ಹಳಿ ತಪ್ಪಿದ ಗೂಡ್ಸ್‌ ರೈಲು : 12 ರೈಲುಗಳ ಓಡಾಟ ವ್ಯತ್ಯಯ

ಬೆಂಗಳೂರು :

     ಮಧುರೈ ವಿಭಾಗದ ಮಲವಿಟ್ಟನ್ ರೈಲು ನಿಲ್ದಾಣದಿಂದ ಹಾವೇರಿ ನಿಲ್ದಾಣದವರೆಗೆ 2408 ಟನ್ ರಸಗೊಬ್ಬರದ ಚೀಲಗಳನ್ನು ಹೊತ್ತೊಯ್ಯುತ್ತಿದ್ದ ಲೋಡ್ ಗೂಡ್ಸ್ ರೈಲಿನ ಆರು ಬೋಗಿಗಳು ಹಳಿ ತಪ್ಪಿವೆ. ಬೆಂಗಳೂರಿನಿಂದ ಸುಮಾರು 99 ಕಿಲೋ ಮೀಟರ್ ದೂರದಲ್ಲಿ ಈ ಘಟನೆ ನಡೆದಿದ್ದು, 12 ರೈಲುಗಳ ಓಡಾಟದಲ್ಲಿ ವ್ಯತ್ಯಯವಾಗಿದೆ.

     ರೈಲಿನಲ್ಲಿದ್ದ ಲೋಕೋ ಪೈಲಟ್ , ಸಹಾಯಕ ಲೋಕೋ ಪೈಲಟ್ ಮತ್ತು ಟ್ರೈನ್ ಮ್ಯಾನೇಜರ್ ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ. ಘಟನೆ ಬಳಿಕ ಈ ಮಾರ್ಗದಲ್ಲಿ ಓಡಾಡುವ ನಾಲ್ಕು ರೈಲುಗಳನ್ನು ರದ್ದುಗೊಳಿಸಲಗಿದ್ದು, ಎಂಟು ರೈಲುಗಳ ಮಾರ್ಗಗಳನ್ನು ಬದಲಿಸಲಾಗಿದೆ. ಸದ್ಯ ಈ ಮಾರ್ಗವನ್ನು ಮುಚ್ಚಲಾಗಿದ್ದು ಮರುಸ್ಥಾಪನೆ ಕಾರ್ಯ ನಡೆಯುತ್ತಿದೆ.
     ನೈಋತ್ಯ ರೈಲ್ವೆಯ ಅಧಿಕೃತ ಪ್ರಕಟಣೆಯ ಪ್ರಕಾರ, ಶುಕ್ರವಾರ ಮುಂಜಾನೆ 2.12 ಗಂಟೆಗೆ ಬೆಂಗಳೂರು-ಸೇಲಂ ವಿಭಾಗದ ಮಾರಂಡಹಳ್ಳಿ ಮತ್ತು ರಾಯಕ್ಕೊಟ್ಟೈ ನಿಲ್ದಾಣಗಳ ಈ ಘಟನೆ ನಡೆದಿದೆ. ರೈಲು ಹಳಿ ತಪ್ಪಲು ಕಾರಣವೇನು ಎಂದು ಇನ್ನೂ ತಿಳಿದುಬಂದಿಲ್ಲ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

     ರೈಲಿನಲ್ಲಿ ಒಟ್ಟು 42 ವ್ಯಾಗನ್‌ಗಳಿದ್ದು, 6 ವ್ಯಾಗನ್‌ಗಳು ಹಳಿ ತಪ್ಪಿವೆ. ಹಿರಿಯ ಅಧಿಕಾರಿಗಳನ್ನು ಒಳಗೊಂಡ ಬೆಂಗಳೂರು ವಿಪತ್ತು ನಿರ್ವಹಣಾ ತಂಡವು ಅಪಘಾತ ಪರಿಹಾರ ರೈಲಿನೊಂದಿಗೆ ಬೆಳಗಿನ ಜಾವ 3 ಗಂಟೆಗೆ ಹಳಿ ತಪ್ಪಿದ ಸ್ಥಳಕ್ಕೆ ತೆರಳಿ, ಪುನಃಸ್ಥಾಪನೆ ಕೆಲಸ ಪ್ರಗತಿಯಲ್ಲಿದೆ ಎಂದು ಪ್ರಕಟಣೆ ತಿಳಿಸಿದೆ. ಈ ಘಟನೆ ಬಳಿಕ ನಾಲ್ಕು ರೈಲುಗಳನ್ನು ರದ್ದುಗೊಳಿಸಲಾಗಿದೆ.

     ಕೆಎಸ್‌ಆರ್ ಬೆಂಗಳೂರು-ಜೋಲಾರ್‌ಪೇಟ್ಟೈ-ಕೆಎಸ್‌ಆರ್ ಬೆಂಗಳೂರು ಮೆಮು ವಿಶೇಷ ರೈಲು. ಕೆಎಸ್‌ಆರ್‌ನಿಂದ ಬೆಳಗ್ಗೆ 8.45ಕ್ಕೆ ಮತ್ತು ಜೋಲಾರ್‌ಪೇಟೆಯಿಂದ ಮಧ್ಯಾಹ್ನ 2 ಗಂಟೆಗೆ ಹೊರಡಬೇಕಿತ್ತು. ಸೇಲಂ ಮತ್ತು ಧರ್ಮಪುರಿಯಿಂದ ಹೊರಡುವ ಸೇಲಂ – ಯಶವಂತಪುರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ. 16212) – ಕೆಎಸ್‌ಆರ್ ಬೆಂಗಳೂರು ಮೆಮು ವಿಶೇಷ (ರೈಲು ಸಂಖ್ಯೆ. 06278) ಧರ್ಮಪುರಿಯಿಂದ ಹೊರಡುತ್ತವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap