ನೈಸ್‌ ರಸ್ತೆಯಲ್ಲಿ ಅಪಘಾತ: 16 ಮೇಕೆ ಸಾವು

ಬೆಂಗಳೂರು:

   ನೈಸ್ ರಸ್ತೆಯಲ್ಲಿ ಗುರುವಾರ ಸಂಭವಿಸಿದ ಅಪಘಾತದಲ್ಲಿ 16 ಮೇಕೆಗಳು ಸಾವನ್ನಪ್ಪಿವೆ.ನೈಸ್‌ ರಸ್ತೆ ಗ್ರಾಯತ್ರಿ ಕ್ರಷರ್‌ ಬಳಿ ಬೊಲೆರೊ ವಾಹನವೊಂದು ನಿಯಂತ್ರಣ ತಪ್ಪಿ ರಸ್ತೆಬದಿಗೆ ಉರುಳಿ ಬಿದ್ದ ಪರಿಣಾಮ ವಾಹನದಲ್ಲಿದ್ದ 16 ಮೇಕೆಗಳು ಸ್ಥಳದಲ್ಲೇ ಮೃತಪಟ್ಟಿವೆ. 

   ಶಿವಾನಂದ ಎಂಬುವವರು ವಿಜಯಪುರದಿಂದ ತಮಿಳುನಾಡಿನ ಸೇಲಂಗೆ 40 ಮೇಕೆಗಳನ್ನು ಬೊಲೆರೊ ವಾಹನದಲ್ಲಿ ಕೊಂಡೊಯ್ಯುತ್ತಿದ್ದರು. ನೈಸ್‌ ರಸ್ತೆಯ ತಿರುವಿನಲ್ಲಿ ವಾಹನ ಉರುಳಿ ಬಿದ್ದಿದೆ. ಪರಿಣಾಮ 16 ಮೇಕೆಗಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ.

   22 ಮೇಕೆಗಳು ಬದುಕುಳಿದಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾರೆ. ನಿಗದಿಗಿಂತ ಹೆಚ್ಚಿನ ಭಾರ ತುಂಬಿದ್ದರಿಂದ ವಾಹನ ಉರುಳಿ ಬಿದ್ದಿದೆ ಎನ್ನಲಾಗಿದೆ. ಈ ಸಂಬಂಧ ಚಾಲಕ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿಕೊಳ್ಳಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ