ಕಣಮಿಣಿಕೆಯಲ್ಲಿ ಶನಿವಾರ 1,212 ಫ್ಲಾಟ್ ಗಳ ಮಾರಾಟ!

ಬೆಂಗಳೂರು:

    ಕಣಮಿಣಿಕೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ 1,212 ಫ್ಲಾಟ್ ಗಳನ್ನು ಡಿಸೆಂಬರ್ 14 ( ಶನಿವಾರ) ನಡೆಯಲಿರುವ ಫ್ಲಾಟ್ ಮೇಳದಲ್ಲಿ ಸ್ಥಳದಲ್ಲಿಯೇ ಮಾರಾಟ ಮಾಡಲಾಗುತ್ತಿದೆ. ಅಲ್ಲದೇ, ತಿಪ್ಪಸಂದ್ರದಲ್ಲಿ ನಿರ್ಮಿಸಲಾಗಿರುವ ನೂರಾರು 1 BHK ಫ್ಲಾಟ್ ಗಳ ಮಾರಾಟವೂ ನಡೆಯಲಿದೆ.

    ಮಾರಾಟ ಮೇಳದಲ್ಲಿ ಮಾರಾಟವಾದ ಫ್ಲಾಟ್ ಗಳ ಹಂಚಿಕೆದಾರರಿಗೆ ಸ್ಥಳದಲ್ಲಿಯೇ ತಾತ್ಕಾಲಿಕ ಪತ್ರವನ್ನು ಹಸ್ತಾಂತರಿಸಲಾಗುವುದು, ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಕಣಮಿಣಿಕೆ ವಸತಿ ಸಮುಚ್ಚಯದ ಬಳಿ ಫ್ಲಾಟ್ ಮೇಳ ನಡೆಯಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ

   ಬೆಂಗಳೂರು-ಮೈಸೂರು ರಸ್ತೆಗೆ ಸಮೀಪವಿರುವ ಕಣಮಿಣಿಕೆ ವಸತಿ ಸಂಕೀರ್ಣದಲ್ಲಿ ಒಟ್ಟು 748 2BHK ಮತ್ತು 464 3BHK ಫ್ಲಾಟ್‌ಗಳನ್ನು ಹಂಚಿಕೆ ಮಾಡಲಾಗುತ್ತಿದೆ. 2BHK ಫ್ಲಾಟ್‌ಗಳ ಬೆಲೆ ರೂ. 25 ಲಕ್ಷದಿಂದ 30 ಲಕ್ಷ, 3BHK ಫ್ಲಾಟ್‌ಗಳ ಬೆಲೆ ರೂ. 40 ಲಕ್ಷದಿಂದ 64 ಲಕ್ಷ ವಿದೆ. ತಿಪ್ಪಸಂದ್ರ ವಸತಿ ಯೋಜನೆಯ 1BHK ಫ್ಲಾಟ್‌ಗಳ ಬೆಲೆ ರೂ. 14.5 ಲಕ್ಷ ಎಂದು ಮಾಹಿತಿ ನೀಡಲಾಗಿದೆ. 

   ತಿಪ್ಪಸಂದ್ರ ವಸತಿ ಯೋಜನೆಯನ್ನು ಜೆ. ಪಿ. ನಗರ 9ನೇ ಫೇಸ್‌ನಲ್ಲಿ ನಿರ್ಮಾಣ ಮಾಡಲಾಗಿದ್ದು, ಕನಕಪುರ ರಸ್ತೆಯಲ್ಲಿರುವ ಸೌತ್ ಫೋರಂ ಮಾಲ್ ಮತ್ತು ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಿಂದ 1 ಕಿ. ಮೀ. ದೂರದಲ್ಲಿದೆ. 

Recent Articles

spot_img

Related Stories

Share via
Copy link