ಹುಳಿಯಾರು:
ಹುಳಿಯಾರು ಹೋಬಳಿಯ ಕಂಪನಹಳ್ಳಿ ಸರ್ಕಾರಿ ಕೆರೆಯ ಅಳತೆ ಕಾರ್ಯ ಸೋಮವಾರ ನಡೆದಿದ್ದು 10-15 ಎಕರೆಯಷ್ಟು ಕೆರೆ ಒತ್ತುವರಿಯಾಗಿರುವುದು ಪತ್ತೆಯಾಗಿದೆ.
ಕಂಪನಹಳ್ಳಿಯ ಸರ್ವೆ ನಂಬರ್ 19 ರಲ್ಲಿ 49 ಎಕರೆ 14 ಗುಂಟೆ ವಿಸ್ತೀರ್ಣದಲ್ಲಿ ಸರ್ಕಾರಿ ಕೆರೆಯಿದೆ. ಇದರಲ್ಲಿ 10-15 ಎಕರೆ ಒತ್ತುವರಿ ಮಾಡಿ ಸಾವಿರಾರು ತೆಂಗು, ಅಡಕೆ ಹಾಗೂ ಬಾಳೆ ಬೆಳೆದಿದ್ದಾರೆ. ಈಗ ಕೆರೆಯ ಗಡಿ ಗುರುತಿಸಿ ಪಂಚಾಯ್ತಿಗೆ ಮುಂದಿನ ಕ್ರಮಕ್ಕೆ ನೀಡಲಾಗಿದೆ ಎಂದು ತಾಲ್ಲೂಕು ಭೂ ಮಾಪಕ ಬಸವರಾಜು ತಿಳಿಸಿದರು.
ಪಿಡಿಒ ನಾರಾಯಣ್ ಅವರು ಮಾತನಾಡಿ, ಅಚ್ಚರಿ ಎನ್ನುವಂತೆ ಕೆರೆಗೆ ಏರಿ ಇದ್ದರೂ ಸಹ ಏರಿಯಿಂದ ಒಳಗಿರುವ ಕೆರೆ ಪ್ರದೇಶಕ್ಕೆ ರೈತರು ಅತಿಕ್ರಮ ಪ್ರವೇಶ ಮಾಡಿ ಬೆಳೆ ಬೆಳೆಯುತ್ತಿದ್ದಾರೆ. ಈಗ ಕೆರೆಯ ಪ್ರದೇಶದ ಗುರುತು ಕಾರ್ಯ ನಡೆದಿದ್ದು, ಮೇಲಧಿಕಾರಿಗಳ ಸೂಚನೆಯಂತೆ ಒತ್ತುವರಿ ತೆರವಿನ ಸಂಬಂಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ನಳಿನಾಕ್ಷಿ, ಗ್ರಾಪಂ ಸದಸ್ಯ ಪ್ರಕಾಶ್, ಪಂಚಾಯ್ತಿ ಕಾರ್ಯದರ್ಶಿ ಜಿ.ಜ್ಞಾನಮೂರ್ತಿ, ರೈತ ಮುಖಂಡರಾದ ಮರುಳಸಿದ್ಧಪ್ಪ, ಜಯಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
