06/vistara.jpg)