ಉಜ್ಜಯಿನಿ:
ದೇಶಾದ್ಯಂತ ಸಡಗರ-ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಬಣ್ಣಗಳ ಹಬ್ಬ ಎಂದೂ ಕರೆಯಲ್ಪಡುವ ಹೋಳಿಯು ವಸಂತಕಾಲದ ಆಗಮನ ಮತ್ತು ಚಳಿಗಾಲದ ಅಂತ್ಯವನ್ನು ಸೂಚಿಸುತ್ತದೆ. ಬೆಳಗ್ಗೆಯಿಂದಲೇ ದೇವಾಲಯಗಳಿಗೆ ಆಗಮಿಸುತ್ತಿರುವ ಜನರು, ದೇವರ ದರ್ಶನ ಪಡೆದು, ಪರಸ್ಪರ ಬಣ್ಣ ಎರಚುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.
ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಜಾರ್ಖಂಡ್ ನ ಬೈದನಾಥ ದೇವಾಲಯ, ಕೊಲ್ಲಂನ ಚವಾರದಲ್ಲಿರುವ ಕೊಟ್ಟಂಕುಳಂಗರ ದೇವಿ ದೇವಸ್ಥಾನ ಸೇರಿದಂತೆ ದೇಶದ ಹಲವೆಡೆ ದೇವಾಲಯಗಳು ಜನರಿಂದ ತುಂಬಿ ತುಳುಕುತ್ತಿದ್ದು, ವಿಶೇಷ ಪ್ರಾರ್ಥನೆ, ಪೂಜಾ ಕೈಂಕರ್ಯಗಳು ನೆರವೇರುತ್ತಿವೆ.