ನವದೆಹಲಿ:
ಜೀವನದಲ್ಲಿ ಒಂದು ಬಾರಿಯಾದರೂ ಸಹತ ಹಜ್ ಯಾತ್ರೆ ಮಾಡಬೇಕು ಮೆಕ್ಕಾ ಮದೀನಾ ನೋಡಿ ಜನ್ಮ ಧನ್ಯ ಮಾಡಿಕೊಳ್ಳಬೇಕು ಎಂಬುದು ಮುಸಲ್ಮಾನರ ಜೀವನದ ಗುರಿಯಾಗಿರುತ್ತದೆ ಮತ್ತು ಈ ಯಾತ್ರೆ ಸಂಪೂರ್ಣ ಯಶಸ್ವಿ ಯಾದರೆ ನಮ್ಮ ಜೀವನ ಪಾವನವಾಗುತ್ತದೆ ಎಂಬುದು ನಂಕೆ ಕೆಲವೊಂದು ಬಾರಿ ಎಲ್ಲವೂ ಅಂದುಕೊಂಡತೆ ಆಗುವುದಿಲ್ಲ ಅದೇ ರೀತಿ ನೈಋತ್ಯ ಸೌದಿ ಅರೇಬಿಯಾದಲ್ಲಿ ಮಾರಣಾಂತಿಕ ಬಸ್ ಅಪಘಾತ ಸಂಭವಿಸಿದೆ. ಹಜ್ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಿಂದಾಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡು 20 ಪ್ರಯಾಣಿಕರು ಸ್ಥಳದಲ್ಲೇ ಸಜೀವ ದಹನವಾಗಿದ್ದು, ಇನ್ನುಳಿದ 29 ಮಂದಿ ಗಾಯಗೊಂಡಿದ್ದಾರೆ.
ಅಸಿರ್ ಪ್ರಾಂತ್ಯ ಮತ್ತು ಅಭಾ ನಗರವನ್ನು ಸಂಪರ್ಕಿಸುವ ರಸ್ತೆಯಲ್ಲಿ ಈ ದುರಂತ ಘಟನೆ ನಡೆದಿದೆ. ಬ್ರೇಕ್ ವೈಫಲ್ಯದಿಂದ ಅಪಘಾತ ಸಂಭವಿಸಿದೆ ಎಂದು ತೋರುತ್ತದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರೆಲ್ಲರೂ ಮಕ್ಕಾಗೆ ಹೋಗುತ್ತಿದ್ದಾರೆ.
ಸೌದಿ ಸಿವಿಲ್ ಡಿಫೆನ್ಸ್ ಮತ್ತು ರೆಡ್ ಕ್ರೆಸೆಂಟ್ ಅಥಾರಿಟಿ ತಂಡಗಳು ಅಪಘಾತದ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತೋರುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
