ಮಾರುಕಟ್ಟೆಯಲ್ಲಿ ಅಗ್ನಿ ಅವಘಡ : 150 ಅಂಗಡಿ ಭಸ್ಮ

ಗುವಾಹಟಿ: 

    ಅಸ್ಸಾಂನ  ಮಾರುಕಟ್ಟೆಯೊಂದರಲ್ಲಿ ಗುರುವಾರ  ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ 150 ಅಂಗಡಿಗಳು ಸುಟ್ಟು ಭಸ್ಮವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಜೋರ್ಹತ್ ಪಟ್ಟಣದ ಹೃದಯಭಾಗದಲ್ಲಿರುವ ಚೌಕ್ ಬಜಾರ್‌ನಲ್ಲಿ ಘಟನೆ ನಡೆದಿದ್ದು ಸುಮಾರು 25 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಯತ್ನಿಸುತ್ತಿದ್ದು, ಬೆಂಕಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ ಎಂದು ಅವರು ಹೇಳಿದ್ದಾರೆ.

    ಅಂಗಡಿಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ದಟ್ಟಣೆಯ ಮಾರುಕಟ್ಟೆಯಲ್ಲಿ ಬಹು ಬೇಗ ಬೆಂಕಿ ವ್ಯಾಪಿಸಿದೆ. ಎಲ್ಲ ಅಂಗಡಿಗಳು ಬಾಗಿಲ ಮುಚ್ಚಿ, ಸಿಬ್ಬಂದಿ ಮನೆಗೆ ತೆರಳಿದ್ದರಿಂದ ಯಾವುದೇ ಸಾವು ಸಂಭವಿಸಿಲ್ಲ. ಅಗ್ನಿಗೆ ಆಹುತಿಯಾದ ಬಹುತೇಕ ಅಂಗಡಿಗಳು ದಿನಸಿ ಮತ್ತು ಬಟ್ಟೆ ಅಂಗಡಿಗಳಾಗಿವೆ.

    ಸಮೀಪದ ಪಟ್ಟಣಗಳಾದ ಟಿಟಾಬೋರ್ ಮತ್ತು ಮರಿಯಾನಿ ಮತ್ತು ಗೋಲಾಘಾಟ್ ಜಿಲ್ಲೆಯಿಂದ  ಬೆಂಕಿಯನ್ನು ನಂದಿಸಲು  ಹೆಚ್ಚುವರಿ ಅಗ್ನಿಶಾಮಕ ವಾಹನಗಳನ್ನು ತರಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap