ಚುನಾವಣಾ ಪ್ರಚಾರಕ್ಕೆ 150 ಹೆಲಿಕಾಪ್ಟರ್‌ ಬುಕ್‌….!

ಬೆಂಗಳೂರು

     ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಕಣ ರಂಗೇರಿದೆ. ಚುನಾವಣಾ ಪ್ರಚಾರಕ್ಕೆ, ಇಲ್ಲವೇ ಪ್ರಚಾರದ ಕಾರ್ಯಕ್ರಮಗಳಿಗೆ ತಾವಿದ್ದ ಸ್ಥಳದಿಂದ ಬೇರೆಡೆ ಓಡಾಡಲು ಹೆಚ್ಚಾಗಿ ಹೆಲಿಕಾಫ್ಟರ್‌ಗಳ ಮೊರೆ ಹೊಗುತ್ತಿದ್ದಾರೆ. ಈ ಕಾರಣಕ್ಕೆ ಹೆಚ್ಚು ಹೆಲಿಕಾಪ್ಟರ್‌ಗಳು ಬುಕ್ ಆಗುತ್ತಿವೆ.

     ಪ್ರಮುಖ ರಾಜಕೀಯ ಪಕ್ಷಗಳು ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಬಂಡಾಯ ಎದ್ದಿದ್ದಾರೆ. ಅಂತವರನ್ನು ತಮ್ಮ ಪಕ್ಷದತ್ತ ಓಲೈಸಲು, ಕೂಡಲೇ ಕರೆದುಕೊಂಡು ಬಂದು ಅವರನ್ನು ತರಾತುರಿಯಲ್ಲಿ ತಮ್ಮ ಪಕ್ಷ ಸೇರ್ಪಡೆ ಮಾಡಿಕೊಳ್ಳುವ ಉದ್ದೇಶಕ್ಕೂ ಹೆಲಿಕಾಪ್ಟರ್‌ಗಳು ಬಳಕೆ ಆಗುತ್ತಿವೆ.

     ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್ ಸೇರಿದಂತೆ ಜೆಡಿಎಸ್​ನ ಘಟಾನುಘಟಿ ನಾಯಕರು, ಬೇಗ ಬೇಗನೇ ರಾಜ್ಯ ಸುತ್ತಾಡಲು, ಪ್ರಚಾರದ ವೇದಿಕೆ ತೆರಳಲು ಹೆಲಿಕಾಪ್ಟರ್‌ ಅನ್ನು ಬುಕ್ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಒಟ್ಟು 100 ಹೆಲಿಕಾಪ್ಟರ್‌ಗಳು ಇವೆ ಎಂಬ ಮಾಹಿತಿ ಇದೆ.

    ಚುನಾವಣೆ ಮತಪ್ರಚಾರ ಹಾಗೂ ಇನ್ನಿತರ ಕಾರಣಗಳಿಗಾಗಿ ಸದ್ಯ 150 ಹೆಲಿಕಾಪ್ಟರ್​ಗಳು, ಮಿನಿ ವಿಮಾನಗಳು ಬುಕ್ ಆಗಿರುವ ಬಗ್ಗೆ ವರದಿಯಾಗಿದೆ. ಹೆಲಿಕಾಪ್ಟರ್‌ಗಳಿಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ ಕೆಲವು ರಾಜಕಾರಣಿಗಳು ಹೊರ ರಾಜ್ಯಗಳಿಂದಲೂ ಬಾಡಿಗೆ ರೂಪದಲ್ಲಿ ಹೆಲಿಕಾಪ್ಟರ್ ಪಡೆಯುತ್ತಿದ್ದಾರೆ.

    ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ, ಜೈಪುರ, ದೆಹಲಿ, ಕೋಲ್ಕತಾದಂತಹ ಭಾಗದಿಂದಲೂ ಹೆಲಿಕಾಪ್ಟರ್‌ಗಳು ಕರ್ನಾಟಕಕ್ಕೆ ಬಂದಿವೆ. ದಿಢೀರ್‌ ನೇ ಹೆಲಿಕಾಪ್ಟರ್‌ ಮಿನಿ ವಿಮಾನಗಳಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ಮಿನಿ ವಿಮಾನದ ಬಾಡಿಗೆ ಬೆಲೆಯಲ್ಲಿ ಶೇಕಡಾ 15 ಪ್ರತಿಶದಷ್ಟು ಹೆಚ್ಚಾಗಿದೆ.

     ಅವಕ್ಕೆ ಎಷ್ಟು ಬಾಡಿಗೆ ತಿಳಿಯಿರಿ ಹೆಲಿಕಾಪ್ಟರ್‌ ಎಂದರೆ ಅದರಲ್ಲಿ ನಾನಾ ನಮೂನೆಗಳಿವೆ. ಆ ಪೈಕಿ ಇಬ್ಬರಷ್ಟೇ ಕುಳಿತುಕೊಳ್ಳುವ ಆಸನದ ಹೆಲಿಕಾಪ್ಟರ್ ನ ಒಂದು ಗಂಟೆ ಅವಧಿ ಬಾಡಿಗೆ ಬೆಲೆ 2.10 ಲಕ್ಷ ರೂಪಾಯಿ ನಿಗದಿಯಾಗಿದೆ. ನಾಲ್ಕು ಮಂದಿ ಕೂರು ಆಸನದ ಹೆಲಿಕಾಪ್ಟರ್ ಬಾಡಿಗೆಗೆ ರಾಜಕಾರಣಿಗಳು ಗಂಟೆಗೆ 2.30 ಲಕ್ಷ ರೂಪಾಯಿ ನೀಡುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link