10 ನೇ ತರಗತಿ, ಪಿಯುಸಿಗೆ ಆಫ್‌ಲೈನ್ ತರಗತಿ ಮುಂದುವರಿಕೆ- ಸಚಿವ ಬಿ. ಸಿ.ನಾಗೇಶ್

ಬೆಂಗಳೂರು:

           ಬೆಂಗಳೂರಿನಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಳದೊಂದಿಗೆ 10ನೇ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪೋಷಕರು ತಮ್ಮ ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಆತಂಕದಲ್ಲಿದ್ದಾರೆ. ಆದಾಗ್ಯೂ, ಈ ತರಗತಿಗಳಿಗೆ ಆಫ್ ಲೈನ್ ಪಾಠಗಳು ಮುಂದುವರೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.

          ವಾಯ್ಸ್ ಆಫ್ ಪೇರೆಂಟ್ಸ್ ಕರ್ನಾಟಕ ಅಸೋಸಿಯೇಷನ್ ​​ಅಧ್ಯಕ್ಷ ಮತ್ತು 11 ನೇ ತರಗತಿ ವಿದ್ಯಾರ್ಥಿಯ ಪೋಷಕರಾದ ಮೊಹಮ್ಮದ್ ಶಕೀಲ್ ಮಾತನಾಡಿ, ಮಕ್ಕಳು ಅಪಾಯಕ್ಕೆ ತಳ್ಳಲು ಯಾವುದೇ ಕಾರಣವಿಲ್ಲ.

ಎರಡು ವಾರಗಳ ಅಕಾಡೆಮಿಕ್ ಶಿಕ್ಷಣ ವಿದ್ಯಾರ್ಥಿಗಳಿಗೆ ವ್ಯತ್ಯಾಸವನ್ನುಂಟುಮಾಡುವುದಿಲ್ಲ. ಆದಾಗ್ಯೂ, ವೈರಸ್‌ಗೆ ಒಡ್ಡಿಕೊಳ್ಳುವುದರಿಂದ ಖಂಡಿತವಾಗಿಯೂ ವ್ಯತ್ಯಾಸವಾಗುತ್ತದೆ ಎಂದು ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬೇಕಾಗಿರುವುದರಿಂದ ತರಗತಿಗಳನ್ನು ಮುಚ್ಚುವ ಯಾವುದೇ ಯೋಜನೆ ಇಲ್ಲ ಎಂದು ಸಚಿವ ಬಿ. ಸಿ. ನಾಗೇಶ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ಇದಲ್ಲದೆ, 15 ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಲಸಿಕೆಯನ್ನು ಪ್ರೋತ್ಸಾಹಿಸಲು ಶಾಲೆಗಳನ್ನು ತೆರೆಯಲಾಗಿದೆ ಎಂದು ಸಚಿವರ ಕಚೇರಿಯ ಮೂಲಗಳು ಉಲ್ಲೇಖಿಸಿವೆ.

ಹಲವಾರು ಮಕ್ಕಳು ತಮ್ಮ ಮೊದಲ ಡೋಸ್ ಲಸಿಕೆ ಪಡೆದಿದ್ದರೂ ಪೋಷಕರು ಅವರನ್ನು ಶಾಲೆಗೆ ಕಳುಹಿಸಲು ಜಾಗರೂಕರಾಗಿದ್ದಾರೆ. ಪೋಷಕರು ದೃಷ್ಟಿಯಲ್ಲಿ ಇದು ಲಸಿಕೆ ವೇಗವನ್ನು ಹೆಚ್ಚಿಸುವ ಗೇಮ್ ಪ್ಲಾನ್ ಆಗಿದೆ.

ಸಂಪೂರ್ಣ ಲಸಿಕೆ ಹಾಕಿಸಿಕೊಂಡಿರುವ ವೃತ್ತಿಪರರು ಹಾಗೂ ಕೆಲಸ ಮಾಡುವವರಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿರುವಾಗ ಲಸಿಕೆ ಹಾಕಿಸಿಕೊಳ್ಳದ ಮಕ್ಕಳು ತರಗತಿಗೆ ಹಾಜರಾಗಲು ಹೇಗೆ ಅವಕಾಶ ಮಾಡಿಕೊಡಲಾಗಿದೆ. ಇದು ಮಕ್ಕಳನ್ನು ಅಪಾಯಕ್ಕೆ ಸಿಲುಕಿಸುವುದರಲ್ಲಿ ಅರ್ಥವಿಲ್ಲ ಎಂದು ಶಕೀಲ್ ಹೇಳಿದರು.

ಪಾಸಿಟಿವಿಟಿ ಪ್ರಮಾಣ ಹೆಚ್ಚಾದರೆ ಇತರ ತರಗತಿಗಳಿಗೆ ಶಾಲೆಗಳನ್ನು ಮುಚ್ಚಲಾಗುವುದು ಎಂದು ಸಚಿವರು ಪ್ರಕಟಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link