ಬೆಂಗಳೂರು:
ಮನೆ ಮೇಲ್ಛಾವಣಿಯ ಪ್ಯಾಸೇಜ್‍ಗಳಲ್ಲಿನ ಹೂವಿನ ಕುಂಡಗಳಲ್ಲಿ ಗಾಂಜಾ ಬೆಳೆಸಿ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಸಿಸಿಬಿ ಪೆÇಲೀಸರು ಬಂಧಿಸಿ 3 ಲಕ್ಷ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಹೆಚ್.ಎಸ್.ಆರ್. ಲೇಔಟ್‍ನ ಪ್ರದೀಪ್ (28) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯಿಂದ 5 ಕೆಜಿ 530 ಗ್ರಾಂ ಗಾಂಜಾ, ಎರಡು ಮೊಬೈಲ್ ಸೇರಿ 3 ಲಕ್ಷ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡು, ಪರಾರಿಯಾಗಿರುವ ಕನಕಪುರದ ಗೋವಿಂದಪ್ಪನಿಗಾಗಿ ತೀವ್ರ ಶೋಧ ನಡೆಸಲಾಗಿದೆ.
ವ್ಯಸನಿಯಿಂದ ಪತ್ತೆ
ಆರೋಪಿ ಪ್ರದೀಪ್ ಹೆಚ್.ಎಸ್.ಆರ್. ಲೇಔಟ್‍ನ 2ನೇ ಹಂತದ ನಿಫ್ಟ್ ಕಾಲೇಜ್ ಹಿಂಭಾಗದ ಮನೆಯ 5ನೇ ಮಹಡಿಯ ಮೇಲ್ಛಾವಣಿಯ ಪ್ಯಾಸೇಜ್‍ಗಳಲ್ಲಿ ಹೂಕುಂಡಗಳಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿ, ಅವುಗಳಿಂದ ದೊರೆತ ಗಾಂಜಾ ಹಾಗೂ ಕನಕಪುರ, ಇನ್ನಿತರ ಕಡೆಗಳಲ್ಲಿ ಖರೀದಿ ಮಾಡಿಕೊಂಡು ಬಂದಿದ್ದ ಗಾಂಜಾವನ್ನು ನಗರದ ವಿವಿಧೆಡೆ ಸಂಚರಿಸಿ ಮಾರಾಟ ಮಾಡುತ್ತಿದ್ದ.
ಗಾಂಜಾ ವ್ಯಸನಿಯೊಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ನೀಡಿದ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿ ಹೂಕುಂಡಗಳಲ್ಲಿ ಬೆಳೆಸಿದ್ದ ಗಾಂಜಾವನ್ನು ವಶಪಡಿಸಿಕೊಂಡು, ಹೆಚ್.ಎಸ್.ಆರ್. ಲೇಔಟ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಂಟಿ ಪೆÇಲೀಸ್ ಆಯುಕ್ತ ಸತೀಶ್ ಕುಮಾರ್ ತಿಳಿಸಿದ್ದಾರೆ