ತೆರೆಮೇಲೆ ಯಶ್‌ರನ್ನು ನೋಡಲು 100 ದಿನಗಳಷ್ಟೇ ಬಾಕಿ….!

ಬೆಂಗಳೂರು :

    ʻರಾಕಿಂಗ್‌ ಸ್ಟಾರ್‌ʼ ಯಶ್‌ ಅವರು ಕೊನೆಯದಾಗಿ ತೆರೆಮೇಲೆ ಕಾಣಿಸಿಕೊಂಡಿದ್ದು 2022ರ ಏಪ್ರಿಲ್‌ನಲ್ಲಿ. ಇದೀಗ ಅವರ ಮುಂದಿನ ಸಿನಿಮಾ ʻಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ʼ ಮೇಲಿದೆ. ಈ ಚಿತ್ರದ ಮೂಲಕ ನಾಲ್ಕು ವರ್ಷಗಳ ನಂತರ ಯಶ್‌ ಅವರು ತೆರೆಮೇಲೆ ಕಾಣಿಸಿಕೊಳ್ಳಲಿದ್ದು, ಸದ್ಯ ಟಾಕ್ಸಿಕ್‌ ರಿಲೀಸ್‌ಗೆ 100 ದಿನಗಳು ಬಾಕಿ ಇವೆ. ಈ ಚಿತ್ರವು ಮುಂದಿನ ವರ್ಷ ಮಾರ್ಚ್‌ 19ರಂದು ತೆರೆಗೆ ಬರಲಿದೆ. ಸದ್ಯ ಈ ಚಿತ್ರದ ಬಗ್ಗೆ ಒಂದಷ್ಟು ಅಪ್ಡೇಟ್‌ ಅನ್ನು ಚಿತ್ರತಂಡ ಹಂಚಿಕೊಂಡಿದೆ. 

    ಯಶ್‌ ಅವರಿಗೆ ಜನವರಿ 8ರಂದು ಹುಟ್ಟುಹಬ್ಬ. ಅದೇ ದಿನ ಟಾಕ್ಸಿಕ್‌ ಸಿನಿಮಾದ ಕಡೆಯಿಂದ ಒಂದು ಬಿಗ್‌ ಅಪ್ಡೇಟ್‌ ಸಿಗಲಿದೆ. ಈ ಹಿಂದೆ ಒಂದು ಟೀಸರ್‌ ರಿಲೀಸ್‌ ಆಗಿತ್ತು. ಈ ಬಾರಿ ಅದಕ್ಕಿಂತಲೂ ಭಿನ್ನವಾದದನ್ನೇನೋ ನೀಡಲು ಚಿತ್ರತಂಡ ಪ್ಲ್ಯಾನ್‌ ಮಾಡಿಕೊಂಡಿದೆ. ಟ್ರೇಲರ್‌ ಅಥವಾ ಮತ್ತೊಂದು ಟೀಸರ್‌ ಅನ್ನು ಚಿತ್ರತಂಡ ರಿಲೀಸ್‌ ಮಾಡುವ ಸಾಧ್ಯತೆ ಇದೆ. 

    ಚಿತ್ರತಂಡವು ಯಶ್ ಅವರ ತೀವ್ರವಾದ ಅವತಾರವನ್ನು ತೋರಿಸುವ ಹೊಸ ಪೋಸ್ಟರ್ ಅನ್ನು ರಿಲೀಸ್‌ ಮಾಡಿದೆ. ಪೋಸ್ಟರ್‌ನಲ್ಲಿ, ಯಶ್ ರಕ್ತಸಿಕ್ತ ಸ್ನಾನದ ತೊಟ್ಟಿಯಲ್ಲಿ ಮಾದಕ, ಒರಟಾದ ಲುಕ್‌ನಲ್ಲಿ ಮಿಂಚಿದ್ದಾರೆ. ತಮ್ಮ ಬೈಸೆಪ್ಸ್ ತೋರಿಸಿರುವ ಯಶ್‌, ಮುಖವನ್ನು ಮರೆಮಾಚಿದ್ದಾರೆ. ಅವರ ದೇಹವು ಹಚ್ಚೆಗಳಿಂದ ತುಂಬಿದ್ದು, ಈ ಲುಕ್‌ ಅನ್ನು ಫ್ಯಾನ್ಸ್‌ ಹೊಗಳುತ್ತಿದ್ದಾರೆ. ಗುಡಿ ಪಾಡ್ವಾ, ಯುಗಾದಿ ಮತ್ತು ಈದ್ ಜೊತೆಗೆ ನಾಲ್ಕು ದಿನಗಳ ರಜಾದಿನವನ್ನು ಗುರಿಯಾಗಿಸಿಕೊಂಡು ಟಾಕ್ಸಿಕ್‌ ಸಿನಿಮಾವು ಮಾರ್ಚ್‌ 19ರಂದು ತೆರೆಕಾಣುತ್ತಿದೆ.

   ಟಾಕ್ಸಿಕ್ ಚಿತ್ರವನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದ್ದು, ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಇತರ ಭಾಷೆಗಳಲ್ಲಿಯೂ ಡಬ್ ಮಾಡಲಾಗುತ್ತಿದೆ.

   ಈ ಚಿತ್ರವನ್ನು ಗೀತು ಮೋಹನ್‌ದಾಸ್‌ ಅವರು ನಿರ್ದೇಶನ ಮಾಡುತ್ತಿದ್ದಾರೆ ಎಂಬುದನ್ನು ಹೊರತುಪಡಿಸಿ, ಮಿಕ್ಕ ಮಾಹಿತಿಗಳನ್ನು ಚಿತ್ರತಂಡ ಬಹಿರಂಗಪಡಿಸಿರಲಿಲ್ಲ. ಇದೀಗ ಆ ಕುರಿತ ಹೆಚ್ಚಿನ ಮಾಹಿತಿಗಳು ಗೊತ್ತಾಗಿವೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ರಾಜೀವ್ ರವಿ ಛಾಯಾಗ್ರಹಣವನ್ನು ಮಾಡಿದರೆ, ಕೆಜಿಎಫ್‌ನಲ್ಲಿ ಯಶ್ ಅವರೊಂದಿಗೆ ಕೆಲಸ ಮಾಡಿದ್ದ ರವಿ ಬಸ್ರೂರು ಸಂಗೀತ ಸಂಯೋಜಿಸುತ್ತಿದ್ದಾರೆ. ಸಲಾರ್‌, ಕೆಜಿಎಫ್‌ ಖ್ಯಾತಿಯ ಉಜ್ವಲ್ ಕುಲಕರ್ಣಿ ಸಂಕಲನವನ್ನು ಮಾಡುತ್ತಿದ್ದಾರೆ. ನಿರ್ಮಾಣ ವಿನ್ಯಾಸದ ಜವಾಬ್ದಾರಿಯನ್ನು ಟಿಪಿ ಅಬಿದ್ ವಹಿಸಿಕೊಂಡಿದ್ದು, ಹಾಲಿವುಡ್ ಸಾಹಸ ನಿರ್ದೇಶಕ ಜೆಜೆ ಪೆರ್ರಿ ಟಾಕ್ಸಿಕ್‌ನ ಮಹತ್ವದ ಸಾಹಸ ಸನ್ನಿವೇಶಗಳನ್ನು ನಿರ್ದೇಶನ ಮಾಡಿದ್ದಾರೆ. 

   ಹರ್ಷ, ಇಮ್ರಾನ್‌ ಸರ್ದಾರಿಯಾ, ಗಣೇಶ್‌ ಆಚಾರ್ಯ ಅವರು ನೃತ್ಯ ನಿರ್ದೇಶನ ಮಾಡುತ್ತಿದ್ದು, ಮೋಹನ್‌ ಬಿ ಕೆರೆ ಅವರು ಕಲಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಮತ್ತು ಯಶ್ ನಿರ್ಮಿಸುತ್ತಿದ್ದಾರೆ.

Recent Articles

spot_img

Related Stories

Share via
Copy link