ಹೆಣ್ಣಿನ ಸ್ವಾತಂತ್ರ್ಯ ಮತ್ತು ಸಮಾಜದ ಚಿತ್ತ

      Related image ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ ಅಂದರೆಎಲ್ಲಿ ನಾರಿಯನ್ನು ಪೂಜಿಸಲಾಗುವುದೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಇದರರ್ಥ ಹೆಣ್ಣನ್ನು ದೇವರೆಂದು ಭಾವಿಸುವುದು ಎಂದರ್ಥವಲ್ಲ, ಅವಳಿಗೆ ಸಲ್ಲಬೇಕಾದ ಸ್ವಾತಂತ್ರ್ಯ ಮತ್ತು ಗೌರವಗಳನ್ನು ನೀಡುವುದು ಎಂದರ್ಥ.  ಆದರೆ ನಮ್ಮ ಪ್ರಸ್ತುತ ಸಮಾಜದಲ್ಲಿ ಹೆಣ್ಣಿನ ಶೋಷಣೆ ಎಡೆಬಿಡದೆ ಕಾಡುತ್ತಿರುವುದು ವಿಷಾದನೀಯ.

      ಇಂದಿನ ಜಾಗತಿಕ ಸಮಸ್ಯೆಗಳ ಮೇಲೊಮ್ಮೆ ಕಣ್ಣು ಹಾಯಿಸಿದರೆ ಬಡತನ, ಆಹಾರದಕೊರತೆ, ಪೌಷ್ಟಿಕಾಂಶದಕೊರತೆ, ಆರ್ಥಿಕತೆಯಲ್ಲಿನ ಕುಸಿತಗಳ ಪಟ್ಟಿಯಲ್ಲಿ ಸ್ತ್ರೀ ಮೇಲಿನ ದೌರ್ಜನ್ಯವೂ ಬಹುದೊಡ್ಡ ಸಮಸ್ಯೆಯಾಗಿ ಸೇರಿಕೊಂಡಿರುವುದು ಕಂಡುಬರುತ್ತದೆ. ಇದು ನಿರಾಕರಿಸಲಾಗದ ಕಟು ಸತ್ಯ. ಸಹನೆ, ತಾಳ್ಮೆ, ಮೃದು ಸ್ವಭಾವವನ್ನುತನ್ನ ನರನಾಡಿಯಲ್ಲಿ ಆವಾಹಿಸಿಕೊಂಡಿರುವ ಕ್ಷಮಯಾಧರಿತ್ರಿಯೇ ಸಮಸ್ಯೆಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವುದು ದುರಂತವಲ್ಲದೇ ಮತ್ತೇನೂ ಅಲ್ಲ. 

ಹುಟ್ಟಿದ, ಮೆಟ್ಟಿದ ಮನೆಯನ್ನು ಬೆಳಗಿಸುವವಳು ಹೆಣ್ಣು:

  Related image   ತಾನು ಹುಟ್ಟಿದ ಮನೆಯನ್ನುತನ್ನ ನಗು, ಮುಗ್ಧ ಮಾತು, ತೊಟ್ಟ ಬಳೆ, ಝುಮುಕಿ, ಮುಡಿದ ಮಲ್ಲಿಗೆ, ಧರಿಸಿದ ಬಣ್ಣದ ಉಡುಗೆಗಳಿಂದ ಆನಂದ ಸಾಗರದಲ್ಲಿ ತೇಲಾಡಿಸುವ ಹೆಣ್ಣು, ವಿವಾಹದ ನಂತರಮೆಟ್ಟಿದ ಮನೆಯನ್ನೂ ನಂದನವಾಗಿಸುವಚಾಣಾಕ್ಷೆ. ಮುಂದೊಮ್ಮೆ ಗರ್ಭಸೇರಿದ, ಇನ್ನೂ ಮುಖವನ್ನೇ ಕಾಣದ ಕಂದನೊಂದಿಗೆ ಆಹಾರ, ಉಸಿರು, ಜೀವ ಹಂಚಿಕೊಂಡು ಆತ್ಮೀಯ ನಂಟು ಬೆಳೆಸಿಕೊಂಡುಬಿಟ್ಟಿರುತ್ತಾಳೆ. ಮುಂದೆ ಆ ಕುಡಿಯನ್ನು ನವಮಾಸ ಹೊತ್ತು, ಮರಣಯಾತನೆ ಅನುಭವಿಸಿ ಭೂಮಿಗೆತಂದುಕಂದಮ್ಮನ ಮುಖ ಕಂಡೊಡನೆ ಆ ಅಸಹನೀಯಯಾತನೆಯನ್ನು ಮರೆಯುವಗಟ್ಟಿತನಯಾವ ಪುರುಷನಿಗೂಇಲ್ಲ. ಅವಳ ನೋವಿನ ಅರ್ಧಾಂಶವನ್ನೂ ಸಹಿಸಲಾಗದಿದ್ದರೂ ಬಲಾಢ್ಯನೆನಿಸಿಕೊಂಡ ಪುರುಷ ಮಾತ್ರ ಅವಳಿಗೆ ಕೊಡುವ ಬಿರುದು “ನೀನು ಅಬಲೆ” ಎಂದು.

 

ಹೆಣ್ಣಿನ ಪ್ರಗತಿಗೆ ಅಡ್ಡಿಯಾಗದ ಸಂಸ್ಕೃತಿ:

      ಮಾನವ ಸಾಮಾಜಿಕ ಸಂಘ ಜೀವಿ. ಅಂತಹ ಸಮಾಜಕ್ಕೆ ಕೆಲವು ರೂಢಿಗಳೂ ಇವೆ. ಕೆಲವು ಮೂಢವಾಗಿದ್ದರೆ, ಇನ್ನು ಕೆಲವು ಸಂಸ್ಕೃತಿಯ, ಸಮುದಾಯದ ದ್ಯೋತಕವಾಗಿವೆ. ಇದಕ್ಕೆಉದಾಹರಣೆ ನೀಡುವುದಾದರೆ, ಹಿಂಧೂ ಧರ್ಮದಲ್ಲಿರುವ ಮಂಗಳಸೂತ್ರ, ಕುಂಕುಮ, ಕಾಲುಂಗುರಗಳು ಮತ್ತು ಮುಸ್ಲಿಂ ಮಹಿಳೆಯರ ಪರ್ದಾ ಪದ್ಧತಿ, ಕ್ರೈಸ್ತರ ಶಿರವಸ್ತ್ರಧಾರಣೆ, ಗುಜರಾತೀಯರ ಘೂಂಗಟ್, ಹೀಗೇ. ಇವುಗಳನ್ನು ಶೋಷಣೆ ಎನ್ನಲಾಗದು. ಬದಲಾಗಿ ಇವುಗಳು ನಮ್ಮಲ್ಲಿ ಗೌರವ ಭಾವನೆ ಮೂಡಿಸುತ್ತವೆ. ಇವುಗಳು ಹೆಣ್ಣಿನಪ್ರಗತಿಗೆ ಯಾವ ರೀತಿಯಿಂದಲೂ ಅಡ್ಡಿಯಾಗಿಲ್ಲ. ಇವುಗಳೊಂದಿಗೇ ಹೆಣ್ಣು ಸಮಾಜಮುಖಿ ಹೊಣೆ ಹೊರಬಹುದು.ಇವುಗಳನ್ನು ದೂಷಿಸುವುದರಿಂದ ನಾವು ಪ್ರಗತಿಪರರೆನಿಸಿಕೊಳ್ಳವುದಿಲ್ಲ.

ಪ್ರಗತಿಪರತೆ ಹಾಗೂ ಸ್ವಾತಂತ್ರ್ಯ:

      ಹಾಗಾದರೆ ಪ್ರಗತಿ ಪರತೆಯೆಂದರೆ ಏನು? ಎಂಬ ಪ್ರಶ್ನೆಗೆಉತ್ತರ ಶಿಕ್ಷಣದ ಸಬಲೀಕರಣವಾಗಿದೆ. ಹೆಣ್ಣಾಗಲೀ, ಗಂಡಾಗಲೀ ಶಿಕ್ಷಿತರಾದಾಗ ಮಾತ್ರವೇತಮ್ಮ ಸ್ವಾತಂತ್ರ್ಯವನ್ನು ಅರ್ಥೈಸಿಕೊಳ್ಳಬಹುದು. ಹಕ್ಕು ಮತ್ತುಕರ್ತವ್ಯಗಳನ್ನು ಅರ್ಥೈಸಿಕೊಳ್ಳಬಹುದು. ಇನ್ನುಸ್ತ್ರೀ ಸ್ವಾತಂತ್ರ್ಯಎಂದಾಕ್ಷಣ ಎಲ್ಲರ ಕಣ್ಮುಂದೆ ನಿಲ್ಲುವುದು ಪುರುಷನ ವಿರುದ್ಧ ಇಡೀ ಸ್ತ್ರೀ ಸಂಕುಲದ ಹೋರಾಟ ಎಂಬುದು. Related imageಇದು ನಿಜಕ್ಕೂ ತಪ್ಪುಕಲ್ಪನೆ. ಏಕೆಂದರೆ, ಹೆಣ್ಣು ಮತ್ತು ಗಂಡು ನಮ್ಮ ಸಮಾಜದ ಪ್ರಮುಖ ಎರಡು ಮುಖಗಳು. ಹೀಗಿರುವಾಗ, ಇವೆರಡೂ ಪಂಗಡಗಳು ಒಂದಕ್ಕೊಂದು ಪೂರಕವಾಗಿದ್ದರೇನೇ ಸಮಾಜ ಶಾಂತಿ ನೆಮ್ಮದಿಯಿಂದ ಇದ್ದೀತು. ಸ್ತ್ರೀ ಸ್ವಾತಂತ್ರ್ಯವೆಂದರೆ, ಸ್ತ್ರೀ ವಿರೋಧಿರೂಢಿ, ಸಂಪ್ರದಾಯಗಳ ವಿರುದ್ಧದ ಹೋರಾಟ. ಅಂದರೆ, ಭ್ರೂಣ ಹತ್ಯೆ, ದೇವದಾಸಿ ಪದ್ಧತಿ, ವೇಶ್ಯಾವಾಟಿಕೆ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಲೈಂಗಿಕ ಶೋಷಣೆಗಳ ವಿರುದ್ಧದ ಹೋರಾಟದಲ್ಲಿ ಸಹಜೀವಿ ಎನಿಸಿಕೊಂಡ ಪುರುಷ, ಅವಳ ಜೊತೆ ಹೆಜ್ಜೆ ಸೇರಿಸುವುದು ಸ್ತ್ರೀಪರ ಹೋರಾಟಕ್ಕೆ ಹೆಚ್ಚು ಅರ್ಥಕೊಡಬಲ್ಲುದು.

      ಈ ಸ್ವಾತಂತ್ರ್ಯವನ್ನು ಹೆಣ್ಣಾದವಳು ಚೆನ್ನಾಗಿ ಅರ್ಥೈಸಿಕೊಳ್ಳಬೇಕು, ಅರೆಬರೆ ಉಡುಗೆತೊಡುವುದನ್ನು ಸ್ವಾತಂತ್ರ್ಯಎನ್ನುವುದಾದರೆ ಅಥವಾ ಅಪರಾತ್ರಿ ಪಬ್ಬು, ಬಾರುಗಳಲ್ಲಿ ಕಂಡುಬರುವುದನ್ನು ಸ್ವಾತಂತ್ರ್ಯಎನ್ನುವುದಾದರೆ, ಅವುಗಳನ್ನು ಒಪ್ಪಿಕೊಳ್ಳಲು ಆಗದು. ನಿಜವಾದ ಸ್ವಾತಂತ್ರ್ಯವೆಂದರೆ, ಶಿಕ್ಷಿತಳಾಗುವ ಸ್ವಾತಂತ್ರ್ಯ, ವಿವಾಹಾದಿಯಾಗಿ ಇತರ ಸಾಮಾಜಿಕ, ರಾಜಕೀಯ, ಆರ್ಥಿಕ, ವಿಷಯಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ, ಸಲಹೆ ಕೊಡುವ, ಕೊಳ್ಳುವ ಮುಕ್ತವಾತಾವರಣ, ಅಭಿವ್ಯಕ್ತಿ ಸ್ವಾತಂತ್ರ್ಯ, ದೌರ್ಜನ್ಯಗಳ ವಿರುದ್ಧಧ್ವನಿಯೆತ್ತುವ ಸ್ವಾತಂತ್ರ್ಯ.

 ಹೆಣ್ಣಿಗೂ ಸಿಗಲಿ ಸಂವಿಧಾನಬದ್ಧ ಹಕ್ಕು:

Image result for ಹೆಣ್ಣು

      ಹೀಗೆ ಒಬ್ಬಜವಾಬ್ದಾರಿಯುತ ನಾಗರಿಕಳಾಗಿ ಸಂವಿಧಾನಾತ್ಮಕ ಹಕ್ಕುಗಳು ಅವಳಿಗೆ ದೇಶದ ಸಾಮಾನ್ಯ ನಾಗರಿಕಳಾಗಿಯೇ ದೊರೆಯುವಂತಾಗಲಿ. ಆಕೆಯನ್ನು ‘ಅಬಲೆ’ ಎಂಬ ಕಾರಣಕ್ಕೆ ತೃತೀಯದರ್ಜೆಯ ಪ್ರಜೆಯಾಗಿಸದೇ, ಸಂವಿಧಾನಬದ್ಧ ಹಕ್ಕನ್ನು ಪಡೆದುಕೊಳ್ಳಲು ಆಕೆಯನ್ನು ಸಂಘರ್ಷಕ್ಕಿಳಿಯಲು ಪ್ರಚೋದಿಸದೆ ಅನಾಯಾಸವಾಗಿ ಹಕ್ಕುಗಳು ಕೈಗೆಟುಕುವಂತೆ ಅನುವು ಮಾಡಿಕೊಡುವುದು ಅವಳಿಗೆ ನೀಡಬಹುದಾದ, ಅವಳು ಪಡೆದುಕೊಳ್ಳಬಹುದಾದ ನಿಜವಾದ ಸ್ವಾತಂತ್ರ್ಯವಾಗಿದೆ. ಹೆಣ್ಣಾದವಳೂ ಸಹ ಭಾರತದ ಸಂವಿಧಾನ ಒದಗಿಸಿರುವ ಅಕ್ಷರ ಸಂಸ್ಕೃತಿಯಲ್ಲಿ ತಾನು ಶಿಕ್ಷಿತಳಾಗುವುದಷ್ಟೇ ಅಲ್ಲ, ತನ್ನ ಮುಂದಿನ ಪೀಳಿಗೆಯೂ ಶಿಕ್ಷಿತರಾಗುವಂತೆ ನೋಡಿಕೊಳ್ಳುವುದು ಆದ್ಯಕರ್ತವ್ಯವಾಗಬೇಕಿದೆ.

– ಲಕ್ಷ್ಮೀಕಾಂತ್‍ಎಲ್ ವಿ
ತುಮಕೂರು

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ