ಬಿಪರ್‌ ಜೋಯ್‌ : 21000 ಜನರ ಸ್ಥಳಾಂತರ….!

ಅಹಮದಾಬಾದ್ :

    ವ್ಯಾಪಕ ಹಾನಿಯುಂಟುಮಾಡುವ ಸಾಮರ್ಥ್ಯ ಹೊಂದಿರುವ ‘ಬಿಪರ್ಜೋಯ್’ ಚಂಡಮಾರುತ ಗುರುವಾರ ಸಂಜೆ ಗುಜರಾತ್‌ನ ಕಚ್ ಜಿಲ್ಲೆಗೆ ಅಪ್ಪಳಿಸುವ ಸಾಧ್ಯತೆ ಇದ್ದು, ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ವಿವಿಧ ಕರಾವಳಿ ಜಿಲ್ಲೆಗಳಿಂದ 21,000 ಜನರನ್ನು ತಾತ್ಕಾಲಿಕ ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಮಂಗಳವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕರಾವಳಿಯ 10 ಕಿಮೀ ವ್ಯಾಪ್ತಿಯ ಜನರನ್ನು ಸ್ಥಳಾಂತರಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಅವರು ಹೇಳಿದ್ದಾರೆ.

   ಭಾರತೀಯ ಹವಾಮಾನ ಇಲಾಖೆ(IMD) ಪ್ರಕಾರ, ಈ ಚಂಡಮಾರುತದ ಪ್ರಭಾವದಿಂದ ಭಾರಿ ಮಳೆ ಮತ್ತು ಭೂಕುಸಿತ ಉಂಟಾಗಲಿದ್ದು, ‘ಅತ್ಯಂತ ವೇಗವಾಗಿ ಅಂದರೆ ಗರಿಷ್ಠ ಗಂಟೆಗೆ 150 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.

   ಈ ಚಂಡಮಾರುತ ಗುಜರಾತ್‌ನ ಕಚ್, ದೇವಭೂಮಿ ದ್ವಾರಕಾ ಮತ್ತು ಜಾಮ್‌ನಗರ ಜಿಲ್ಲೆಗಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ.

    “ನಾವು ಈಗಾಗಲೇ ಕರಾವಳಿಯ ಸಮೀಪದಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸುತ್ತಿದ್ದೇವೆ. ಇಲ್ಲಿಯವರೆಗೆ, ವಿವಿಧ ಜಿಲ್ಲಾಡಳಿತಗಳು ಸುಮಾರು 21,000 ಜನರನ್ನು ತಾತ್ಕಾಲಿಕ ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಿವೆ. ಸ್ಥಳಾಂತರಿಸುವ ಪ್ರಕ್ರಿಯೆಯು ಇನ್ನೂ ಮುಂದುವರೆದಿದೆ ಮತ್ತು ಎಲ್ಲಾ ಅಪಾಯದಲ್ಲಿರುವ ಎಲ್ಲರನ್ನು ಇಂದು ಸಂಜೆಯೊಳಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು ಎಂದು ರಾಜ್ಯ ಪರಿಹಾರ ಆಯುಕ್ತ ಅಲೋಕ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap