ಅಕ್ರಮವಾಗಿ ಸಾಗಿಸುತ್ತಿದ್ದ 2.62ಲಕ್ಷ ರೂ. ಜಪ್ತಿ

ತುಮಕೂರು

     ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಸಂಬಂಧ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಚೆಕ್‌ಪೋಸ್ಟ್ಗಳನ್ನು ನಿರ್ಮಿಸಲಾಗಿದ್ದು, ಎಫ್.ಎಸ್.ಟಿ. ಮತ್ತು ಎಸ್‌ಎಸ್‌ಟಿ ತಂಡಗಳು ಕಾರ್ಯ ನಿರ್ವಹಿಸುತ್ತಿರುತ್ತವೆ.

     ಏಪ್ರಿಲ್ 17ರಂದು ರಾತ್ರಿ 8-15ರ ಸಮಯದಲ್ಲಿ ತುಮಕೂರಿನ ಜಾಸ್ ಟೋಲ್ ಹತ್ತಿರ ಚುನಾವಣಾ ಚೆಕ್‌ಪೋಸ್ಟ್ನಲ್ಲಿ ಕೆಎ-34-ಎನ್-9504 ಕಾರಿನಲ್ಲಿ ಬಂದ ಶ್ರೀ ಸುಧೀರ್ ಎಂಬುವವರ ವಾಹನವನ್ನು ತಪಾಸಣೆ ನಡೆಸಿದಾಗ 2,62,000 ರೂ.ಗಳಿದ್ದು, ಈ ಕುರಿತು ಸದರಿಯವರು ಸಮಂಜಸವಾದ ಉತ್ತರ ನೀಡದೇ ಇರುವುದರಿಂದ ಎಸ್.ಎಸ್.ಟಿ. ತಂಡದ ಮುಖ್ಯಸ್ಥ ಸಿ.ಆರ್. ರಾಘವೇಂದ್ರ ಅವರು ಸದರಿಯವರನ್ನು ಹಾಗೂ ಹಣವನ್ನು ವಶಕ್ಕೆ ಪಡೆದಿರುತ್ತಾರೆ ಹಾಗೂ ಮುಂದಿನ ಕ್ರಮಕ್ಕಾಗಿ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap