ಹೂಗಳ ದರ ಗಗನಕ್ಕೆ

ಚಿಕ್ಕನಾಯಕನಹಳ್ಳಿ

                   ಶುಕ್ರವಾರ ನಡೆಯುವ ವರಮಹಾಲಕ್ಷ್ಮೀ ಹಬ್ಬಕ್ಕೆ ವ್ಯಾಪಾರ ಭರಾಟೆಯಿಂದ ನಡೆಯುತ್ತಿದ್ದು ಇದರಿಂದ ಹೂವು, ಹಣ್ಣಿನ ಬೆಲೆಗಳು ಗಗನಕ್ಕೇರಿದ್ದವು.

                   ಪಟ್ಟಣದ ಬಿ.ಹೆಚ್.ರಸ್ತೆ ಬಳಿ ಹೂವಿನ ವ್ಯಾಪಾರ ಭರದಿಂದ ನಡೆದಿದ್ದು ಸೇವಂತಿಗೆ ಮಾರೊಂದಕ್ಕೆ 150ರಿಂದ 200ರೂ, ಕನಕಾಂಬರ 100, ಕಾಕಡ-100, ತಾವರೆಹೂ 40-50, ಮಲ್ಲಿಗೆ 150ರೂ ಮಾರೊಂದಕ್ಕೆ, ತುಳಸಿ-50ರೂ, ಕಣಗಲಹೂ -70ರೂ ಮಾರು, ಬಿಡಿಹೂ 250ಗ್ರಾಂ ಗೆ 100ರೂ, ಬಾಳೆಹಣ್ಣು ಕೆ.ಜಿಗೆ 80ರೂ ಕೆ.ಜಿ, ಸೇಬು 150ರೂ, ಮೋಸಂಬಿ-80ರೂ, ಸೀಬೆಹಣ್ಣು 50ರೂ ಮಾರಾಟವಾಗುತ್ತಿದ್ದು ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.

                     ಹಬ್ಬ ಹರಿದಿನಗಳನ್ನು ಮಾಡಲು ಗ್ರಾಹಕರು ಎಷ್ಟೇ ಬೆಲೆ ತೆತ್ತಾದರೂ ಹೂ- ಹಣ್ಣುಗಳನ್ನು ಕೊಳ್ಳಲು ಮುಗಿಬೀಳುತ್ತಿರುವುದು ಸಾಮಾನ್ಯವಾಗಿತ್ತು.

Recent Articles

spot_img

Related Stories

Share via
Copy link