16 ಮತಗಳಿಂದ ಸೌಮ್ಯ ರೆಡ್ಡಿಗೆ ಸೋಲು..!

ಬೆಂಗಳೂರು 

      ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಯಕ್ರಮಗಳು ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ ಕೆಪಿಸಿಸಿಯಿಂದ ವಿತರಿಸಿದ್ದ ಗ್ಯಾರಂಟಿ ಕಾರ್ಡ್ಗಳನ್ನು ಮತದಾರರಿಗೆ ಹಂಚದೆ ನಿರ್ಲಕ್ಷ್ಯ ವಹಿಸಿದ ಕಾರಣದಿಂದಾಗಿ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಳ್ಳಲು ಪ್ರಮುಖ ಕಾರಣ ಎನ್ನಲಾಗಿದೆ.

     ಕೆಪಿಸಿಸಿ ಕಚೇರಿಯಿಂದ ವಿತರಣೆ ಮಾಡಲು ನೀಡಲಾಗಿದ್ದ ಸುಮಾರು 25 ಸಾವಿರ ಗ್ಯಾರಂಟಿ ಕಾರ್ಡ್ಗಳನ್ನು ಮತದಾರಿಗೆ ಹಂಚಿಕೆ ಮಾಡದ ಕಾರಣ ಸೌಮ್ಯ ರೆಡ್ಡಿ ಕೇವಲ 16 ಮತಗಳ ಅಂತರದಿAದ ಪರಾಭವಗೊಂಡರು. ಜಯನಗರ ಮತ್ತು ಜೆಪಿ ನಗರ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಗ್ಯಾರಂಟಿ ಕಾರ್ಡ್ ವಿತರಿಸುವ ಜವಾಬ್ದಾರಿ ನೀಡಲಾಗಿತ್ತು. ಆದರೆ ಗ್ಯಾರಂಟಿ ಕಾರ್ಡ್ ವಿತರಿಸದೇ ಪಕ್ಷದ ಪರ ಪ್ರಚಾರದಲ್ಲೂ ನಿರ್ಲಕ್ಷ್ಯ ವಹಿಸಿದ್ದೇ ಸೋಲಿಗೆ ಕಾರಣ ಎಂಬ ಆಕ್ರೋಶ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಭುಗಿಲೆದ್ದಿದೆ.

     ಎಲ್ಲಾ ಗ್ಯಾರಂಟಿ ಕಾರ್ಡ್ಗಳನ್ನು ವಿತರಣೆ ಮಾಡಿದ್ದರೆ ಸೌಮ್ಯ ರೆಡ್ಡಿಗೆ ಏನಿಲ್ಲವೆಂದರೂ ಒಂದು ಸಾವಿರ ಮತಗಳು ದೊರೆಯುತ್ತಿದ್ದವು. ಕಾರ್ಡ್ಗಳನ್ನು ವಿತರಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ಗಳ ಮಹತ್ವದ ಬಗ್ಗೆ ಮತದಾರರಿಗೆ ಅರಿವಾಗುತ್ತಿತ್ತು. ಕನಿಷ್ಠ ಪಕ್ಷ 9 ಮತಗಳು ದೊರೆತಿದ್ದರೆ ಸೌಮ್ಯ ರೆಡ್ಡಿ ನಿರಾಯಾಸವಾಗಿ ಗೆಲುವು ಸಾಧಿಸುತ್ತಿದ್ದರು. ಕಾರ್ಡ್ ಗಳನ್ನು ವಿತರಿಸಿದ್ದರೆ ಏನಿಲ್ಲವೆಂದರೂ ಕನಿಷ್ಠ ಒಂದು ಡಜನ್ ಮತಗಳಾದರೂ ದೊರೆಯತ್ತಿದ್ದವು ಎಂದು ಪಕ್ಷದ ಕಾರ್ಯಕರ್ತರೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

     ಸೌಮ್ಯ ರೆಡ್ಡಿ ಸೋಲಿಗೆ ಕಾರಣಕರ್ತರಾದ ಜಯನಗರ ಮತ್ತು ಜೆ.ಪಿ.ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳನ್ನು ಕೂಡಲೆ ಉಚ್ಛಾಟನೆ ಮಾಡಬೇಕು. ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್‌ನ ಬ್ಲಾಕ್ ಅಧ್ಯಕ್ಷರುಗಳು ಗಂಭೀರ ಲೋಪ ಎಸಗಿದ್ದಾರೆ. ಈ ಕುರಿತು ಪರಿಶೀಲನೆ ಮಾಡಿ ನಿರ್ಲಕ್ಷ್ಯ ವಹಿಸಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಬಡವರ ಬಾಳಿಗೆ ಆಶಾಕಿರಣವಾದ 200 ಯೂನಿಟ್ ವಿದ್ಯುತ್ ಉಚಿತ ಮತ್ತು ಮನೆಯ ಯಾಜಮಾನಿಗೆ 2000 ರೂ ಸಹಾಯಧನ, ಬಿಪಿಎಲ್ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆ.ಜಿ.ಅಕ್ಕಿ, ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ನಿರುದ್ಯೋಗ ಭತ್ಯೆಯ ಗ್ಯಾರಂಟಿ ಕಾರ್ಡ್ಗಳನ್ನು ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಮನೆ ಬಾಗಿಲಿಗೆ ತಲುಪಿಸುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಆದೇಶಿಸಲಾಗಿತ್ತು.

     ಜಯನಗರ ಮತ್ತು ಜೆ.ಪಿ.ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಅಂದಾಜು 25,000 ಕ್ಕೂ ಹೆಚ್ಚು ಗ್ಯಾರಂಟಿ ಕಾರ್ಡ್ಗಳನ್ನು ಕೆಪಿಸಿಸಿಯಿಂದ ನೀಡಲಾಗಿತ್ತು. ಆದರೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳ ಬೇಜವಾಬ್ದಾರಿ ನಡಾವಳಿಕೆ, ನಿರ್ಲಕ್ಷ್ಯ ಧೋರಣೆಯಿಂದ ಗ್ಯಾರಂಟಿ ಕಾರ್ಡ್ಗಳು ಜೆ.ಪಿ.ನಗರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅನಾಥವಾಗಿ ಬಿದ್ದಿವೆ. ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಸೌಮ್ಯ ರೆಡ್ಡಿ ಕೇವಲ 16 ಮತಗಳಿಂದ ಪರಾಭವಗೊಳ್ಳಲು ಜೆ.ಪಿ. ನಗರ ವಾರ್ಡ್ನ ಕಾಂಗ್ರೆಸ್ ಕಛೇರಿಯಲ್ಲಿ ಗ್ಯಾರಂಟಿ ಕಾರ್ಡ್ಗಳು ರಾಶಿ ರಾಶಿ ಬಿದ್ದಿರುವುದೇ ಇದಕ್ಕೆ ನಿದರ್ಶನವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link