ಪಾಕಿಸ್ಥಾನದಲ್ಲಿ ದಾಳಿ : 123 ಮಂದಿಗೆ ಗಾಯ

ಪೇಶಾವರ: 

        ಜಮಿಯತ್ ಉಲೇಮಾ-ಎ-ಇಸ್ಲಾಂ-ಎಫ್(ಜೆಯುಐ-ಎಫ್) ಪಕ್ಷವನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದ್ದು, ಅಫ್ಘಾನಿಸ್ತಾನ ಗಡಿ ಸಮೀಪವಿರುವ ಖಾರ್ ಪಟ್ಟಣದಲ್ಲಿ ನಡೆದ ಈ ಸಮಾವೇಶದಲ್ಲಿ 400ಕ್ಕೂ ಹೆಚ್ಚು ಸದಸ್ಯರು ಮತ್ತು ಬೆಂಬಲಿಗರು ಭಾಗವಹಿಸಿದ್ದರು.

   “ಆಸ್ಪತ್ರೆಯಲ್ಲಿ 39 ಮೃತ ದೇಹಗಳಿದ್ದು, 123 ಮಂದಿ ಗಾಯಗೊಂಡಿದ್ದಾರೆ. ಆ ಪೈಕಿ 17 ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು” ಎಂದು ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಆರೋಗ್ಯ ಸಚಿವ ರಿಯಾಜ್ ಅನ್ವರ್ ಅವರು ಎಎಫ್‌ಪಿಗೆ ತಿಳಿಸಿದ್ದಾರೆ.ಪ್ರಾಂತೀಯ ಗವರ್ನರ್ ಹಾಜಿ ಗುಲಾಂ ಅಲಿ ಅವರು ಸಾವಿನ ಸಂಖ್ಯೆಯನ್ನು ಎಎಫ್‌ಪಿಗೆ ದೃಢಪಡಿಸಿದ್ದಾರೆ.

    ಇದುವರೆಗೂ ಯಾವುದೇ ಉಗ್ರ ಸಂಘಟನೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಆದರೆ ISIS ಸಂಘಟನೆಯ ಸ್ಥಳೀಯ ಘಟಕ ಇತ್ತೀಚೆಗೆ ಜೆಯುಐ-ಎಫ್ ಮೇಲೆ ದಾಳಿಗಳನ್ನು ನಡೆಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap