ಸರ್ಕಾರದಿಂದ ಒಟ್ಟು 1433 ಹುದ್ದೆ ಪೌರಕಾರ್ಮಿಕರ ನೇಮಕ….!

ಬೆಂಗಳೂರು

     ಕರ್ನಾಟಕ ಸರ್ಕಾರ ರಾಜ್ಯದ ವಿವಿಧ ಮಹಾನಗರ ಪಾಲಿಕೆಗಳಿಗೆ ಹೊಸದಾಗಿ ಪೌರ ಕಾರ್ಮಿಕರನ್ನು ನೇಮಕ ಮಾಡಲು ಒಪ್ಪಿಗೆ ನೀಡಿದೆ. ಒಟ್ಟು 1433 ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ರಾಜು ಪಿ. ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ (ಮಹಾನಗರ ಪಾಲಿಕೆ-2) ಆದೇಶ ಹೊರಡಿಸಿದ್ದಾರೆ.

    ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೊರತುಪಡಿಸಿ ಉಳಿದ ಮಹಾನಗರ ಪಾಲಿಕೆಗಳಿಗೆ ಪೌರ ಕಾರ್ಮಿಕರ ನೇಮಕಾತಿ ನಡೆಯಲಿದೆ. ಶಿಕ್ಷಕ ನೇಮಕಾತಿ; ಕಲ್ಯಾಣ ಕರ್ನಾಟಕ, ಬೆಂಗಳೂರು ಜಿಲ್ಲೆ ಕೌನ್ಸಿಲಿಂಗ್ ದಿನಾಂಕ ಆದೇಶದಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳಿಗೆ (ಬಿಬಿಎಂಪಿ ಹೊರತುಪಡಿಸಿ) ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ಹೊಸದಾಗಿ ಸೃಜಿಸಿ ಹೊರಡಿಸಿರುವ ಸರ್ಕಾರದ ಆದೇಶ ದಿನಾಂಕ 09/03/2023, 27/10/2023 ಅನ್ನು ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದೆ.

     ಆಯ್ಕೆ ವಿವರ ರಾಜ್ಯದ ವಿವಿಧ ಮಹಾನಗರ ಪಾಲಿಕೆಗಳಲ್ಲಿ ನೇರಪಾವತಿ/ ದಿನಗೂಲಿ/ ಕ್ಷೇಮಾಭಿವೃದ್ಧಿ ಅಧಿನಿಯಮ/ ಸಮಾನ ಕೆಲಸಕ್ಕೆ ಸಮಾನ ವೇತನದಡಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಒಟ್ಟು 1433 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ಸೃಜಿಸಿದ್ದು, ಈ ಹುದ್ದೆಗಳ ನೇಮಕಾತಿಗಾಗಿ ಇರುವ ವಯೋಮಿತಿಯನ್ನು 55 ವರ್ಷಕ್ಕೆ ಹೆಚ್ಚಿಸುವುದು.

    1433 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ಭರ್ತಿ ಮಾಡಬೇಕಾದರೆ ಸಮತಳ ಮೀಸಲಾತಿಯಡಿ ಕನ್ನಡ ಮಾಧ್ಯಮ, ಗ್ರಾಮೀಣ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆಂದು ಮೀಸಲಾದ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದ ಪಕ್ಷದಲ್ಲಿ ಈ ಮೀಸಲಾದ ಹುದ್ದೆಗಳಿಗೆ ಉಳಿದ ಅರ್ಹರಿರುವ ಪೌರಕಾರ್ಮಿಕರುಗಳನ್ನು ಪರಿಗಣಿಸುವುದು.

     ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ವೃಂದಕ್ಕೆ ಮೀಸಲಿರಿಸಿದ ಹುದ್ದೆಗಳಿಗೆ ಅಭ್ಯರ್ಥಿಗಳು ಲಭ್ಯವಾಗದಿದ್ದ ಪಕ್ಷದಲ್ಲಿ ಈ ಮೀಸಲಾದ ಹುದ್ದೆಗಳಿಗೆ ಉಳಿದ ಅರ್ಹರಿರುವ ಅಭ್ಯರ್ಥಿಗಳನ್ನು ಪರಿಗಣಿಸುವುದು ಎಂದು ದಿನಾಂಕ 24/03/2023ರ ಸಚಿವ ಸಂಪುಟ ಸಭೆಯ ಅನುಮೋದನೆಯನ್ವಯ ತಿದ್ದುಪಡಿ ಆದೇಶ ಹೊರಡಿಸಲಾಗಿದೆ.

ಯಾವ ಪಾಲಿಕೆಗೆ ಎಷ್ಟು ಹುದ್ದೆಗಳು?

    1433 ಸಂಖ್ಯಾತಿರಿಕ್ತ ಹುದ್ದೆಗಳನ್ನು 10 ಮಹಾನಗರ ಪಾಲಿಕೆಗಳಿಗೆ ಈ ಕೆಳಕಂಡಂತೆ ಹಂಚಿಕೆ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಆದೇಶ ಹೇಳಿದೆ.

 ಮೈಸೂರು – 252 ಹುದ್ದೆ, ಹುಬ್ಬಳ್ಳಿ- ಧಾರವಾಡ 252 , ಮಂಗಳೂರು – 134 , ಬೆಳಗಾವಿ – 134 , ದಾವಣಗೆರೆ – 119 , ತುಮಕೂರು – 87 , ಶಿವಮೊಗ್ಗ – 89 , ವಿಜಯಪುರ – 93 , ಕಲಬುರಗಿ – 152 , ಬಳ್ಳಾರಿ – 121 ಹುದ್ದೆಗಳನ್ನು ಭರ್ತಿ ಮಾಡಲು ಒಪ್ಪಿಗೆ ನೀಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap