ನವದೆಹಲಿ :
ವಿಶ್ವವಿಖ್ಯಾತ ಉದ್ಯಮಿ, ಅಲಿಬಾಬ ಮಾಲಿಕ ಜ್ಯಾಕ್ ಮಾಗೆ 1 ಬಿಲಿಯನ್ ಡಾಲರ್ (8,261 ಕೋಟಿ ರೂ.) ದಂಡ ಹೇರಿದೆ. ಮೂರು ವರ್ಷಗಳಿಂದ ಆಯಂಟ್ ಗ್ರೂಪ್‌ನ ವ್ಯವಹಾರಗಳನ್ನು ತನಿಖೆ ಮಾಡಿ ಆಡಳಿತ ಅಂತಿಮವಾಗಿ 2020ರಲ್ಲಿ ಆಯಂಟ್ ಗ್ರೂಪ್ 34 ಬಿಲಿಯನ್ ಡಾಲರ್ ಸಂಗ್ರಹಿಸಲು ಭಾರೀ ಪ್ರಮಾಣದ ಐಪಿಒಗಳನ್ನು ಬಿಡುಗಡೆ ಮಾಡಿತ್ತು.
ಆಗಲೇ ಸರ್ಕಾರ ಅದಕ್ಕೆ ತಡೆ ನೀಡಿತ್ತು. ಇದೀಗ ದಂಡ ಹೇರುವುದರೊಂದಿಗೆ 3 ವರ್ಷಗಳ ವಿಚಾರಣೆಯನ್ನು ಮುಗಿಸಿದಂತಾಗಿದೆ. ಆದರೆ ಈ ನೋವಿನ ಕಥೆ ಇಷ್ಟಕ್ಕೆ ಮುಗಿದಿಲ್ಲ. ಆಯಂಟ್ ಗ್ರೂಪ್‌ನ ಸಹೋದರ ಸಂಸ್ಥೆ ಅಲಿಬಾಬಾ ಮೇಲೆ 2.8 ಬಿಲಿಯನ್ ಡಾಲರ್ ದಂಡ ವಿಧಿಸಲಾಗಿದೆ. ಜ್ಯಾಕ್ ಮಾ ದೀರ್ಘಕಾಲ ಹೊರಜಗತ್ತಿಗೆ ಕಾಣಿಸಿಕೊಂಡಿರಲಿಲ್ಲ. ಅವರನ್ನು ಚೀನಾ ಆಡಳಿತ ಕೊಂದಿದೆ ಎಂದೇ ಹೇಳಲಾಗಿತ್ತು.
