ಹರಿಹರ:
ನಗರದ ತಾಲ್ಲೂಕು ಪಂಚಾಯಿತಿ ಕಛೇರಿಗೆ ಹೊಂದಿಕೊಂಡಿರುವ ಶಾಸಕರ ಕೊಠಡಿಯನ್ನು ನವೀಕರಣಗೊಳಿಸಿದ್ದು,ನೂತನ ನವೀಕರಣಗೊಂಡ ಕೊಠಡಿಯನ್ನು ಶಾಸಕ.ಎಸ್.ರಾಮಪ್ಪ ಉದ್ಘಾಟಿಸಿದರು.
ತಾಲ್ಲೂಕು ಪಂಚಾಯಿತಿ ಅನುದಾನದಲ್ಲಿ ಸುಮಾರು 2.5 ಲಕ್ಷ ರೂ ವೇಚ್ಚದಲ್ಲಿ ಶಾಸಕರ ನವೀಕರಣ ಕೊಠಡಿಯ ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ ಎಂದು ಗುತ್ತಿಗೆದಾರರಾದ ಸಿ.ಹನುಮಂತಪ್ಪ ಸಾರಥಿ ಅವರನ್ನು ಶಾಸಕರು ಅಭಿನಂದಿಸಿದ, ನಂತರ ಅವರು ನವೀಕರಿಸಲಾದ ಕೊಠಡಿಯ ಪೀಠೋಪಕರಣಗಳು ಉತ್ತಮ ಗುಣ್ಣಮಟ್ಟದ ಸಾಮಾಗ್ರಿಗಳನ್ನು ಹೊಸದಾಗಿ ಅಳವಡಿಸಲಾಗಿದೆ ನೆಲಕ್ಕೆ ಉತ್ತಮವಾದ ಟೈಲ್ಸ್, ಶೌಚಾಲಯ, ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು ಕೊಠಡಿ ತುಂಬಾ ಸುಂದರವಾಗಿ ಕಾಣುವಂತೆ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷೆ. ಶ್ರೀದೇವಿ ಮಂಜಪ್ಪ, ಉಪಾಧ್ಯಕ್ಷೆ.ಜಯಮ್ಮ ಬಸಲಿಂಗಪ್ಪ ಗೌಡ್ರು,ಸದಸ್ಯರುಗಳಾದ ಲಕ್ಷ್ಮೀ ಮಹಾಂತೇಶ್, ಪ್ರೇಮಾ ಪರಮೇಶ್ವರಪ್ಪ, ವೀರಭದ್ರಪ್ಪ,ಎನ್.ಪಿ.ಬಸವಲಿಂಗಪ್ಪ, ಕೊಟ್ರೇಶಗೌಡ,ಜಿಗಳಿ ರಂಗಪ್ಪ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಅನಂತರಾಜ್, ಇಂಜಿನಿಯರ್ ಡೊಂಕಪ್ಪ, ಸಿಬ್ಬಂದಿಗಳಾದ ಲಿಂಗರಾಜ್,ಕಿರಣ್ ಕುಮಾರ್, ಶಾಸಕರ ಆಪ್ತ ಸಹಾಯಕ ವಿಜಯ ಮಹಾಂತೇಶ್ ಮತ್ತು ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ