164ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ

ತುರುವೇಕೆರೆ:

             ಎಲ್ಲ ಸಮುಧಾಯದಂತೆ ರಾಜ್ಯಕ್ಕೆ ಮಹಾನ್ ಪುರುಷರನ್ನು ಆರ್ಯ ಈಡಿಗ ಸಮಾಜವೂ ಸಹ ನೀಡಿದೆ ಎಂದು ಶಾಸಕ ಮಸಾಲಜಯರಾಮ್ ತಿಳಿಸಿದರು.

            ಪಟ್ಟಣದ ಸತ್ಯ ಗಣಪತಿ ಆಸ್ತಾನ ಮಂಟಪದಲ್ಲಿ ತಾಲೂಕು ಆಡಳಿತ, ತಾಲೂಕು ಆರ್ಯ ಈಡಿಗ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 164ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.

            ಬ್ರಹ್ಮಶ್ರೀ ನಾರಾಯಣ ಗುರುಗಳು ಈಡಿಗ ಸಮಾಜವನ್ನು ಸಮಾಜದಲ್ಲಿ ಗುರುತಿಸುವಂತೆ ಮಾಡಿದ ಮಹಾನ್ ದಾರ್ಶನಿಕರು. ಇಂದಿಗೂ ಅವರ ಆದರ್ಶಗಳನ್ನು ನಾವು ನೀವುಗಳು ಪಾಲಿಸಬೇಕಿದೆ. ಈಡಿಗ ಸಮಾಜ ತಮ್ಮ ವ್ಯಾಪಾರ ವ್ಯವಹಾರದಲ್ಲಿ ತೊಡಗಿದ್ದು ತಮ್ಮ ಮಕ್ಕಳನ್ನು ವಿದ್ಯಾಬ್ಯಾಸ ಮಾಡಿಸಿ ಎಂದು ಸಲಹೆ ನೀಡಿದರು. ಈಡಿಗ ಸಮಾಜಕ್ಕೆ ಪಟ್ಟಣದಲ್ಲಿ ಒಂದು ನಿವೇಶನ ಕೊಡಿಸುವ ಭರವಸೆ ನೀಡಿದರು.

            ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ ಸೋಮಶೇಖರ್ ಮಾತನಾಡಿ ನಾರಾಯಣ ಗುರುಗಳು ಈಡಿಗ ಸಮುದಾಯವನ್ನು ಸಂಘಟನೆ ಮಾಡಿ ಆಸ್ಪುಶ್ಯರಂತೆ ಕಾಣುತ್ತಿದ್ದ ಸಮುದಾಯವನ್ನು ಇಂದು ಸಮಾಜದಲ್ಲಿ ಗುರುತಿಸುವಂತೆ ಮಾಡಿದ ಶೇಷ್ಟ ಸಂತರು. ಕೇರಳದಲ್ಲಿ ದೇವಸ್ಥಾನಕ್ಕೆ ಈಡಿಗರಿಗೆ ಪ್ರವೇಶ ಇಲ್ಲ ಎಂದು ತಿಳಿದು 1988 ರಲ್ಲಿ ನಾರಾಯಣ ಗುರುಗಳು ಅರ್ವಿಪುರಂನಲ್ಲಿ ಶಿವನ ದೇವಸ್ಥಾನ ನಿರ್ಮಿಸಿದ್ದರು. ಇಂದಿಗೂ ಈಡಿಗದವರೇ ಅರ್ಚಕರಾಗಿದ್ದಾರೆ. ಅದರಂತೆ ರಾಜ್ಯದ ಕುದ್ರೋಳಿ ಶಿವಲಿಂಗವನ್ನು ಪ್ರಾರಂಭ ಮಾಡಿದ್ದು ನಾರಾಯಣ ಗುರುಗಳು ಎಂದು ತಿಳಿಸಿದರು.

           ಈ ಸಂದರ್ಬದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಸನ್ಮಾನಿಸಲಾಯಿತು. ಕೊಡಗು ಸಂತ್ರಸ್ಥ ನಿಧಿಗೆ ಈಡಿಗ ಸಂಘದಿಂದ 10 ಸಾವಿರ ರೂಗಳ ದೇಣಿಗೆ ಚಕ್‍ನ್ನು ತಹಶೀಲ್ದಾರ್‍ಗೆ ನೀಡಲಾಯಿತು. ಶಿವಮೊಗ್ಗ ಜಿಲ್ಲೆ ನಿಟ್ಟೂರು ಹುಂಚದಕಟ್ಟೆ ಶ್ರೀ ನಾರಾಯಣಗುರು ಮಹಾ ಸಂಸ್ಥಾನ ಮಠದ ರೇಣುಕಾನಂದ ಮಹಾ ಸ್ವಾಮೀಜಿ ಆಶೀರ್ವಚನ ನೀಡಿದರು.

             ಕಾರ್ಯಕ್ರಮಕ್ಕೂ ಮುನ್ನ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರದೊಂದಿಗೆ ಗ್ರಾಮದೇವತೆ ಉಡುಸಲಮ್ಮ ದೇವಾಲಯದಿಂದ ಅನೇಕ ಜಾನಪದ ಕಲಾ ಪ್ರಕಾರಗಳೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಾಗರಾಜು, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಲಚ್ಚಿಬಾಬು, ತಾಲೂಕು ಬಿಜೆಪಿ ಅಧ್ಯಕ್ಷ ದುಂಡಾರೇಣಕಪ್ಪ, ಮುಖಂಡರಾದ ಕೊಂಡಜ್ಜಿವಿಶ್ವನಾಥ್, ಕಡೇಹಳ್ಳಿಸಿದ್ದೇಗೌಡ, ಯು.ಬಿ.ಸುರೇಶ್, ಗಂಗಾವತಿನಾಗರಾಜು, ತಾಲೂಕು ಈಡಿಗ ಸಂಘದ ಗೌರವಾದ್ಯಕ್ಷ ವಂಕಟಸ್ವಾಮಪ್ಪ, ತಾ|| ಅಧ್ಯಕ್ಷ ಎನ್.ರಾಜಣ್ಣ, ಉಪಾಧ್ಯಕ್ಷ ಎಸ್.ಜಿ.ಉಮೇಶ್, ಖಜಾಂಚಿ ಕೃಷ್ಣಸ್ವಾಮಿ, ಕಾರ್ಯದರ್ಶಿ ಗೋಪಾಲ್, ಮುಗಳೂರು ಮಂಜುನಾಥ್, ಕುಮಾರ್, ಪ್ರಕಾಶ್ ಸೇರಿದಂತೆ ಅನೇಕ ಗಣ್ಯರು ಹಾಗು ಸಮಾಜ ಭಾಂದವರು ಪಾಲ್ಗೋಂಡಿದ್ದರು.
  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link