1 ಮಹಾನಗರ ಪಾಲಿಕೆ, 2 ಪುರಸಭೆ, 2 ಪಟ್ಟಣ ಪಂಚಾಯತಿಗಳು :ಅಭ್ಯರ್ಥಿಗಳ ಭವಿಷ್ಯ ಇಂದು ಬಹಿರಂಗ

 ತುಮಕೂರು:

      ಆಗಸ್ಟ್ 31 ರಂದು ನಡೆದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದೆ.
ತುಮಕೂರು ಮಹಾನಗರ ಪಾಲಿಕೆ, ಗುಬ್ಬಿ ಹಾಗೂ ಕೊರಟಗೆರೆ ಪಟ್ಟಣ ಪಂಚಾಯತಿ, ಚಿ.ನಾ.ಹಳ್ಳಿ ಮತ್ತು ಮಧುಗಿರಿ ಪುರಸಭೆಗಳಿಗೆ ಚುನಾವಣೆ ನಡೆದಿತ್ತು. ಇಂದು ಮತ ಏಣಿಕೆ ಕಾರ್ಯ ನಡೆಯಲಿದ್ದು, ಮಧ್ಯಾಹ್ನದ ವೇಳಗೆ ಅಭ್ಯರ್ಥಿಗಳ ಭವಿಷ್ಯ ಬಹಿರಂಗವಾಗಲಿದೆ..

      ತುಮಕೂರು ಮಹಾನಗರ ಪಾಲಿಕೆ-ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಚಿಕ್ಕನಾಯಕನಹಳ್ಳಿ ಪುರಸಭೆ- ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು, ಚಿಕ್ಕನಾಯಕನಹಳ್ಳಿ; ಮಧುಗಿರಿ ಪುರಸಭೆ- ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಧುಗಿರಿ; ಗುಬ್ಬಿ ಪಟ್ಟಣ ಪಂಚಾಯತಿ – ತಾಲ್ಲೂಕು ಕಛೇರಿ, ಗುಬ್ಬಿ; ಕೊರಟಗರೆ ಪಟ್ಟಣ ಪಂಚಾಯತಿ – ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊರಟಗೆರೆ ಇಲ್ಲಿ ಮತ ತುಂಬಿದ ವಿದ್ಯುನ್ಮಾನ ಮತಯಂತ್ರಗಳನ್ನು ಭದ್ರತಾ ಕೊಠಡಿಯಲ್ಲಿ ಬಿಗಿ ಭದ್ರತೆಯಲ್ಲಿ ಇರಿಸಲಾಗಿದೆ.

      ತುಮಕೂರು ಮಹಾನಗರ ಪಾಲಿಕೆಯ 35 ವಾರ್ಡ್‍ಗಳಿಗೆ 215 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇಲ್ಲಿ 59.25 ರಷ್ಟು ಮತದಾನ ನಡೆದಿದೆ. ಗುಬ್ಬಿ ಪಟ್ಟಣ ಪಂಚಾಯತಿಯ 19 ವಾರ್ಡ್‍ಗಳಿಗೆ ನಡೆದ ಚುನಾವಣೆಯಲ್ಲಿ 68 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಲ್ಲಿ ಶೇ.79.10 ರಷ್ಟು ಮತದಾನವಾಗಿದೆ. ಚಿಕ್ಕನಾಯಕನಹಳ್ಳಿ ಪುರಸಭೆಯಲ್ಲಿ ಒಟ್ಟು 23 ವಾರ್ಡ್‍ಗಳಿದ್ದು, 73 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇಲ್ಲಿ ಶೇ.79.78 ರಷ್ಟು ಮತದಾನವಾಗಿತ್ತು. ಕೊರಟಗೆರೆ ಪಟ್ಟಣ ಪಂಚಾಯತಿಯ 15 ವಾರ್ಡ್‍ಗಳಿಗೆ 60 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಇಲ್ಲಿ ಶೇ.81.41 ರಷ್ಟು ಮತದಾನವಾಗಿದೆ. ಜಿಲ್ಲೆಯಲ್ಲೇ ಅತ್ಯಂತ ಹೆಚ್ಚು ಮತದಾನವಾಗಿರುವ ಸ್ಥಳೀಯ ಸಂಸ್ಥೆ ಇದು.

      ಮಧುಗಿರಿ ಪುರಸಭೆಯ 23 ವಾರ್ಡ್‍ಗಳಿಗೆ ನಡೆದ ಚುನಾವಣೆಯಲ್ಲಿ 68 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇಲ್ಲಿ ಶೇ.81.04 ರಷ್ಟು ಮತದಾನವಾಗಿದೆ. ತುಮಕೂರನ್ನು ಹೊರತುಪಡಿಸಿದರೆ ಮಧುಗಿರಿ ಪ್ರಸ್ತುತ ಅತ್ಯಂತ ಪ್ರತಿಷ್ಠೆಯ ನಗರ ಸ್ಥಳೀಯ ಸಂಸ್ಥೆಯ ಚುನಾವಣೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಇಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹಾಗೂ ಹಾಲಿ ಶಾಸಕ ಎಂ.ವೀರಭದ್ರಯ್ಯ ಇಬ್ಬರೂ ತಮ್ಮದೇ ಆದ ರೀತಿಯಲ್ಲಿ ಪ್ರಚಾರ ಕೈಗೊಂಡಿದ್ದರು. ಉಳಿದಂತೆ ಕೊರಟಗೆರೆ, ಚಿಕ್ಕನಾಯಕನಹಳ್ಳಿ ಅಷ್ಟಾಗಿ ಗಮನ ಸೆಳೆದಿಲ್ಲ.

      ಜಿಲ್ಲೆಯ 5 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟು 215 ವಾರ್ಡ್‍ಗಳು ಇವೆ. 484 ಅಭ್ಯರ್ಥಿಗಳು ಸ್ಪರ್ಧಾಳುಗಳಾಗಿದ್ದಾರೆ. ಇವರೆಲ್ಲರ ಭವಿಷ್ಯ ಇಂದು ಹೊರಬೀಳಲಿದೆ. ತುಮಕೂರು ಮಹಾನಗರ ಪಾಲಿಕೆಯಲ್ಲಿ 215 ಅಭ್ಯರ್ಥಿಗಳಿದ್ದು, ಪ್ರಮುಖ ಮೂರು ಪಕ್ಷಗಳ ಜೊತೆಗೆ ಇದೇ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಿಪಿಎಂ ಹಾಗೂ ಪಕ್ಷೇತರ ಅಭ್ಯರ್ಥಿಗಳು ಪ್ರಬಲ ಪೈಪೋಟಿ ನೀಡಿದ್ದಾರೆ. ಇವರ ಸ್ಪರ್ಧೆ ಯಾರಿಗೆ ಅನುಕೂಲವಾಗಲಿದೆ ಎಂಬುದು ತಿಳಿಯಲಿದೆ.

      ತುಮಕೂರು ನಗರದಲ್ಲಿ ಟಿಕೆಟ್ ಹಂಚಿಕೆಯ ಪ್ರಕ್ರಿಯೆ ಆರಂಭವಾದಾಗಿನಿಂದ ಕೆಲವು ಪಕ್ಷಗಳಲ್ಲಿ ಅಪಸ್ವರ ಎದುರಾಗಿತ್ತು. ಪಕ್ಷದ ಅಭ್ಯರ್ಥಿಗಳ ವಿರುದ್ಧ ಅಲ್ಲಲ್ಲಿ ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಇದರಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮತದಾರ ಪಕ್ಷ ನೋಡಿರುವನೋ ಅಥವಾ ವ್ಯಕ್ತಿಗೆ ಮಣೆ ಹಾಕಿರುವನೋ ಎಂಬುದು ಇಂದು ಗೊತ್ತಾಗಲಿದೆ.

 ಬೆಟ್ಟಿಂಗ್ ದಂಧೆ ಜೋರು:

      ಆಗಸ್ಟ್ 31 ರಂದು ಮತದಾನ ಮುಗಿಯುತ್ತಿದ್ದಂತೆಯೇ ಚುನಾವಣೆಗಳು ನಡೆದಿರುವ 5 ಕ್ಷೇತ್ರಗಳಲ್ಲಿ ಬೆಟ್ಟಿಂಗ್ ದಂಧೆ ಆರಂಭವಾಗಿದೆ. ತುಮಕೂರು ನಗರದಲ್ಲಿ ಕಳೆದ ಎರಡು ದಿನಗಳಿಂದ ಸೋಲು-ಗೆಲುವಿನ ಲೆಕ್ಕಾಚಾರಗಳು ಮುಂದುವರೆದಿರುವಂತೆಯೇ ಬೆಟ್ಟಿಂಗ್ ದಂಧೆ ಕೂಡಾ ಅಷ್ಟೇ ಪ್ರಮಾಣದಲ್ಲಿ ಜೋರಾಗಿದೆ. ಅದೇ ರೀತಿ ತಾಲ್ಲೂಕುಗಳಲ್ಲಿಯೂ ಈ ಲೆಕ್ಕಾಚಾರಗಳು ಮುಂದುವರೆದಿವೆ. ಯಾರು ಕಳೆದುಕೊಳ್ಳುವರೋ ಮತ್ಯಾರು ಗಳಿಸಿಕೊಳ್ಳುವರೋ ಇಂದು ಮಧ್ಯಾಹ್ನದ ವೇಳೆಗೆ ಗೊತ್ತಾಗಲಿದೆ.

       ಸೆ.3 ರಂದು ಸೋಮವಾರ ಬೆಳಗ್ಗೆ 8 ಗಂಟೆಯಿಂದ ತುಮಕೂರು ನಗರದ ಬಿ.ಎಚ್.ರಸ್ತೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ನಡೆಯಲಿದೆ. ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರರು ಸೇರಿ ಒಟ್ಟು 215 ಅಭ್ಯರ್ಥಿಗಳ ‘‘ರಾಜಕೀಯ ಭವಿಷ್ಯ’’ ಬೆಳಕಿಗೆ ಬರಲಿದೆ.

      ಲಭ್ಯ ಮಾಹಿತಿ ಪ್ರಕಾರ, ‘‘ಎಲ್ಲ 35 ವಾರ್ಡ್ಗಳ ಮತ ಎಣಿಕೆಗಾಗಿ ಒಟ್ಟು 35 ಟೇಬಲ್ಗಳ ವ್ಯವಸ್ಥೆ ಮಾಡಲಾಗುವುದು. ಏಕ ಕಾಲಕ್ಕೆ ಎಲ್ಲ 35 ವಾರ್ಡ್ಗಳ ಮತ ಎಣಿಕೆಯು ಆರಂಭವಾಗುವುದು. ಇದೇ ಮೊದಲಬಾರಿಗೆ ‘ವಿದ್ಯುನ್ಮಾನ ಮತಯಂತ್ರ’ (ಎಲೆಕ್ಟ್ರಾನಿಕ್ ಓಟಿಂಗ್ ಮೆಷಿನ್ -ಎ.ವಿ.ಎಂ.) ಬಳಸಿರುವುದರಿಂದ ಲಿತಾಂಶವು ಅತ್ಯಂತ ಕ್ಷಿಪ್ರವಾಗಿ ಲಭಿಸಲಿದೆ.

11 ಗಂಟೆಯೊಳಗೆ ಪೂರ್ಣ ಲಿತಾಂಶ:
      ತುಮಕೂರು ಮಹಾನಗರ ಪಾಲಿಕೆಯ ಚುನಾವಣೆಯ ಅಂತಿಮ ಘಟ್ಟವಾದ ‘‘ಮತ ಎಣಿಕೆ ಮತ್ತು ಲಿತಾಂಶ ಪ್ರಕಟಣೆ’’ಯು ಸೆ.3 ರಂದು ಸೋಮವಾರ ಬೆಳಗ್ಗೆ 8 ಗಂಟೆಯಿಂದ ತುಮಕೂರು ನಗರದ ಬಿ.ಎಚ್.ರಸ್ತೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ನಡೆಯಲಿದೆ. ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರರು ಸೇರಿ ಒಟ್ಟು 215 ಅಭ್ಯರ್ಥಿಗಳ ‘‘ರಾಜಕೀಯ ಭವಿಷ್ಯ’’ ಬೆಳಕಿಗೆ ಬರಲಿದೆ.
      ಲಭ್ಯ ಮಾಹಿತಿ ಪ್ರಕಾರ, ‘‘ಎಲ್ಲ 35 ವಾರ್ಡ್ಗಳ ಮತ ಎಣಿಕೆಗಾಗಿ ಒಟ್ಟು 35 ಟೇಬಲ್ಗಳ ವ್ಯವಸ್ಥೆ ಮಾಡಲಾಗುವುದು. ಏಕ ಕಾಲಕ್ಕೆ ಎಲ್ಲ 35 ವಾರ್ಡ್ಗಳ ಮತ ಎಣಿಕೆಯು ಆರಂ‘ವಾಗುವುದು. ಇದೇ ಮೊದಲಬಾರಿಗೆ ‘ವಿದ್ಯುನ್ಮಾನ ಮತಯಂತ್ರ’ (ಎಲೆಕ್ಟ್ರಾನಿಕ್ ಓಟಿಂಗ್ ಮೆಷಿನ್ -ಎ.ವಿ.ಎಂ.) ಬಳಸಿರುವುದರಿಂದ ಲಿತಾಂಶವು ಅತ್ಯಂತ ಕ್ಷಿಪ್ರವಾಗಿ ಲಭಿಸಲಿದೆ. ಕನಿಷ್ಟ 5 ಸುತ್ತಿನಿಂದ(ರೌಂಡ್ಸ್) ಗರಿಷ್ಟ 11 ಸುತ್ತಿನ ಮತ ಎಣಿಕೆ ನಡೆಯಲಿದೆ. ಕೇವಲ ಮೂವರು ಸ್ಪರ್ಧಿಗಳಿರುವ ವಾರ್ಡ್ಗಳ ಲಿತಾಂಶ ಬೇಗ ಲಭಿಸುತ್ತದೆ. ಅಭ್ಯರ್ಥಿಗಳು ಅಧಿಕ ಸಂಖ್ಯೆಯಲ್ಲಿರುವೆಡೆ ಸ್ವಲ್ಪ ವಿಳಂಬವಾಗಲಿದೆ. ಬಹುತೇಕ ಬೆಳಗ್ಗೆ 9 ಗಂಟೆ ಹೊತ್ತಿಗೆಲ್ಲ ಹಲವು ಲಿತಾಂಶ ಲಭ್ಯವಾಗಬಹುದು. ಬೆಳಗ್ಗೆ 11 ಗಂಟೆಯೊಳಗೆ ಮತ ಎಣಿಕೆ ಪೂರ್ಣಗೊಂಡು ಎಲ್ಲ 35 ವಾರ್ಡ್ಗಳ ಸಂಪೂರ್ಣ ಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ’’ ಎಂದು ತಿಳಿದುಬಂದಿದೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap