ಬೆಂಗಳೂರು :
500ಕ್ಕೂ ಹೆಚ್ಚು ಜನರಿಂದ ಭೀಮ ಪ್ರಜಾ ಸಂಘವತಿಯಿಂದ ರಾಜ್ಯಾಧ್ಯಕ್ಷರಾದ ವೈಟ್ ಫೀಲ್ಡ್ ಮುರುಗೇಶ್ ರವರ ನೇತೃತ್ವದಲ್ಲಿ ಭೀಮ ಪ್ರಜಾ ಸಂಘದ ವತಿಯಿಂದ ಸ್ವಾಭಿಮಾನ ಹೋರಾಟವನ್ನು ದಿನಾಂಕ:06.03.2025 ರಂದು ಬೀದರ್ ಜಿಲ್ಲೆಯಿಂದ ಕಾಲ್ನಡಿಗೆ ಮುಖಾಂತರ ಜಾಥಾ ಪ್ರಾರಂಭಗೊಂಡು, ಇಂದು ಬೆಂಗಳೂರಿನ ಫ್ರೀಡಂಪಾರ್ಕ್‌ರೆಗೆ ಜಾಥಾ ಬಂದು ನಂತರ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಒತ್ತಾಯಿಸಿ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು.
200 ಮೀಟರ್‌ಗಳ ಎತ್ತರದ ಡಾ|ಬಿ.ಆರ್. ಅಂಬೇಡ್ಕರ್ ರವರ ಪುತ್ಥಳಿ ನಿರ್ಮಾಣ ಮತ್ತು ಕರ್ನಾಟಕ ಸರ್ಕಾರದ ಲಾಂಛನದಲ್ಲಿ ಸತ್ಯಮೇವ ಜಯತೇ ಸಂಸ್ಕೃತ ಪದ ಹೋಲಿಕೆಯಂತೆ ಹಿಂದಿಪದದಲ್ಲಿ ಇರುತ್ತದೆ ಅದನ್ನು ಕನ್ನಡ ಪದಕ್ಕೆ ಬದಲಾವಣೆ ಮಾಡಬೇಕೆಂದು ಹಾಗೂ ಡಾ। ಬಿ.ಆರ್. ಅಂಬೇಡ್ಕರ್ ರವರ ಗ್ರಂಥಾಲಯ ಐ.ಎ.ಎಸ್. ಹಾಗೂ ಕೆ.ಎ.ಎಸ್. ತರಬೇತಿ ಕೇಂದ್ರಗಳನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಾಡಬೇಕೆಂದು ರಾಜ್ಯಾಧ್ಯಕ್ಷರಾದ ವೈಟ್ ಫೀಲ್ಡ್ ಮುರುಗೇಶ್ ತಿಳಿಸಿದರು.
ಡಾ|ಬಿ.ಆರ್. ಅಂಬೇಡ್ಕರ್ ರವರ 200 ಮೀಟರ್ ಮತ್ಥಳಿ ನಮ್ಮ ಕರ್ನಾಟಕ ರಾಜ್ಯಕ್ಕೆ ಬೇಕಾಗಿರುವ ಕಾರಣ ಮಾನ್ಯ ಮುಖ್ಯಮಂತ್ರಿಗಳು 134ನೇ ಬಾಬಾ ಸಾಹೇಬರ ಜಯೋಂತ್ಸವದ ಅಂಗವಾಗಿ ನಾಲ್ಕು ಘೋಷಣೆಗಳನ್ನು ಮಾಡಿರುತ್ತಾರೆ. ಇವರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ರವರ ಪುತ್ಥಳಿ ಇಡೀ ಭಾರತ ದೇಶದಲ್ಲಿಯೇ ಬೆಂಗಳೂರಿನಲ್ಲಿ ನಿರ್ಮಾಣ ಮಾಡುವುದಾಗಿ ಘೋಷಿಸಿರುವುದರಿಂದ ಮಾನ್ಯ ಮುಖ್ಯಮಂತ್ರಿಗಳ ನಿರ್ಧಾರಕ್ಕೆ ನಾವುಗಳು ಅಭಿನಂದಿಸುತ್ತೇವೆ ಹಾಗೂ ನಮ್ಮ ಒತ್ತಾಯ ಡಾ. ಬಿ.ಆರ್. ಅಂಬೇಡ್ಕರ್ ರವರ ಪುತ್ಥಳಿ 200 ಮೀಟರ್ ಅಂದರೆ 656 ಅಡಿಗಳ ಎತ್ತರದ ಪುತ್ಥಳಿ ಆಗಬೇಕೆಂದು ಬೇಡಿಕೆಯಾಗಿರುತ್ತದೆ.
