ರೈತ ವಿರೋಧಿ ಬಿಜೆಪಿಗರಿಗೆ 13 ಸವಾಲುಗಳು….!

 

    ಕೇಂದ್ರ ಮತ್ತು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯು ಕಳೆದ ಕೆಲವು ವರ್ಷಗಳಿಂದ ನಮ್ಮ ರಾಜ್ಯದ ಹಾಲು ಉತ್ಪಾದಕ ರೈತರ ಬೆನ್ನೆಲುಬನ್ನು ಮುರಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ನಾನು 2020 ರಿಂದ ಹೇಳುತ್ತಲೆ ಬಂದಿದ್ದೇನೆ. ಸರ್ಕಾರಕ್ಕೆ ಪತ್ರಗಳನ್ನು ಬರೆದು ಎಚ್ಚರಿಸಿದ್ದೇನೆ. ಸದನದಲ್ಲಿ ಪ್ರಸ್ತಾಪಿಸಿದ್ದೇನೆ. ನನ್ನ ಸಲಹೆ, ಎಚ್ಚರಿಕೆ ಮತ್ತು ವಿರೋಧವನ್ನು ಬಿಜೆಪಿ ಸರ್ಕಾರ ಪರಿಗಣಿಸುವ ಬದಲು ರೈತರನ್ನು ಶತ್ರುಗಳು ಎಂದು ಭಾವಿಸಿ ಅವರ ಆರ್ಥಿಕ ಚೈತನ್ಯವನ್ನು ಮುರಿದು ಹಾಕಲು ಸನ್ನದ್ಧವಾಗಿ ನಿಂತಿದೆ.

     ಮೋದಿಯವರ ಆಪ್ತ ಬಳಗದಲ್ಲಿರುವ ಅಂಬಾನಿಯ ಕಣ್ಣು ದೇಶದ ಹಾಲಿನ ಮೇಲೆ ಬಿದ್ದಿದೆ. ಈಗ ಬೇರೆ ದೇಶಗಳಿಂದ ಆಮದು ಮಾಡಿಕೊಂಡರೂ ಅಂಬಾನಿಯ ಮೂಲಕವೆ ಮಾಡಿಕೊಳ್ಳುತ್ತಾರೆ. ಅದಕ್ಕಾಗಿಯೆ ಅಮುಲ್‌ನ ಎಂಡಿಯಾಗಿದ್ದ ಆರ್‌ಎಸ್ ಸೋಧಿಯವರನ್ನು ಆಪರೇಷನ್ ಮಾಡಿ ರಿಲಯನ್ಸ್ ಕಂಪೆನಿಗೆ ಸೇರಿಸಿಕೊಂಡಿದ್ದಾರೆ.

     ಅಮಿತ್‌ಶಾ ಅವರು ರಾಜ್ಯಗಳಲ್ಲಿರುವ ಹಾಲು ಮಹಾಮಂಡಲಗಳನ್ನು ಒಗ್ಗೂಡಿಸುವುದಾಗಿ ಹೇಳಿಕೆ ಕೊಟ್ಟಿದ್ದರು ಅದರ ಭಾಗವಾಗಿ ಈಗ ರಾಜ್ಯಕ್ಕೆ ಅಮುಲ್ ವಕ್ಕರಿಸಿಕೊಂಡಿದೆ. ಈಗ ನಂದಿನಿ ಆತಂಕ ಎದುರಿಸುತ್ತಿದೆ. ಮೋದಿ ಮತ್ತು ಅಮಿತ್ ಶಾ ಅವರು ನಮ್ಮ ನಂದಿನಿಯನ್ನಷ್ಟೆ ಅಲ್ಲ ಅಮುಲ್ ಅನ್ನೂ ಸಹ ಮುಳುಗಿಸಲು ಯೋಜನೆ ಹಾಕಿಕೊಂಡಿರುವAತೆ ಕಾಣಿಸುತ್ತಿದೆ.

    ಇತ್ತೀಚೆಗೆ ಗುಜರಾತಿನಲ್ಲಿ ಮಾಲ್ದಾರಿ ಎಂಬ ಪಶುಪಾಲಕ ಸಮುದಾಯದವರು ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದರು. ಯಾವುದಾದರೂ ಹಸು ನಗರಗಳಲ್ಲಿ ಕಾಣಿಸಿಕೊಂಡರೆ ಅದರ ಮಾಲಿಕನಿಗೆ 5000 ದಿಂದ 50000 ರೂಪಾಯಿ ದಂಡ ಹಾಕುವ, ವರ್ಷಗಟ್ಟಲೆ ಜೈಲಿಗೆ ಅಟ್ಟುವ ಕಾನೂನುಗಳನ್ನು ಗುಜರಾತಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ಕರ್ನಾಟಕದ ಬಿಜೆಪಿ ಸರ್ಕಾರದ ಹಾಗೆಯೆ ಅಲ್ಲಿಯೂ ಕೂಡ ಗೋಮಾಳಗಳು, ಹುಲ್ಲುಗಾವಲುಗಳನ್ನು ಖಾಸಗಿಯವರಿಗೆ ನೀಡಲಾಗುತ್ತಿದೆ.

     ದನಗಳು ಮೇಯಲು ಹುಲ್ಲು ಇಲ್ಲ. ಆಹಾರ ಹುಡುಕಿ ಬೀದಿಗಳಿಗೆ ಬಂದರೆ ಅವುಗಳ ಮಾಲಿಕರಿಗೆ ಜೈಲು ಮತ್ತು ದಂಡ ವಿಧಿಸಲಾಗುತ್ತಿದೆ. ಬಿಜೆಪಿಯ ಈ ಮನೆಹಾಳು ಕಾನೂನಿಗೆ ಬೇಸತ್ತು ಅಲ್ಲಿನ ಜನ ಹಸುಗಳನ್ನು ಸಾಕುವುದನ್ನೆ ನಿಲ್ಲಿಸುತ್ತಿದ್ದಾರೆ. ಹಾಗಾಗಿಯೆ ಇತ್ತೀಚೆಗೆ ಗುಜರಾತಿನ ಪಶುಪಾಲಕ ಸಮುದಾಯಗಳು ಮಹಾ ಪಂಚಾಯತ್ ಮಾಡಿ “ಬಿಜೆಪಿ ಎಂದರೆ ಹಸುಗಳ ವಿರೋಧಿ, ಬಿಜೆಪಿ ಎಂದರೆ ಪಶುಪಾಲಕ ವಿರೋಧಿ, ಬಿಜೆಪಿಯು ಹಸುಗಳ ಹೆಸರಲ್ಲಿ ರಾಜಕಾರಣ ಮಾಡುತ್ತಿದೆ, ಬಿಜೆಪಿಯು ನಂಬಿಕಾರ್ಹವಲ್ಲ” ಎಂದು ಘೋಷಣೆ ಕೂಗಿದ್ದರು. ತಾವು ಪಶು ಸಾಕಣೆಯ ಪರವಾಗಿದ್ದೇವೆಂದು ಹೇಳಿಕೊಳ್ಳುವ ಬಿಜೆಪಿ ಎಂದಿಗೂ ಪಶುಪಾಲಕರ ಪರವಾಗಿಲ್ಲ. ಅವರು ಅದಾನಿ ಅಂಬಾನಿಗಳ ಬ್ಯುಸಿನೆಸ್ ಪರವಾಗಿದ್ದಾರೆ. ಹಾಗಾಗಿ ಮೊದಲು ನಂದಿನಿಯನ್ನು ಮುಳುಗಿಸಿ ನಂತರ ಅಮುಲ್ ಅನ್ನು ಮುಳುಗಿಸುತ್ತಾರೆ.

     ರಾಜ್ಯದಲ್ಲಿ ಸುಮಾರು 1 ಕೋಟಿ ಗ್ರಾಮೀಣ ಜನರ ಬದುಕು ಹಾಲಿನ ಮೇಲೆ ನಿಂತಿದೆ. ರೈತರು, ಹಿಂದುಳಿದವರು ಮತ್ತು ದಲಿತ ಸಮುದಾಯಗಳ ಅನೇಕರ ಮಕ್ಕಳ ಶಿಕ್ಷಣ ಹೈನುಗಾರಿಕೆಯ ಮೇಲೆ ನಿಂತಿದೆ. ಗ್ರಾಮೀಣ ಕರ್ನಾಟಕದ ಹೆಣ್ಣುಮಕ್ಕಳು 1-2 ಹಸುಗಳನ್ನು ಸಾಕಿ ತಮ್ಮ ಕುಟುಂಬಗಳನ್ನು ನಿಭಾಯಿಸುತ್ತಿದ್ದಾರೆ. ಇದರ ಮೇಲೆ ಈಗ ಮೋದಿ, ಅಮಿತ್ ಶಾ, ಬಿಜೆಪಿ ಮತ್ತು ಅದಾನಿ ಮತ್ತು ಅಂಬಾನಿಗಳ ಕಣ್ಣು ಬಿದ್ದಿದೆ.

     ರಾಜ್ಯದ ಬಿಜೆಪಿಯವರು ಗುಜರಾತಿನ ಅದಾನಿ, ಅಂಬಾನಿಗಳ ಹಿತಾಸಕ್ತಿಯ ಪರವಾಗಿ ನಿಂತು ರಾಜ್ಯದ ರೈತರ ಮೇಲೆ ಯುದ್ಧ ಸಾರಿದ್ದಾರೆ. ಅದಕ್ಕಾಗಿಯೆ ನಂದಿನಿ ಉತ್ಪನ್ನಗಳ ಮೇಲೆ ದಾಳಿ ನಡೆಸಲು ತಾವೆ ಅಮುಲ್ ರಾಯಭಾರಿಗಳಾಗಿದ್ದಾರೆ. ಈ ಬಿಜೆಪಿಗರ ರಾಷ್ಟ್ರಪ್ರೇಮವೆಂದರೆ ಅದು ಅದಾನಿ, ಅಂಬಾನಿ ಮತ್ತು ಗುಜರಾತಿನ ಕಾರ್ಪೊರೇಟ್ ಬಂಡವಾಳಿಗರ ಮೇಲಿನ ಪ್ರೇಮ ಮಾತ್ರ. ಹಾಗಾಗಿ ಕರ್ನಾಟಕದ ಅಷ್ಟೂ ಬಿಜೆಪಿಯವರು ನಾಡದ್ರೋಹಿಗಳಾಗಿ ಪರಿವರ್ತನೆಯಾಗಿದ್ದಾರೆ.

ಬಿಜೆಪಿಯವರು ಪಶುಪಾಲಕರ ಪರವಾಗಿದ್ದರೆ ನಾನು ಹಿಂದಿನಿAದಲೂ ಕೇಳುತ್ತಾ ಬಂದಿರುವ ಈ ಪ್ರಶ್ನೆಗಳಿಗೆ ಉತ್ತರ ನೀಡಬೇಕು.

1. ಹಿಂಡಿ ಮತ್ತಿತರ ಪಶು ಆಹಾರಗಳ ಮೇಲೆ ವಿಧಿಸುತ್ತಿರುವ ಜಿಎಸ್‌ಟಿಯನ್ನು ಯಾಕೆ ರದ್ದು ಮಾಡಿಲ್ಲ?

2. ರಾಜ್ಯ ಸರ್ಕಾರವೆ ನನಗೆ ನೀಡಿರುವ ಮಾಹಿತಿ ಪ್ರಕಾರ 2019 ರಲ್ಲಿ 1 ಕೋಟಿ 29 ಲಕ್ಷ ಇದ್ದ ಜಾನುವಾರುಗಳು 2022ರ ಡಿಸೆಂಬರ್ ವೇಳೆಗೆ 1.15 ಕೋಟಿಗೆ ಇಳಿಕೆಯಾಗಿವೆ. ಹಾಗಿದ್ದರೆ 14 ಲಕ್ಷ ರಾಸುಗಳು ಎಲ್ಲಿ ಹೋದವು? ಜಾನುವಾರು ಹತ್ಯಾ ನಿಷೇಧ ಕಾಯ್ದೆಯ ಕಾರಣಕ್ಕಾಗಿ ನಿಮ್ಮ ಕಿರುಕುಳದಿಂದ ರೈತರು ತಮ್ಮ ಹಸುಗಳನ್ನೆಲ್ಲ ಮಾರಿಬಿಟ್ಟರೆ?

3. 2014 ರಲ್ಲಿ 45 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು, 2017ರ ಕೊನೆಯ ವೇಳೆಗೆ 73 ಲಕ್ಷ ಲೀಟರ್‌ಗೆ ಏರಿಕೆಯಾಗಿತು? ಇದರಿಂದಾಗಿ ಶೇ.61 ರಷ್ಟು ಹಾಲಿನ ಉತ್ಪಾದನೆ ಹೆಚ್ಚಾಗಿತ್ತು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈಗ ಯಾಕೆ 71 ಲಕ್ಷ ಲೀಟರ್‌ಗಳಿಗೆ ಇಳಿಕೆಯಾಗಿದೆ?

4. ನಮ್ಮ ಸರ್ಕಾರದ ಅವಧಿಯಲ್ಲಿ ಪ್ರತಿ ಲೀಟರ್ ಹಾಲಿಗೆ ಕೊಡುವ ಪ್ರೋತ್ಸಾಹಧನವನ್ನು 5 ರೂಪಾಯಿಗೆ ಏರಿಸಿದ್ದೆವು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾಕೆ ಒಂದು ರೂಪಾಯಿಯನ್ನೂ ಹೆಚ್ಚು ಮಾಡಲಿಲ್ಲ?

5. ನಮ್ಮ ಸರ್ಕಾರ ಇದ್ದಾಗ ವರ್ಷಕ್ಕೆ 1356 ಕೋಟಿಗೂ ಹೆಚ್ಚು ಹಣವನ್ನು ಹಾಲಿನ ಪ್ರೋತ್ಸಾಹಧನವಾಗಿ ರೈತರಿಗೆ ಕೊಡುತ್ತಿದ್ದೆವು. ಆದರೆ ಬೊಮ್ಮಾಯಿ ಸರ್ಕಾರ 1200 ಕೋಟಿಯಷ್ಟನ್ನೂ ಕೊಡುತ್ತಿಲ್ಲ ಯಾಕೆ?

6. ನಾವು ಶಾಲಾ ಮಕ್ಕಳಿಗೆ ವಾರದಲ್ಲಿ 5 ದಿನ ಕೆನೆಭರಿತ ಹಾಲನ್ನು ನೀಡುತ್ತಿದ್ದೆವು. ಇದರಿಂದಾಗಿ ಮಕ್ಕಳ ಅನಿಮಿಯಾ ಪ್ರಮಾಣ ಕಡಿಮೆಯಾಗಿತ್ತು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅನಿಮಿಯಾ ಪ್ರಮಾಣ ಕಡಿಮೆಯಾಗುವ ಬದಲು ಶೇ.65.5 ಕ್ಕೆ ಏರಿಕೆಯಾಗಿದೆಯೆಂದು ಮೋದಿ ಸರ್ಕಾರವೆ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ ಈ ಪ್ರಮಾಣದಲ್ಲಿ ಅನಿಮಿಯಾ ಜಾಸ್ತಿಯಾಗಲು ಕಾರಣ ಏನು? ಬೊಮ್ಮಾಯಿ ಸರ್ಕಾರ ಮಕ್ಕಳಿಗೆ ಹಾಲು ಕೊಡುವುದನ್ನು ನಿಲ್ಲಿಸಿರುವುದು ಏಕೆ? ಮಕ್ಕಳ ಹಾಲಿಗೆ ಬಿಡುಗಡೆ ಮಾಡಬೇಕಾದ ಅನುದಾನವನ್ನು ನಿಲ್ಲಿಸಿರುವುದು ಏಕೆ?

7. ಮಕ್ಕಳು ಕುಡಿಯುವ ಹಾಲಿಗೆ, ರೈತರಿಗೆ ನೀಡುವ ಪ್ರೋತ್ಸಾಹಧನಕ್ಕೆ ಹಣ ಇಲ್ಲ ಎಂದಾದರೆ ಆರೆಸ್ಸೆಸ್ ಅಂಗ ಸಂಸ್ಥೆಗಳಾದ ರಾಷ್ಟೊçÃತ್ಥಾನ ಪರಿಷತ್, ಜನಸೇವಾ ಟ್ರಸ್ಟ್, ಚಾಣುಕ್ಯ ವಿಶ್ವವಿದ್ಯಾಲಯ ಮುಂತಾದವುಗಳಿಗೆ ಸಾವಿರಾರು ಕೋಟಿ ಬೆಲೆ ಬಾಳುವ ಭೂಮಿಯನ್ನು, ಗೋಮಾಳಗಳನ್ನು ಕೇವಲ ಕೆಲವೆ ಕೋಟಿರೂಗಳಿಗೆ ನೀಡಿ ರಾಜ್ಯದ ಜನರಿಗೆ ಅನ್ಯಾಯ ಮಾಡಿದ್ದು ಏಕೆ?

8. ಚಿತ್ರದುರ್ಗ ಮುಂತಾದ ಜಿಲ್ಲೆಗಳಲ್ಲಿರುವ ಅಮೃತ್ ಮಹಲ್ ಕಾವಲುಗಳನ್ನು ಡಿನೋಟಿಫೈ ಮಾಡಿ ಖಾಸಗಿಯವರಿಗೆ ನೀಡಿ ಜಾನುವಾರುಗಳಿಗೆ ಮೇವಿಲ್ಲದಂತೆ ಮಾಡಿದ್ದು ಏಕೆ?

9. ನಮ್ಮ ಸರ್ಕಾರದ ಅವಧಿಯಲ್ಲಿ 30 ಕೆಜಿ ಚೀಲದ ಹಿಂಡಿಗೆ 400ರೂ ಬೆಲೆ ಇದ್ದದ್ದು ಈಗ 1450 ರೂ ಆಗಿದ್ದು ಏಕೆ? 450ರೂ ಇದ್ದ ಬೂಸದ ಬೆಲೆ 1400 ರೂಗೆ ಏರಿಕೆಯಾಗಿದ್ದಕ್ಕೆ ಕಾರಣ ಏನು? 650ರೂ ಇದ್ದ ಪಶು ಆಹಾರ 1250ರೂ ಆಗಲು ಯಾರು ಕಾರಣ?

10. ಲಕ್ಷಾಂತರ ಜಾನುವಾರುಗಳಿಗೆ ಚರ್ಮಗಂಟು ಕಾಯಿಲೆ ಬಂದಿದೆ. ಇದರಿಂದಾಗಿ ಪ್ರತಿ ದಿನ ಸುಮಾರು 10 ಕೋಟಿ ರೂಪಾಯಿಗಳಷ್ಟು ನಷ್ಟವನ್ನು ಹಾಲು ಕರೆಯುವ ರೈತರು ಅನುಭವಿಸುತ್ತಿದ್ದಾರೆ. ಇವರಿಗೆ ಪರಿಹಾರ ಕೊಡಿ ಎಂದು ನಾನು ಬೆಳಗಾವಿ ಅಧಿವೇಶನದಲ್ಲಿ ಒತ್ತಾಯ ಮಾಡಿದ್ದೆ. ಆದರೂ ಬಿಜೆಪಿ ಸರ್ಕಾರ ಯಾಕೆ ಪರಿಹಾರ ನೀಡಲಿಲ್ಲ?

11. ರಾಜ್ಯ ಸರ್ಕಾರ ನನಗೆ ನೀಡಿರುವ ಮಾಹಿತಿ ಪ್ರಕಾರ 157ಕ್ಕೂ ಹೆಚ್ಚು ಗೋಶಾಲೆಗಳು ರಾಜ್ಯದಲ್ಲಿವೆ. ಆದರೆ ಬಹುಪಾಲು ಗೋಶಾಲೆಗಳಲ್ಲಿ 10-20 ಗಂಡು ಕರುಗಳಿದ್ದರೆ 100-200ಹಸುಗಳಿವೆ. ಹಾಗಿದ್ದರೆ ಹುಟ್ಟಿದ ಗಂಡುಕರುಗಳೆಲ್ಲ ಎಲ್ಲಿ ಹೋದವು? ಸರ್ಕಾರ ಈ ಗೋಶಾಲೆಗಳಿಗೆ ಕೋಟ್ಯಾಂತರ ಅನುದಾನ ನೀಡುತ್ತಿದೆ, ಆದರೆ ಅಲ್ಲಿ ಹುಟ್ಟುವ ಕರುಗಳ, ಜಾನುವಾರುಗಳ ಆಡಿಟ್ ಮಾಡದೆ ಇರಲು ಕಾರಣ ಏನು?

12. ಕೆಎಂಎಫ್‌ನಲ್ಲಿ ನೇಮಕಾತಿಗಳನ್ನು ಮಾಡಲು ರಾಜ್ಯ ಬಿಜೆಪಿ ಸರ್ಕಾರ ಗುಜರಾತ್ ಮೂಲದ ಕಂಪೆನಿಗೆ ನೀಡಿರುವುದೇಕೆ? ಆ ಕಂಪೆನಿಗೆ ನೀಡುವಂತೆ ಒತ್ತಡ ಹೇರಿದ್ದು ಯಾರು?

13. ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪಶುಪಾಲಕರಿಗೆ ಯಾಕೆ ಯಾವ ಯೋಜನೆಯನ್ನೂ ನೀಡಲಿಲ್ಲ? ಹಿಂದೆ ಇದ್ದ ಯೋಜನೆಗಳನ್ನೂ ಮುಂದುವರೆಸುತ್ತಿಲ್ಲ. ಹಾಗಿದ್ದರೆ ಗೋವಿನ ಬಗ್ಗೆ ಅವುಗಳನ್ನು ಸಾಕುತ್ತಿರುವ ಶೇ.30 ರಷ್ಟಿರುವ ರೈತರ ಬಗ್ಗೆ ನಿಮ್ಮ ಕಾಳಜಿ ಏನು? ಎಂಬ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರ ನೀಡಬೇಕು ಮತ್ತು ತಾವು ಬಾಯಿಮಾತಿನ ಗೋ ಪ್ರೇಮಿಗಳೆ ಹೊರತು ಪ್ರಾಮಾಣಿಕ ಕಾಳಜಿ ಇರುವವರಲ್ಲ ಎಂದು ಒಪ್ಪಿಕೊಳ್ಳಬೇಕು.

ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap