ಪ್ರಜ್ವಲ್‌ ಪ್ರಕರಣ ತನಿಖೆಗೆ 18 ಮಂದಿ ಅಧಿಕಾರಿಗಳ ನೇಮಕ ….!

ಬೆಂಗಳೂರು:

   ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಪ್ರಜ್ವಲ್​ ರೇವಣ್ಣ ಪೆನ್​ಡ್ರೈವ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡಕ್ಕೆ(ಎಸ್ಐಟಿ) ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನ ಪೊಲೀಸ್ ಇಲಾಖೆ ನಿಯೋಜಿಸಿ ಆದೇಶಿಸಿದೆ.

    ಪ್ರಕರಣದ ಕೂಲಂಕಷ ತನಿಖೆಗಾಗಿ ರಾಜ್ಯ ಸರ್ಕಾರವು ಎಸ್ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಮೈಸೂರು ಎಸ್ಪಿ ಸೀಮಾ ಲಾಟ್ಕರ್, ಹೆಚ್ಚುವರಿ ಎಸ್ಪಿ ಸುಮನ್ ಪನ್ನೇಕರ್ ಅವರನ್ನ ನಿಯೋಜಿಸಿತ್ತು. ಇದೀಗ ರಾಜ್ಯ ಸರ್ಕಾರ 18 ಮಂದಿ ಅಧಿಕಾರಿ ಹಾಗೂ ಸಿಬ್ಬಂದಿಯನ್ನ ನಿಯೋಜಿಸಿದೆ‌. ಇದರಿಂದ ಎಸ್ಐಟಿ ತನಿಖೆ ಇನ್ನಷ್ಟು ಚುರುಕುಗೊಳ್ಳಲಿದೆ.

     ಪ್ರಕರಣ ಸಂಬಂಧ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪೊಲೀಸರನ್ನೂ ಒಳಗೊಂಡಂತೆ 18 ಮಂದಿ ಪರಿಣಿತರನ್ನ ನಿಯೋಜಿಸಲಾಗಿದೆ,

    ಪೊಲೀಸ್ ಮಹಾ ನಿರ್ದೇಶಕರ ಸೂಚನೆಯಂತೆ ಬೆಂಗಳೂರು ನಗರದ ಮಾರತ್ ಹಳ್ಳಿ ಉಪ ವಿಭಾಗದ ಎಸಿಪಿ ಪ್ರಿಯದರ್ಶಿನಿ ಈಶ್ವರ್ ಸಾನಿಕೊಪ್ಪ, ಬೆಂಗಳೂರು ನಗರ ಸಿಸಿಬಿ ಎಸಿಪಿ ಸತ್ಯನಾರಾಯಣ ಸಿಂಗ್ ಎಸ್.ಬಿ., ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಧನ್ಯಾ ಎನ್. ನಾಯ್ಕ್, ಮಂಗಳೂರು ಉರ್ವಾ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಭಾರತಿ ಜಿ., ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಸುಮರಾಣಿ ಬಿ.ಎಸ್., ಆಲನಹಳ್ಳಿ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಸ್ವರ್ಣಾ ಜಿ.ಎಸ್., ವೈಟ್ ಫೀಲ್ಡ್ ನ ಸೆನ್ ಠಾಣೆ ಪೊಲೀಸ್ ಇನ್ ಸ್ಪೆಕ್ಟರ್ ಹೇಮಂತ್ ಕುಮಾರ್ ಎಂ., ಬೆಂಗಳೂರು ನಗರ ಸಿಸಿಬಿ ಪೊಲೀಸ್ ಇನ್ ಸ್ಪೆಕ್ಟರ್ ರಾಜಾ ಜಿ.ಸಿ., ಉಡುಪಿ ಮಲ್ಪೆ ಸಿಎಸ್ಪಿ ಪಿಎಸ್ಸೈ ವೈಲೆಟ್ ಫ್ಲೆಮೀನಾ ಸೇರಿದಂತೆ 18 ಮಂದಿಯನ್ನು ಓಓಡಿ ಆಧಾರದಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ನಿಯೋಜಿಸಿ ಆದೇಶ ಹೊರಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap