ಹುಳಿಯಾರು:
ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಿನಿಮಾ ಕಲಾ ನಿರ್ದೇಶಕ ಹಾಗೂ ರಂಗವಿನ್ಯಾಸಕ ಶಶಿಧರ ಅಡಪ ಭೇಟಿ ನೀಡಿದ್ದರು.
ಈಗಾಗಲೇ ನಟ ಪ್ರಕಾಶ್ ರೈ ಹೊಯ್ಸಳಕಟ್ಟೆ ಸರ್ಕಾರಿ ಶಾಲೆ ಅಭಿವೃದ್ಧಿಗೆ ಮುಂದಾಗಿದ್ದಾರೆ. ಈ ದಿಸೆಯಲ್ಲಿ ಶಾಲೆಯಲ್ಲಿ ಉತ್ತಮ ವಾತಾವರಣ ನಿರ್ಮಿಸಲು ಕೊಠಡಿಗಳ ಬಣ್ಣ ವಿನ್ಯಾಸ ಮುಖ್ಯವಾಗುತ್ತದೆ. ಶಾಲೆಯಲ್ಲಿ ಸೃಜನಶೀಲ ಕಲಿಕೆಗೆ ಪೂರಕವಾಗುವ ಚಿತ್ರ ಹಾಗೂ ಅಕ್ಷರ ವಿನ್ಯಾಸ ಮಾಡಲಾಗುವುದು ಎಂದು ಅವರು ಹೇಳಿದರು.
ಪ್ರಕಾಶ್ ರಾಜ್ ಫೌಂಡೇಶನ್‍ನ ಚಂದನ್, ಸುವರ್ಣ ವಿದ್ಯಾ ಚೇತನದ ಕಲ್ಲೇನಹಳ್ಳಿ ಶಿವಕುಮಾರ್, ಎಚ್.ಆರ್.ಯುವರಾಜು, ಗುರು, ಎಲ್.ಬಿ.ಮಂಜುನಾಥ್ ಇದ್ದರು.