ಗುಜರಾತ್‌ದಲ್ಲಿ ಕಳೆದ ೧೪ ವರ್ಷಗಳಲ್ಲಿ ೬೦೦೦ ಕೋಟಿ ರೂಪಾಯಿಗಳ ಕಲ್ಲಿದ್ದಲು ಹಗರಣ !

ಗಾಂಧಿನಗರ (ಗುಜರಾತ):

ಕೇಂದ್ರ ಸರಕಾರವು ಈ ಹಗರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡಿ ಸತ್ಯವನ್ನು ಜನರ ಮುಂದೆ ತರಬೇಕು ಮತ್ತು ಭಾಗಿಯಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು, ಎಂದು ಜನರಿಗೆ ಅನಿಸುತ್ತದೆ !

 ಕಳೆದ ೧೪ ವರ್ಷಗಳಲ್ಲಿ ಗುಜರಾತ್ ರಾಜ್ಯದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕ್ಯಗಾರಿಕೆಗಳಿಗೆ ಕಲ್ಲಿದ್ದಲು ಪೂರೈಸುವ ಬದಲು ಗುಜರಾತ್ ಸರಕಾರದ ವಿವಿಧ ಏಜೆನ್ಸಿಗಳು ಕಲ್ಲದ್ದಲನ್ನು ಬೇರೆ ರಾಜ್ಯಗಳ ಕೈಗಾರಿಕೇಗಳಿಗೆ ಮಾರಾಟ ಮಾಡಿ ೫-೬ ಸಾವಿರ ಕೋಟಿ ರೂಪಾಯಿಗಳ ಹಗರಣ ಮಾಡಿದ್ದಾರೆ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ.

೧. ‘ಕೋಲ್ ಇಂಡಿಯಾ’ದ ಗಣಿಯಿಂದ ಗುಜರಾತ್‌ನ ವ್ಯಾಪಾರಿಗಳು ಮತ್ತು ಸಣ್ಣ ಕೈಗಾರಿಕೆಗಳ ಹೆಸರಿನಲ್ಲಿ ಇದುವರೆಗೆ ೬೦ ಲಕ್ಷ ಟನ್ ಕಲ್ಲಿದ್ದಲನ್ನು ರವಾನಿಸಿದೆ. ಪ್ರತಿ ಟನ್‌ಗೆ ಸರಾಸರಿ ೩೦೦೦ ರೂಪಾಯಿ ಅದರ ಸರಾಸರಿ ಮೌಲ್ಯ ೧ ಸಾವಿರದ ೮೦೦ ಕೋಟಿ ರೂಪಾಯಿ ಆಗುತ್ತದೆ;

ಆದರೆ ಕಲ್ಲಿದ್ದಲನ್ನು ವ್ಯಾಪಾರಿಗಳು ಮತ್ತು ಸಂಬಂಧಪಟ್ಟ ಕೈಗಾರಿಕೆಗಳಿಗೆ ಮಾರಾಟ ಮಾಡುವ ಬದಲು ಬೇರೆ ರಾಜ್ಯಗಳಲ್ಲಿ ಪ್ರತಿ ಟನ್‌ಗೆ ೮ ಸಾವಿರದಿಂದ ೧೦ ಸಾವಿರ ರೂಪಾಯಿಯ ದರದಲ್ಲಿ ಮಾರಾಟ ಮಾಡಿ ಕಾಳಸಂತೆಯನ್ನು ಮಾಡಿದೆ. ಇದು ಕೆಲವು ವ್ಯವಸ್ಥೆಗಳು ಮತ್ತು ಗುಜರಾತ್ ಸರಕಾರದ ಕೆಲವು ಅಧಿಕಾರಿಗಳ ಕೈವಾಡವಿದೆ.

೨. ಕೇಂದ್ರ ಸರಕಾರದ ಕಲ್ಲಿದ್ದಲು ಸಚಿವಾಲಯದ ಸಚಿವ ಅನಿಲ್ ಜೈನ್ ಇವರು ಮಾತನಾಡುತ್ತಾ, “ರಾಜ್ಯ ಸರಕಾರ ನೆಮಿಸಿದ ವ್ಯವಸ್ಥೆಗಳಿಗೆ ಕಲ್ಲಿದ್ದಲು ಪೂರೈಕೆಯಾಗುತ್ತದೆ. ಮತ್ತು ಅದು ಅಲ್ಲಿಗೆ ಕೊನೆಗೊಳ್ಳಬೇಕು.”

೩. ಕೋಲ್ ಇಂಡಿಯಾದ ನಿರ್ದೇಶಕ ಸತ್ಯೇಂದ್ರ ತಿವಾರಿ ಇವರು ಮಾತನಾಡುತ್ತಾ, “ಈ ವಿಷಯದಲ್ಲಿ ಏನೆ ಬಂದರೂ ರಾಜ್ಯ ಗೃಹ ಇಲಾಖೆ ಗಮನಕ್ಕೆ ತರಬೇಕು. ಅದರಲ್ಲಿ ಅಗತ್ಯ ಸಾಕ್ಷ್ಯಗಳನ್ನು ಒಳಗೊಂಡಿರಬೇಕು.

೪. ‘ಕೋಲ್ ಇಂಡಿಯಾ’ದ ಉನ್ನತ ಮಟ್ಟದಲ್ಲಿರುವ ಅಧಿಕಾರಿಯೊಬ್ಬರು, “ಗುಜರಾತ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ. ವಾಸ್ತವವಾಗಿ, ಗುಜರಾತ್ ಸರಕಾರವು ಕೋಲ್ ಇಂಡಿಯಾಗೆ ಸಂಪೂರ್ಣ ಮಾಹಿತಿಯನ್ನು ನೀಡಲು ಬಯಸುತ್ತದೆ; ಆದರೆ ರಾಜ್ಯ ಸರಕಾರ ಈ ಪ್ರಕರಣದಲ್ಲಿ ನುಣುಚಿಕೊಳ್ಳುತ್ತಿದೆ. ನಿಖರವಾದ ಮಾಹಿತಿ, ವಿವರಗಳ ಹೊರತಾಗಿಯೂ, ತಪ್ಪಾಗಿ ನಿರೂಪಿಸಲಾಗುತ್ತಿದೆ.” ಎಂದು ಹೇಳಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link