ರಾಯ್‍ಪುರ:
ಛತ್ತೀಸ್‌ಗಢದ ಬಲೋದಬಜಾರ್‌ನಲ್ಲಿ ಅಂಗಡಿ ಮಾಲೀಕನೊಬ್ಬನ ಮೇಲೆ ಆತನ ಮಗ ಚಾಕುವಿನಿಂದ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ಮಗ ತನ್ನ ಬೈಕ್‌ನಲ್ಲಿ ಅಂಗಡಿಗೆ ನುಗ್ಗಿ ತಂದೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಆತನ ತಂದೆ ವೃದ್ಧನಾಗಿದ್ದು, ಅಂಗವಿಕಲ ಎಂದು ವರದಿಯಾಗಿದೆ. ಮಗ ತಂದೆಗೆ ಇರಿದ ಘೋರ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ನರೇಂದ್ರ ಸಿಂಗ್ ಚಾವ್ಲಾನ ಹಿರಿಯ ಮಗ ಅಮರ್‌ಜೀತ್ ತನ್ನ ಬೈಕಿನಲ್ಲಿ ಅಂಗಡಿಗೆ ನುಗ್ಗಿ ತಂದೆಯ ಮೇಲೆ ಚಾಕುವಿನಿಂದ ಆಕ್ರಮಣಕಾರಿಯಾಗಿ ಹಲ್ಲೆ ನಡೆಸಿದ ದೃಶ್ಯ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.
ಅಮರ್‌ಜೀತ್ ತನ್ನ ತಂದೆಗೆ 15 ಬಾರಿ ಇರಿದಿದ್ದಾನೆ. ಮತ್ತು ಈ ಘಟನೆಯ ಸಮಯದಲ್ಲಿ ಆ ವ್ಯಕ್ತಿ ಕುಡಿದಿದ್ದ ಎಂದು ತಿಳಿದುಬಂದಿದೆ. ಮೊದಲು ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಅಮರ್‌ಜೀತ್ ಈಗ ಕೆಲಸದಿಂದ ವಜಾಗೊಳಿಸಲ್ಪಟ್ಟಿದ್ದ ಮತ್ತು ತನ್ನ ಕೆಲಸ ಕಳೆದುಕೊಳ್ಳಲು ತನ್ನ ಪೋಷಕರೇ ಕಾರಣ ಎಂದು ಆರೋಪಿಸಿದ್ದಾನೆ. ತಂದೆಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ತಂದೆ ತನ್ನ ಮಗನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅಮರ್‌ಜೀತ್‌ನನ್ನು ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ಅಮರ್‌ಜೀತ್ ಕ್ರಿಮಿನಲ್ ಸ್ವಭಾವದ ವ್ಯಕ್ತಿಯಾಗಿದ್ದು, ಅವನ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ. ಅವನ ತಂದೆ ಕೂಡ ಪೊಲೀಸ್ ಠಾಣೆಯಲ್ಲಿ ಅವನ ವಿರುದ್ಧ ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ಅವನು ತನ್ನ ಶಿಕ್ಷಕ ವೃತ್ತಿಯನ್ನು ಕಳೆದುಕೊಂಡನು. ಹೀಗಾಗಿ ಆತ ಆಗಾಗ ತನ್ನ ಕುಟುಂಬದೊಂದಿಗೆ ಜಗಳವಾಡುತ್ತಿದ್ದನು. ಈ ವಿವಾದದಿಂದಾಗಿ ಅವನು ತನ್ನ ತಂದೆಯ ಮೇಲೆ ಹಲ್ಲೆ ನಡೆಸಿದನು. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ ಪೊಲೀಸರು ಈ ಪ್ರಕರಣದ ತನಿಖೆ ನಡೆಸಿದ್ದಾರೆ.








