6 ವರ್ಷದಲ್ಲಿ 14849 ಮಕ್ಕಳ ಅಪಹರಣ…..!!

ಬೆಂಗಳೂರು: 

   ರಾಜ್ಯದಲ್ಲಿ ಕಳೆದ 6 ವರ್ಷದಲ್ಲಿ 10 ಸಾವಿರಕ್ಕೂ ಅಧಿಕ ಮಕ್ಕಳ ಅಪಹರಣ ಪ್ರಕರಣ ದಾಖಲಾಗಿದೆ. ಇದರಲ್ಲಿ ಬೆಂಗಳೂರ ಅರ್ಧದಷ್ಟು ಅಂದರೆ 4849 ಮಕ್ಕಳ ಕಿಡ್ನ್ಯಾಪ್ ಪ್ರಕರಣ ದಾಖಲಾಗಿವೆ.

   2020ರಿಂದ ಈವರೆಗೂ ರಾಜ್ಯದಲ್ಲಿ 14,878 ಮಕ್ಕಳು ನಾಪತ್ತೆ ಪ್ರಕರಣ ದಾಖಲಾಗಿದ್ದು, ಈ ಪೈಕಿ 13,542 ಪ್ರಕರಣಗಳಲ್ಲಿ ಮಕ್ಕಳು ಪೋಷಕರ ಮಡಿಲಿಗೆ ಸೇರಿದ್ದಾರೆ. ಬಾಕಿ 1336 ಮಕ್ಕಳು ನಿಗೂಢ ವಾಗಿದ್ದಾರೆ. ಅಪಹರಣಕ್ಕೆ ಒಳಗಾದ 10792 ಹೆಣ್ಣು ಮಕ್ಕಳ ಪೈಕಿ 1003 ಕಾಣೆಯಾಗಿದ್ದಾರೆ. 4086 ಗಂಡು ಮಕ್ಕಳ ಪೈಕಿ ೩೩೩ ಮಕ್ಕಳು ನಿಗೂಢವಾಗಿದ್ದಾರೆ. ಅಪಹರಣ ಪ್ರಕರಣದಲ್ಲಿ ಐದು ವರ್ಷದಲ್ಲಿ ೬೩೪ ಅಪಹರಣಕಾರರನ್ನು ರಾಜ್ಯ ಪೊಲೀಸರು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ.

   2020ರಲ್ಲಿ 421 ಬಾಲಕರು, 1137 ಬಾಲಕಿಯರು ಕಿಡ್ನಾಪ್ ಆದ ಬಗ್ಗೆ ಪ್ರಕರಣ ದಾಖಲಾಗಿವೆ. 2021ರಲ್ಲಿ 487 ಬಾಲಕರು, 1630 ಬಾಲಕಿಯರು, 2022ರಲ್ಲಿ 745 ಬಾಲಕರು, 1829 ಬಾಲಕಿಯರು. 2023ರಲ್ಲಿ 907 ಬಾಲಕರು, 2131 ಬಾಲಕಿಯರು. 2024ರಲ್ಲಿ 975 ಬಾಲಕರು, 2446 ಬಾಲಕಿಯರು. 2025ರಲ್ಲಿ ೫೫೧ ಬಾಲಕರು ಹಾಗೂ ೧೬೧೯ ಬಾಲಕಿಯರು ಕಿಡ್ನಾಪ್ ಆಗಿದ್ದಾರೆ. ಮಕ್ಕಳ ಅಪಹರಣದಲ್ಲಿ ಬೆಂಗಳೂರು ನಗರ ಜಿಲ್ಲೆ ರಾಜ್ಯದ ಪ್ರಥಮ ಸ್ಥಾನದಲ್ಲಿದ್ದರೆ, ಇದರ ಸುತ್ತಮುತ್ತ ಲಿನ ದಕ್ಷಿಣ ಕರ್ನಾಟಕದ ಜಿಲ್ಲೆಗಳು ಟಾಪ್ 10ರ ಪಟ್ಟಿಯಲ್ಲಿವೆ. 

   ಇಂತಹ ಮಕ್ಕಳನ್ನು ಮನೆಗೆ ತಲುಪಿಸುವುದಕ್ಕೆಂದೇ ರಾಜ್ಯ ಮತ್ತು ಕೇಂದ್ರ ಸರಕಾರಗಳು ವಿಶೇಷ ತಂಡಗಳನ್ನೂ ಮಾಡಿವೆ. ಅದರ ಕಣ್ಣುತಪ್ಪಿಸಿ ಈ ಮಕ್ಕಳು ಕತ್ತಲ ಪ್ರಪಂಚ ಸೇರಿದಂತೆ ಇನ್ನಿತರ ಪಿಡುಗಿಗೆ ಒಳಗಾಗುತ್ತಿದ್ದಾರೆ.

    ಮಕ್ಕಳ ಅಪಹರಣ ಪ್ರಕರಣಗಳಲ್ಲಿ ವರದಿಯಾದ ಕೂಡಲೇ ವಿಳಂಬ ಮಾಡದೆ ಎಫ್‌ ಐಆರ್ ಅನ್ನು ದಾಖಲಿಸಲಾಗುತ್ತಿದೆ. ಅಪಹರಣ ಪ್ರಕರಣ ವರದಿಯಾದ ಕೂಡಲೇ ರಾಜ್ಯದ ಎಲ್ಲಾ ಠಾಣೆಗಳಿಗೆ ಪ್ರಕರಣದ ಆರೋಪಿ ಮತ್ತು ಅಪಹರಿಸಿರುವ ಮಗುವಿನ ಬಗ್ಗೆ ಯಾವುದೇ ಸುಳಿವು ದೊರೆತರೆ ಮಾಹಿತಿ ಪಡೆದುಕೊಳ್ಳಲು ಪೋಷಕರ ಒಪ್ಪಿಗೆ ಮೇರೆಗೆ ಪತ್ರಿಕಾ ಪ್ರಕಟಣೆ, ದೂರದರ್ಶನ, ಆಕಾಶವಾಣಿ ಮಾಧ್ಯಮಗಳಲ್ಲಿ ಪ್ರಕಟಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

Recent Articles

spot_img

Related Stories

Share via
Copy link