ತುರುವೇಕೆರೆ
ರಾಜ್ಯಾದ್ಯಂತ ಹಬ್ಬುತ್ತಿರುವ ಕೊರೋನಾ ಸೋಂಕಿನ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಸರ್ಕಾರ ಅದೆಷ್ಟೊ ಕ್ರಮಗಳನ್ನು ಕೈ ಗೊಳ್ಳುತ್ತಿದೆ. ಅದರಂತೆ ತುರುವೇಕೆರೆ ಪಟ್ಟಣದಲ್ಲಿ ತಾಲ್ಲೂಕು ಆಡಳಿತ ಜನತೆ ಬೀದಿಗೆ ಬಾರದಂತೆ ಮನೆಯಲ್ಲೇ ಇದ್ದು ತಮ್ಮನ್ನು ತಾವು ರಕ್ಷಿಸಿಕೊಳ್ಳಿ ಎಂದು ಅನೇಕ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಆದರೆ ಜನರಿಗೆ ಎಷ್ಟೇ ಎಚ್ಚರಿಕೆ ನೀಡಿದರೂ ಪ್ರಯೋಜನವಾಗುತ್ತಿಲ್ಲ. ಕೆಲವರು ಯಾವುದೇ ಕೆಲಸವಿಲ್ಲದಿದ್ದರೂ ಸಹ ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ.
ಇವರನ್ನು ತಡೆಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇದೀಗ ತಾಲ್ಲೂಕು ಆಡಳಿತ ವಿನೂತನ ಪ್ರಯೋಗವೊಂದನ್ನು ಕೈಗೊಂಡಿದ್ದು, ಪಟ್ಟಣದ ಹೃದಯ ಭಾಗವಾದ ಬಾಣಸಂದ್ರ ವೃತ್ತ ಹಾಗೂ ದೆಬ್ಬೇಘಟ್ಟ ವೃತ್ತಗಳಲ್ಲಿ ರಸ್ತೆಯ ಮೇಲೆ ಬಣ್ಣದಲ್ಲಿ “ಬೀದಿಗೆ ಬಂದರೆ ನೀನು-ನಿನ್ನ ಮನೆಗೆ ಬರುವೆ ನಾನು” ಎಂಬ ಎಚ್ಛರಿಕೆ ಬರಹಗಳನ್ನು ಬರೆಸುವ ಮೂಲಕ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಜನತೆ ಮನೆಯಿಂದ ಹೊರಗೆ ಬಾರದಿರಲಿ ಎಂಬ ಉದ್ದೇಶದಿಂದ ಇಂತಹ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದಕ್ಕಾಗಿ ತಾಲ್ಲೂಕು ಆಡಳಿತ, ಪಟ್ಟಣ ಪಂಚಾಯಿತಿ, ಆರಕ್ಷಕ ಠಾಣೆ ಹಾಗೂ ಸಾರ್ವಜನಿಕ ಆಸ್ಪತ್ರೆ ಇಲಾಖಾಧಿಕಾರಿಗಳನ್ನು ಪ್ರಜ್ಞಾವಂತ ನಾಗರಿಕರು ಪ್ರಶಂಸಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ