ನ.21 ಕಾಂಗ್ರೆಸ್ ಜನಜಾಗೃತಿ ಸಮಾವೇಶ

ತುಮಕೂರು:

ಸಿದ್ದರಾಮಯ್ಯ, ಮಲ್ಲಿಕಾರ್ಜುನ  ಖರ್ಗೆ, ಡಿ.ಕೆ.ಶಿ ಸೇರಿ ಹಲವು ನಾಯಕರ ಭಾಗಿ

 ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್ ಪಕ್ಷ ಕಳೆದ ಏಳೂವರೆ ದಶಕದಲ್ಲಿ ಜನರ ಕಲ್ಯಾಣಕ್ಕಾಗಿ ಜಾರಿಗೆ ತಂದ ಪ್ರಮುಖ ಯೋಜನೆಗಳನ್ನು ಪ್ರಚುರಪಡಿಸಲು ಜನಜಾಗೃತಿ ಸಮಾವೇಶವನ್ನು ದೇಶಾದ್ಯಂತ ನಡೆಸುತ್ತಿದ್ದು, ಐಐಸಿಸಿ ನಿರ್ದೇಶನದ ಮೇರೆಗೆ ತುಮಕೂರು ನಗರದ ಅಮಾನಿಕೆರೆು ಗಾಜಿನ ಮನೆಯಲ್ಲಿ ನವೆಂಬರ್ 21 ರಂದು ರಾಜ್ಯ ಮಟ್ಟದ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೂ ಮುನ್ನ ಮಹಾನಗರಪಾಲಿಕೆ ವೃತ್ತದಿಂದ ಕಾರ್ಯಕ್ರಮ ನಡೆಯುವ ಗಾಜಿನ ಮನೆಯವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.

ನಗರದ ಸಿದ್ಧಾರ್ಥ ಸಂಸ್ಥೆ ಆಡಳಿತಕಚೇರಿಯಲ್ಲಿ ಮಂಗಳವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1947 ರಿಂದ ದೇಶದಲ್ಲಿ ಕಾಂಗ್ರೇಸ್ ಪಕ್ಷವು ದೇಶ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿದ್ದಾಗ ಹಲವು ಜನಪರ ಕಾರ್ಯಕ್ರಮವನ್ನು ಮಾಡಿದ್ದು, ಕೇಂದ್ರದ ಬಿಜೆಪಿ ಸರಕಾರ ಅಜಾದಿ ಅಮೃತಮಹೋತ್ಸವದ ಹೆಸರಲ್ಲಿ ನಮ್ಮ ಕಾರ್ಯಕ್ರಮಗಳನ್ನು ತಮ್ಮ ಕಾರ್ಯಕ್ರಮವೆಂದು ಬಿಂಬಿಸಿ ಕಾಂಗ್ರೆಸ್ ಏನು ಮಾಡಿಲ್ಲವೆಂದು ಅಪಪ್ರಚಾರಮಾಡುತ್ತಿದೆ. ಪಕ್ಷವು ದೇಶದ ಜನರಿಗಾಗಿ ಮಾಡಿರುವ ಕಾರ್ಯಗಳೇನು ಎಂಬುದನ್ನು ಅರಿವುಮೂಡಿಸಲು ಈ ಜನಜಾಗೃತಿ ಸಮಾವೇಶವನ್ನು ರಾಜ್ಯದೆಲ್ಲೆಡೆ ಆಯೋಜಿಸಲಾಗುತ್ತಿದೆ. ತುಮಕೂರಿನಲ್ಲಿ ನ.21 ಭಾನುವಾರ ಕಾರ್ಯಕ್ರಮ ನಡೆಯಲಿದ್ದು,್ಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ , ಕೇಂದ್ರದ ಮಾಜಿ ಸಚಿವರಾದ ವೀರಪ್ಪಮೊಯಿಲಿ, ಮಲ್ಲಿಕಾರ್ಜುನಖರ್ಗೆ, ಕೆ.ಎಚ್. ಮುನಿಯಪ್ಪ ಸೇರಿ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು, ಹತ್ತು ಸಾವಿರ ಕಾರ್ಯಕರ್ತರು ಪಾಲ್ಗೊಳ್ಳುವರು ಎಂದರು.

ಸದಸ್ಯತ್ವ ಅಭಿಯಾನ: 2022ರ ಸೆಪ್ಟಂಬರ್ 22 ರಂದು ಎ.ಐ.ಸಿಸಿ ಅಧ್ಯಕ್ಷರ ಚುನಾವಣೆ ನಡೆಯಲಿದ್ದು ಆ ವೇಳೆಗೆ ಬ್ಲಾಕ್, ಜಿಲ್ಲಾ ಮತ್ತು ರಾಜ್ಯ ಮಟ್ಟದ ಪಕ್ಷದ ಪದಾಧಿಕಾರಿಗಳ ಚುನಾವಣೆಗಳನ್ನು ನಡೆಸಲು ಕ್ರಮವಹಿಸಲಾಗಿದೆ. ನ.14ರಿಂದಸದಸ್ಯತ್ವ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದು, ಜಿಲ್ಲೆಯಲ್ಲೂ ಕಾಂಗ್ರೆಸ್ ಪಕ್ಷದ ತತ್ವಸಿದ್ದಾಂತ ಒಪ್ಪಿ ಬರುವವರು 5 ರೂ.ಶುಲ್ಕ ಪಾವತಿಸಿ ಸದಸ್ಯತ್ವ ಪಡೆಯಬಹುದು ಎಂದರು.
ವಿಧಾನಪರಿಷತ್ ಸ್ಥಳೀಯ ಸಂಸ್ಥೆ ಟಿಕೆಟ್‍ಗಾಗಿ ಜಿಲ್ಲೆಯಿಂದ ಐವರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅರ್ಜಿಸಲ್ಲಿಸಿದವರಲ್ಲೇ ಒಬ್ಬರು ಅಭ್ಯರ್ಥಿಯಾಗಲಿದ್ದಾರೆ. ನ.14ರ ಸಭೆಯಲ್ಲಿ ಅಭ್ಯರ್ಥಿ ವಿಚಾರದ ಬಗ್ಗೆ ರಣದೀಪ್‍ಸಿಂಗ್ ಸುರ್ಜಿವಾಲಾ ಬಳಿ ನಮ್ಮ ಅಭಿಪ್ರಾಯ ಮಂಡಿಸಲಾಗಿದೆ ಎಂದರು.

ಗೌಡರು ಟಿಕೆಟ್ ಕೇಳಿರುವುದರಲ್ಲಿ ತಪ್ಪಿಲ್ಲ: ಮಾಜಿ ಸಂಸದÀ ಮುದ್ದಹನುಮೇಗೌಡರಿಗೆ ಲೋಕಸಭೆ ಟಿಕೆಟ್ ಕೈ ತಪ್ಪಿದಕ್ಕೆ ಅವರಂತೆ ನಮಗೂ ಬೇಸರ ಆಗಿತ್ತು. ಆದರೆ ಅದು ನಾವು ತೆಗೆದುಕೊಂಡ ತೀರ್ಮಾನವಲ್ಲ. ಹೈಕಮಾಂಡ್ ಮಟ್ಟದಲ್ಲಿ ಆದ ತೀರ್ಮಾನ. ಪ್ರಸ್ತುತ ಕುಣಿಗಲ್ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತವನ್ನು ಗೌಡರು ವ್ಯಕ್ತಪಡಿಸಿದ್ದಾರೆ. ಅದರಲ್ಲಿ ತಪ್ಪಿಲ್ಲ. ಆದರೆ ಅಲ್ಲಿ ಹಾಲಿ ಕಾಂಗ್ರೆಸ್ ಶಾಸಕರಿದ್ದಾರೆ. ಎಲವನ್ನು ಲೆಕ್ಕಚಾರ ಹಾಕಿ ಚುನಾವಣೆ ಸಂದರ್ಭದಲ್ಲಿ ಪಕ್ಷದ ವರಿಷ್ಠರು ಟಿಕೆಟ್ ಯಾರಿಗೆಂದು ನಿರ್ಧಾರ ಮಾಡಲಿದ್ದಾರೆ. ಸಣ್ಣ ಪುಟ್ಟು ತಪ್ಪುಗಳಾಗಿದ್ದು ಅದನ್ನು ಸರಿಪಡಿಸಿ ಪಕ್ಷವನ್ನು ಮುಂಬರುವ ವಿಧಾನಸಭಾ ಚುನಾವಣೆಗೆ ಅಣಿಮಾಡುವುದು ನಮ್ಮ ಗುರಿಯಾಗಿದೆ ಎಂದರು.

ಹಂಸಲೇಖ ಅವರ ಹೇಳಿಕೆ ವಿವಾದ ಮುಗಿದ ಅಧ್ಯಾಯ ಎಂದ ಪರಮೇಶ್ವರ ಅವರು ಸಿದ್ದರಾಮಯ್ಯ ಅವರು ನಾನು ದಲಿತನೇ ಎಂಬ ಹೇಳಿಕೆಗೆ ಸಂಬಂಧಿಸಿದಂತೆ, ವರ್ಣಾಶ್ರಮ ಪದ್ದತಿಯಿಂದ ಸತ್ಯ ವಿವರಿಸುವ ಅಗತ್ಯವಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹಮದ್, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಶಾಸಕರಾದ ಷಡಕ್ಷರಿ, ಡಾ.ರಫೀಕ್ ಅಹಮದ್, ಎಸ್.ಷಫೀಅಹಮದ್, ಜಿಲ್ಲಾಧ್ಯಕ್ಷ ರಾಮಕೃಷ್ಣ, ಕಾರ್ಯಾಧ್ಯಕ್ಷ ಸಾಸಲು ಸತೀಶ್, ಮುಖಂಡರಾದ ಮುರಳಿಧರ ಹಾಲಪ್ಪ , ಹೊನ್ನಗಿರಿಗೌಡ, ರಾಯಸಂದ್ರ ರವಿ, ಶಶಿ ಹುಲಿಕುಂಠೆಮಠ್, ಇತರರು ಭಾಗವಹಿಸಿದ್ದರು. ನಂತರ ನಡೆದ ಸಭೆಯಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಪಾಲ್ಗೊಂಡರು.

ನಾನು ಸಹ ಸಿಎಂ ರೇಸ್‍ನಲ್ಲಿರುವೆ
ದಲಿತರು ಮುಖ್ಯಮಂತ್ರಿಯಾಗಬೇಕು ಎಂಬ ಕೂಗಿಗೆ ಸಂಬಂಧಿಸಿದ ಪ್ರಶ್ನೆಗೆ ಅದರಲ್ಲೇ ತಪ್ಪೇನಿಲ್ಲ. ನಾನು ಸಹ ಸಿಎಂ ರೇಸ್‍ನಲ್ಲಿರುವೆ. ಆದರೆ ಪ್ರಸ್ತುತಪÀಕ್ಷಕ್ಕೆ ಮುಖ್ಯಮಂತ್ರಿ ಯಾರಾಗಬೇಕು ಎಂಬುದು ಮುಖ್ಯವಲ್ಲ, ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು ಮುಖ್ಯ.ಆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಯ ಕೆಲಸ ಮಾಡಲಾಗುತ್ತಿದೆ. ಪಕ್ಷಬಹುಮತ ಬಂದ ನಂತರ ಶಾಸಕಾಂಗ ಸಭೆ ನೂತನ ಮುಖ್ಯಮಂತ್ರಿಯನ್ನು ಚುನಾವಣೆ ಮೂಲಕ ಇಲ್ಲವೇ ಹೈಕಮಾಂಡ್ ವಿವೇಚನೆಯ ನಿರ್ಣಯಕ್ಕೆ ಬಿಟ್ಟು ನೇಮಕವಾಗಲಿದೆ. ಕಳೆದ ಬಾರಿ ಸಿದ್ದರಾಮಯ್ಯ ಸಹ ಶಾಸಕಾಂಗ ಸಭೆಯಲ್ಲಿ ಚುನಾವಣೆ ಮೂಲಕ ಆಯ್ಕೆಯಾದವರು ಎಂದರು.

ಬಿಟ್‍ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ವೃಥಾ ಆರೋಪ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಹಗರಣ ನಡೆದಿಲ್ಲವೆಂದರೆ ಆರೋಪಿ ಶ್ರೀಕಿಯನ್ನು ಏಕೆ ಬಂಧಿಸಲಾಯಿತು. ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪ್ರಕರಣದ ಆರೋಪಿ ಶ್ರೀಕಿಯ ಆಡಿಯೋ ಸಂದೇಶದಲ್ಲಿ ಹಗರಣದಲ್ಲಿ ಹಲವು ರಾಜಕೀಯ ನಾಯಕರು, ಉನ್ನತ ಅಧಿಕಾರಿಗಳು ಭಾಗಿಯಾಗಿದ್ದಾರೆಂದು ಆರೋಪಿಸಿದ್ದು, ಈ ಕುರಿತು ಸತ್ಯವೇನೆಂಬುದನ್ನು ತನಿಖೆ ಮೂಲಕ ಬಿಜೆಪಿ ಸರಕಾರ ಮುಂದಿಡಲಿ. 2014ರಿಂದ ಸ್ವಾತಂತ್ರ್ಯ ಸಿಕ್ಕಿದೆ ಎಂಬ ನಟಿ ಕಂಗಾನಾ ಹೇಳಿಕೆ ಅಪಕ್ವತೆಯಿಂದ ಕೂಡಿದ್ದು, ಆಕೆಗೆ ಪದ್ಮಶ್ರೀಕೊಟ್ಟಿದ್ದು ದುರದೃಷ್ಟಕರ.
-ಡಾ.ಜಿ.ಪರಮೇಶ್ವರ, ಮಾಜಿ ಡಿಸಿಎಂ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap