ದೇಶದಲ್ಲಿ ಹೆಚ್3ಎನ್2 ಇನ್ಫ್ಲುಯೆಂಜಾ ವೈರಸ್‌ ಗೆ 2 ಬಲಿ

ನವದೆಹಲಿ:

ದೇಶದಲ್ಲಿ ಕೊರೋನಾ ಹೊಸ ರೂಪಾಂತರಿ ಬಗ್ಗೆ ಮೇಲ್ನೋಟಕ್ಕೆ ಚರ್ಚೆಗಳು ಇಲ್ಲವಾದರೂ ಸಹ ಒಳಗೊಳಗೆ ಭಯವಂತೂ ಇದೆ ಏಕೆಂದರೆ ಕೊರೋನಾ ರೂಪಾಂತರಗೊಂಡಿದೆ ಅದರಿಂದ ಏನು ಅಪಾಯವಾಗಲಿ ಏನು ಇಲ್ಲ ಎಂದು ಬೊಗಳೆ ಬಿಡುವ ಅನೇಕರು ಇದ್ದಾರೆ ಅದರೆ ಹೋದ ಜೀವಗಳಿಗೆ ಯಾರು ಜವಾಬ್ದಾರಿ ಎಂದರೆ ಯಾರ ಬಳಿಯೂ ಮಾತಿಲ್ಲ.

ಇದೇ ನಿರ್ಲಕ್ಷ್ಯಕ್ಕೆ ಈಗ ದೇಶದಲ್ಲಿ ಎರಡು ಜೀವ ಬಲಿಯಾಗಿದೆ ಒಂದು ದೂರದ ಹರಿಯಾಣದಲ್ಲಾದರೆ ಇನ್ನೊಂದು ನಮ್ಮ ರಾಜ್ಯದ ಹಾಸನ ಜಿಲ್ಲೆಯ ಈರೇಗೌಡ ಎಂಬ 82 ವರ್ಷದ ವಯೋವೃದ್ಧ ಹೆಚ್ 3ಎನ್ 2 ವೈರಸ್ ಗೆ ಬಲಿಯಾಗಿದ್ದಾರೆ. ಇವರು ಮೊನ್ನೆ ಮಾರ್ಚ್ 6ರಂದು ಮೃತಪಟ್ಟಿದ್ದು, ಅದು ಹೆಚ್3ಎನ್2 ಇನ್ಫ್ಲುಯೆಂಜಾ ವೈರಸ್‌ಗೆ ಎಂದು ದೃಢಪಟ್ಟಿದ್ದು, ಈ ಮೂಲಕ ಕರ್ನಾಟಕದಲ್ಲಿ ಮೊದಲ ಪ್ರಕರಣವಾಗಿದೆ. 

     ಕರ್ನಾಟಕ ಆರೋಗ್ಯ ಆಯುಕ್ತ ಡಿ ರಂದೀಪ್ ಕೂಡ ಈರೇಗೌಡ ಅವರ ಸಾವನ್ನು ಖಚಿತಪಡಿಸಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿ (ಹಾಸನ), ಈರೇಗೌಡ ಅವರು ಫೆಬ್ರವರಿ 24 ರಂದು ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆರು ದಿನಗಳ ನಂತರ ನಿಧನರಾದರು. ಅವರನ್ನು ಇನ್ಫ್ಲುಯೆನ್ಸ ತರಹದ ರೋಗಲಕ್ಷಣಗಳೊಂದಿಗೆ ಆಸ್ಪತ್ರೆಗೆ ಕರೆತರಲಾಯಿತು. ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಸಮಸ್ಯೆಗಳನ್ನು ಹೊಂದಿದ್ದರು.

    ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರು ಈ ವಾರದ ಆರಂಭದಲ್ಲಿ ರಾಜ್ಯ ತಾಂತ್ರಿಕ ಸಲಹಾ ಸಮಿತಿ (TAC) ಯೊಂದಿಗೆ ಸಭೆ ನಡೆಸಿ ಸೋಂಕನ್ನು ತಪ್ಪಿಸಲು ಅನುಸರಿಸಬೇಕಾದ ಅಗತ್ಯ ಮುನ್ನೆಚ್ಚರಿಕೆಗಳನ್ನು ತಿಳಿಸುವ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದರು. 2-5 ದಿನಗಳಲ್ಲಿ ಸೋಂಕು ನಿವಾರಣೆಯಾಗುತ್ತದೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap