ಗ್ವಾಲಿಯರ್:
ದೂರದ ದಕ್ಷಿಣ ಆಫ್ರಿಕಾದಿಂದ 12 ಚಿರತೆಗಳು ಭಾರತಕ್ಕೆ ಬಂದಿವೆ. ಭಾರತೀಯ ವಾಯು ಪಡೆಯ ಕಾರ್ಗೊ ವಿಮಾನ C-17 Globemaster ಈ ಚಿರತೆಗಳು ಬಂದಿವೆ . ಇಲ್ಲಿಂದ ಈ ಚಿರತೆಗಳನ್ನು ಹೆಲಿಕಾಪ್ಟರ್ ಮೂಲಕ ಕುನೊಗೆ ಕರೆದೊಯ್ಯಲಾಗುತ್ತದೆ.
ಅಲ್ಲಿ ಕೆಲ ದಿನಗಳ ಕಾಲ ಕುನೊವಿನಲ್ಲಿ ಇರಿಸಿ ನಂತರ ಇಲ್ಲಿನ ಪರಿಸರಕ್ಕೆ ಹೊಂದಿಕೊಂಡ ನಂತರ ಬಯಲು ಅರಣ್ಯಕ್ಕೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕುನೊ ತಲುಪಿದ ನಂತರ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೇ ಈ ಚಿರತೆಗಳನ್ನು ಸ್ವಾಗತಿಸಿ ಆವರಣದಲ್ಲಿ ಬಿಡುತ್ತಾರೆ.
ಚೀತಾ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳ ಪ್ರಕಾರ, ದಕ್ಷಿಣ ಆಫ್ರಿಕಾದಿಂದ ತರಲಾಗುತ್ತಿರುವ ಈ ಚಿರತೆಗಳಲ್ಲಿ ಏಳು ಗಂಡು ಮತ್ತು ಐದು ಹೆಣ್ಣು ಚಿರತೆಗಳು ಸೇರಿವೆ. ಮೊದಲು ಸೆಪ್ಟೆಂಬರ್ 2020ರಲ್ಲಿ, ನಮೀಬಿಯಾದಿಂದ ಎಂಟು ಚಿರತೆಗಳನ್ನು ತರಲಾಗಿತ್ತು. ಈ ಚಿರತೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಸಂದರ್ಭದಲ್ಲಿ ಸೆಪ್ಟೆಂಬರ್ 17 ರಂದು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2023/02/Untitled-7-13.jpg)