ಚಿಕ್ಕನಾಯಕನಹಳ್ಳಿ :
ರಾಜಕೀಯಕ್ಕೆ ಆಕಸ್ಮಿಕವಾಗಿ ಬಂದಂತಹ ದಿ.ದೇವರಾಜು ಅರಸುರವರು ಮುಖ್ಯಮಂತ್ರಿಗಳಾಗಿ ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ಕರೆದೊಯ್ದು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದು ಹೆಸರಾದವರು ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ 103ನೇ ದೇವರಾಜು ಅರಸು ಜನ್ಮ ದಿನಾಚರಣೆಯನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗೇಸ್ ಅಧಿನಾಯಕಿ ಇಂದಿರಾಗಾಂಧಿ ರಾಜಕೀಯದಿಂದಲೇ ದೂರ ಸರಿಯುವ ಸಮಯದಲ್ಲಿ ಕರ್ನಾಟಕಕ್ಕೆ ಕಾಂಗ್ರೆಸ್ ಬಲಿಷ್ಠಗೊಳಿಸಿ ಇಂದಿರಾಗಾಂದಿ ಸಂಸದೆಯಾಗಲು ಶಕ್ತಿ ತುಂಬಿದವರು ಅರಸುರವರು ಎಂದು ಹೇಳಿದರು.
ತಾಲ್ಲೂಕು ಅರಸು ಸಮಾಜದ ಅಧ್ಯಕ್ಷ ಗೋಪಾಲರಾಜಅರಸು ಮಾತನಾಡಿ, ಸಾಹುಕಾರ್ ಚೆನ್ನಯ್ಯ ಇವರಿಂದ ರಾಜಕೀಯ ಪ್ರವೇಶ ಮಾಡಿ ರಾಜ್ಯದ ಜನರ ಆಶೋತ್ತರಗಳಿಗೆ ಉತ್ತಮ ಕೆಲಸ ನೀಡಿದ ಅರಸುರವರು, ಬದುಕಿನ ಕೊನೆಯ ದಿನಗಳಲ್ಲಿ ಸಾಕಷ್ಟು ನೋವು ಅನುಭವಿಸಿದರು ದೃತಿಗೆಡದೆ ಜನಪರ ಚಿಂತನೆಯಲ್ಲಿಯೇ ತೊಡಗಿದ್ದರು ಎಂದರು.
ತಾ.ಪಂ ಅಧ್ಯಕ್ಷೆ ಹೊನ್ನಮ್ಮ ಶೇಷಯ್ಯ ಮಾತನಾಡಿ, ಹಿಂದುಳಿದ ವರ್ಗದ ನೇಕಾರರಾಗಿ ಬಡ ಮಕ್ಕಳಿಗೆ ವಸತಿ ಶಾಲೆಗಳನ್ನು ತೆರೆಯುವ ಮೂಲಕ ಹಿಂದುಳಿದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಲ್ಪಸಂಖ್ಯಾತರ ಪ್ರಗತಿಗೆ ಕಾರಣರಾದವರು ಅರಸುರವರು ಎಂದರು.
ಮಾಜಿ ಪುರಸಭಾಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಬಡ ಕುಟುಂಬದವರಾದರೂ ಜಟ್ಟಿಯಾಗಿದ್ದ ಅರಸುರವನ್ನು ರಾಜರು ಕೆಲಸ ಕೊಡುವುದಾಗಿ ಬಂದು ನೋಡುವಂತೆ ಹೇಳಿದಾಗ ರಾಜಭಟರು ಅರಸುರವರನ್ನು 4 ದಿನಗಳಾದರೂ ಬಿಟ್ಟಿರಲಿಲ್ಲ ಆ ಸಮಯದಲ್ಲಿ ಸಂಕಲ್ಪ ಮಾಡಿದ್ದ ಅವರು ಛಲದಿಂದ ಮುಖ್ಯಮಂತ್ರಿ ಆದರು, ಅರಸುರವರ ಜನಪರ ಕಾರ್ಯದಿಂದ ಇಂದಿಗೂ ಸ್ಮರಣೀಯರಾಗಿದ್ದಾರೆ ಇಂತಹ ಕಾಳಜಿಯಿಂದಲೇ ಬಡವರ ಕಲ್ಯಾಣಕ್ಕಾಗಿ ಹಲವು ಖಾಯ್ದೆಯನ್ನು ಜಾರಿಗೆ ತಂದರು ಎಂದರು.
ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷ ಮಹಮದ್ ಖಲಂದರ್, ಪ್ರಭಾರ ಇ.ಓ ಆರ್.ಹರೀಶ್, ಬಿ.ಇ.ಓ ಕಾತ್ಯಾಯಿನಿ, ಎ.ಇ.ಇ ಗವಿರಂಗಯ್ಯ, ತಾ.ಪಂ ಸದಸ್ಯರಾದ ಕೇಶವಮೂರ್ತಿ, ಇಂದಿರಾಕುಮಾರಿ, ಕಲಾವತಿ, ಹಿಂದುಳಿದ ವರ್ಗದ ಇಲಾಖೆ ಶಿವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
